ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಿರೋದು, ಹಳೆ ವಿಷ್ಯ. ಇದೀಗ ಏಕದಿನ ಸರಣಿ ಮೇಲೆ ಫೋಕಸ್ ಮಾಡ್ತಿರುವ ಟೀಮ್ ಇಂಡಿಯಾ, ಆಫ್ರಿಕನ್ನರ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಅಷ್ಟಕ್ಕೂ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ಆತ್ಮವಿಶ್ವಾಸ ಹೆಚ್ಚೋಕೆ ಕಾರಣವೇನು? ಅನ್ನೋದ್ರ ವಿವರ ಇಲ್ಲಿದೆ.
29 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ, ಟೆಸ್ಟ್ ಸರಣಿ ಗೆಲ್ಲೋ ಕನಸು ಕಂಡಿತ್ತು. ಆದ್ರೆ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ, ಕೊಹ್ಲಿ ಬಾಯ್ಸ್ ಕನಸು ಭಗ್ನಗೊಂಡಿತು. ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ, ಟೀಮ್ ಇಂಡಿಯಾ ಫೇವರಿಟ್ಸ್ ಎನಿಸಿಕೊಂಡಿತ್ತು. ಆದರೆ ಬ್ಯಾಟಿಂಗ್ ವೈಫಲ್ಯದಿಂದ ಕೊಹ್ಲಿ ಪಡೆ, ಸರಣಿಯನ್ನ ಕೈಚೆಲ್ಲಬೇಕಾಯ್ತು.
ಇದೀಗ ಟೆಸ್ಟ್ ಸರಣಿ ಮುಗಿದ ಅಧ್ಯಾಯ. ಆದ್ರೆ ಟೆಸ್ಟ್ ಸರಣಿಯಲ್ಲಿ ಹೋದ ಮಾನವನ್ನ ಟೀಮ್ ಇಂಡಿಯಾ, ಏಕದಿನ ಸರಣಿಯಲ್ಲಿ ಹುಡುಕಲು ಹೊರಟಿದೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ, ನೂತನ ನಾಯಕ ಕೆ.ಎಲ್.ರಾಹುಲ್ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಳ್ಳೋ ತವಕದಲ್ಲಿದೆ. ಆದ್ರೆ ಸರಣಿಗೂ ಮುನ್ನ ಫೇವರಿಟ್ಸ್ ಎನಿಸಿಕೊಂಡಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿದೆ. ಅದಕ್ಕೆ ಕಾರಣ ಕೂಡ ಇದೆ.
2017-18ರಲ್ಲಿ ಟೀಮ್ ಇಂಡಿಯಾ ಭರ್ಜರಿ ಆಟ..!
ಹೌದು..! 2017-18ರ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ, ಬೊಂಬಾಟ್ ಪರ್ಫಾಮೆನ್ಸ್ ನೀಡಿತ್ತು. 6 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ, 5-1 ಅಂತರದಿಂದ ಗೆದ್ದು ಸರಣಿಯನ್ನ ತನ್ನದಾಗಿಸಿಕೊಂಡಿತು. ಜೊಹಾನ್ಸ್ಬರ್ಗ್ ಏಕದಿನ ಪಂದ್ಯ ಬಿಟ್ರೆ, ಡರ್ಬನ್, ಸೆಂಚೂರಿಯನ್, ಕೇಪ್ಟೌನ್ ಮತ್ತು ಪೋರ್ಟ್ ಎಲಿಝಬೆತ್ನಲ್ಲಿ, ಭರ್ಜರಿ ಗೆಲುವು ದಾಖಲಿಸಿತ್ತು. ಇದೇ ಈಗ ಟೀಮ್ ಇಂಡಿಯಾ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಡೆಲ್ಲಿ ಬಾಯ್ಸ್ ದರ್ಬಾರ್
ಕಳೆದ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ರು. ಕೊಹ್ಲಿ 6 ಪಂದ್ಯಗಳಲ್ಲಿ 3 ಶತಕ ಮತ್ತು 1 ಅರ್ಧಶತಕ ಸಿಡಿಸಿದ್ರು. 186ರ ಸರಾಸರಿಯಲ್ಲಿ 558 ರನ್ಗಳಿಸಿದ್ರು. ಧವನ್ 1 ಶತಕ ಮತ್ತು 3 ಅರ್ಧಶತಕಗಳನ್ನ ಸಿಡಿಸಿ, 323 ರನ್ ಕಲೆ ಹಾಕಿದ್ರು. ಡೆಲ್ಲಿ ಬಾಯ್ಸ್ ದರ್ಬಾರ್ನಿಂದ ಟೀಮ್ ಇಂಡಿಯಾ, ಸರಣಿ ಗೆದ್ದಿತ್ತು. ಈಗ ಧವನ್ ಸಹ ತಂಡಕ್ಕೆ ವಾಪಸಾಗ್ತಿರೋದ್ರಿಂದ, ತಂಡದ ಬ್ಯಾಟಿಂಗ್ ಬಲ ಹೆಚ್ಚಿಸಿದೆ.
ತಂಡದ ಆತ್ಮವಿಶ್ವಾಸ ಹೆಚ್ಚಿಸಿದ ಚಹಲ್ ಕಮ್ಬ್ಯಾಕ್
ವೈಟ್ಬಾಲ್ ಕ್ರಿಕೆಟ್ನಲ್ಲಿ ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್, ಮ್ಯಾಚ್ ವಿನ್ನರ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಶ್ರೀಲಂಕಾ ಪ್ರವಾಸದ ಬಳಿಕ ಇದೀಗ ದಕ್ಷಿಣ ಆಫ್ರಿಕಾ ಸರಣಿ ಆಡ್ತಿರುವ ಚಹಲ್, ಸ್ಟ್ರಾಂಗ್ ಕಮ್ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದಾರೆ. 2017-18ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಚಹಲ್, 6 ಏಕದಿನ ಪಂದ್ಯಗಳನ್ನ ಆಡಿ, 16 ವಿಕೆಟ್ ಕಬಳಿಸಿದ್ರು. 1 ಬಾರಿ 5 ವಿಕೆಟ್ ಸಹ ಪಡೆದಿದ್ದ ಚಹಲ್ ಎಕನಾಮಿ ರೇಟ್, ಜಸ್ಟ್ ಫೈವ್.
ಇದೆಲ್ಲದರ ಜೊತೆಗೆ ನಮ್ಮ ಹೆಮ್ಮೆಯ ಕನ್ನಡಿಗ ಕೆ.ಎಲ್.ರಾಹುಲ್ಗೆ, ತಂಡದ ಸಾರಥ್ಯ ಸಹ ನೀಡಲಾಗಿದೆ. ಇದು ರಾಹುಲ್ ಜೋಷ್ ಹೆಚ್ಚಿಸಿರೋದಂತೂ ಸುಳ್ಳಲ್ಲ. ಹೀಗಾಗಿ ರಾಹುಲ್, ಏಕದಿನ ಸರಣಿ ಗೆದ್ದು ನಾಯಕನಾಗಿಯೂ, ಪಾಸ್ ಆಗಲು ಹೊರಟಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post