ಯಾದಗಿರಿ: ಕೊಟ್ಟ ಹಣವನ್ನು ವಾಪಸ್ ನೀಡದೇ ಸ್ನೇಹಿತ ಮೋಸ ಮಾಡಿದ್ದಾನೆಂದು ಮನನೊಂದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ನಡೆದಿದೆ.
ರಾಮ ಮೋಹನ್ (55) ಆತ್ಮಹತ್ಯೆ ಮಾಡಿಕೊಂಡ ಆಂಧ್ರ ಪ್ರದೇಶ ಮೂಲದ ರೈತ. ಮೃತ ರೈತ ಇತ್ತೀಚೆಗೆ ತನ್ನ ಸ್ನೇಹಿತ ರಮೇಶ್ ಎಂಬುವವರಿಗೆ 4.5 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದರಂತೆ. ಈ ದುಡ್ಡನ್ನು ವಾಪಸ್ ಕೇಳಿದರೆ ಕೊಡದೆ ಸ್ನೇಹಿತ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ರೈತ ಡೆತ್ನೋಟ್ ಬರೆದಿಟ್ಟು ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post