ಬೆಂಗಳೂರು: ಬಳ್ಳಾರಿ ಜಿಲ್ಲೆ ರಾಮದುರ್ಗ ತಾಲೂಕಿನ ಚುಚ್ಚುಮದ್ದು (ಎಂಆರ್ ಲಸಿಕೆ) ಪಡೆದ ನಂತರ ನಿಗೂಢವಾಗಿ ಅಸ್ವಸ್ಥಗೊಂಡಿದ್ದ ಮಕ್ಕಳ ಸಾವಿನ ಸಂಖ್ಯೆ ಏರಿಕೆ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್.. ಬೆಳಗಾವಿ ಜಿಲ್ಲೆಯ ಬಿಮ್ಸ್ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 3 ಹಸುಗೂಸುಗಳು ನಿಗೂಢವಾಗಿ ಸಾವನ್ನಪ್ಪಿವೆ. ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲು ಸೂಚನೆ ನೀಡಲಾಗಿದೆ. ಅಲ್ಲಿನ ಎಎನ್ಎಂ ಮತ್ತು ಫಾರ್ಮಸಿಸ್ಟ್ ಅವರನ್ನ ತಕ್ಷಣ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಈಗ ಅವರು ಅಮಾನತು ಆಗುತ್ತಾರೆ ಎಂದರು.
ಅಲ್ಲದೇ ನೋಡಲ್ ಆಫೀಸ್ ತನಿಖೆಗೆ ಕಳುಹಿಸುತ್ತಿದ್ದೇನೆ. ಪ್ರೊಟೊಕಾಲ್ ಪ್ರಕಾರ ಚಿಕಿತ್ಸೆ ನೀಡಿದ್ದಾರಾ ಎಂದು ತನಿಖೆ ಮಾಡಲಾಗುತ್ತೆ. ಎರಡು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಿದ್ದೇನೆ. ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ನಿಂದ ಸತ್ತಿರುವ ಬಗ್ಗೆ ವರದಿ ಆಗಿದೆ. ಆದರೂ ಮತ್ತೊಂದು ತನಿಖೆಗೆ ಸೂಚನೆ ನೀಡಿದ್ದೇನೆ. ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಮಗು ನಿಗೂಢ ಸಾವು; ಆರೋಗ್ಯ ಅಧಿಕಾರಿಗಳ ಯಡವಟ್ಟೇ ಅನಾಹುತಕ್ಕೆ ಕಾರಣ?
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post