ಬೆಂಗಳೂರು: ಸದ್ಯ ನಗರದಲ್ಲಿ ಜಾರಿಯಲ್ಲಿರುವ ನೈಟ್ ಕರ್ಫ್ಯೂ ನಿಯಮಗಳನ್ನು ಇನ್ನು ಒಂದು ವಾರ ಪಾಲಿಸಬೇಕು. ಒಂದು ವಾರ ಮುಂದುವರೆಸಿದ್ರೆ ಸಾಕು ಅಂತಾ ನಿನ್ನೆ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆಯುಕ್ತರು, ಈಗ ನಿತ್ಯ ಪಾಸಿಟಿವ್ ಕೇಸ್ಗಳು ಹೆಚ್ಚಾಗ್ತಾಯಿದೆ. ಎರಡನೇ ಅಲೆಗಿಂತ ಸೋಂಕು ಹರಡುವುದು ತೀವ್ರವಾಗಿದೆ. ಈಗಿನ ಕೊರೊನಾ ರೋಗ ಲಕ್ಷಣ ತೀವ್ರತೆ ಇಲ್ಲ. ಕಂಟ್ರೋಲ್ ರೂಂಮ್ ನಿಂದ ಎಲ್ಲಾ ಮಾನಿಟರ್ ಮಾಡ್ತಾಯಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲೂ ದಾಖಲಾಗಿರುವ ಸೋಂಕಿತರಿಗೆ ಯಾವುದೇ ಸಮಸ್ಯೆ ಇಲ್ಲ. ಸೋಂಕಿನ ಸಂಖ್ಯೆ ಹೆಚ್ಚಿದ್ರೂ 1,600 ಮಂದಿ ಮಾತ್ರ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರದ ಕಡೆಯಿಂದ 600 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1000 ಜನ ಸ್ವಂತ ಖರ್ಚಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ರೋಗ ತಡೆಯಲು ವ್ಯವಸ್ಥೆ ಸದೃಡವಾಗಿದೆ. ಮಾಸ್ಕ್ ಆಚರಣೆ ಮಾಡಲೇಬೇಕು, ಔಷಧಿ ಕೊರತೆ ಕಾಣ್ತಾಯಿಲ್ಲ. ಈ ಹಿನ್ನಲೆ ಒಂದು ವಾರಕ್ಕಷ್ಟೇ ಈಗಿರೋ ರೂಲ್ಸ್ ಸಾಕು.. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಈಗಿರುವ ಎಲ್ಲಾ ನಿರ್ಬಂಧಗಳನ್ನು ಈ ವಾರಕ್ಕೆ ಅಂತ್ಯಗೊಳಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.
ಹೋಂ ಐಸೋಲೇಶನ್ ಅವಧಿ ಕಟ್ ಆಫ್..
ಸದ್ಯ ಹೋಮ್ ಐಸೋಲೇಶನ್ ನಲ್ಲೇ ಹೆಚ್ಚು ಮಂದಿ ಗುಣಮುಖವಾಗುತ್ತಿರುವ ಕಾರಣ ಹೋಮ್ ಐಸೋಲೇಶನ್ ಅವಧಿಯನ್ನ ಪಾಲಿಕೆ ಕಡಿತಗೊಳಿಸಿದೆ. ಹತ್ತು ದಿನಗಳಿಂದ 7 ದಿನಗಳಿಗೆ ಹೋಮ್ ಐಸೋಲೇಶನ್ ಅವಧಿ ಕಡಿತ ಮಾಡಲಾಗಿದೆ. ಸೋಂಕು ತಗುಲಿ ಏಳನೇ ದಿನಕ್ಕೆ ಸೋಂಕಿತರು ಐಸೋಲೇಷನ್ ಕ್ವಿಟ್ ಮಾಡಬಹುದು. ಏಳನೇ ದಿನಕ್ಕೆ ಸೋಂಕಿತರು ಮತ್ತೆ ಕೊರೊನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಏಳನೇ ದಿನಕ್ಕೆ ಕೊರೊನಾ ಪರೀಕ್ಷೆ ಮಾಡಿಸದಯೇ ಹೋಮ್ ಐಸೋಲೇಶನ್ ಕ್ವಿಟ್ ಮಾಡಬಹುದಾಗಿದೆ ಎಂದು ಹೇಳಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post