ಚಂದನವನದ ಬ್ಯುಸಿ ತಾರೆ ಪ್ರಜ್ವಲ್‌ದೇವರಾಜ್ ಒಂದರ ನಂತರ ಮತ್ತೊಂದು ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಆ ಸಾಲಿಗೆ ಹೆಸರಿಡದ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಮಂಗಳವಾರ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ಸಮಾರಂಭವು ಸರಳವಾಗಿ ನಡೆಯಿತು.
ಈ ಚಿತ್ರವನ್ನು ಫಿಲ್ಮಿ ಫೆಲೋ ಸ್ಟುಡಿಯೋಸ್ ಅರ್ಪಿಸುತ್ತಿದ್ದು, ಆಲ್ ಓಶನ್ ಮಿಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ್ಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಬಾಲಿವುಡ್‌ನ ಅಧಿರ್‌ಭಟ್ ಬರೆದಿರುವ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಕಥೆಗೆ ಪನ್ನಗಭರಣ ಮೊದಲಬಾರಿ ಪ್ರಜ್ವಲ್‌ದೇವರಾಜ್‌ಗೆ ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಪ್ರಜ್ವಲ್ ’ಮಾಫಿಯಾ’, ’ಗಣ’ ಚಿತ್ರಗಳಲ್ಲಿ ತೊಡಗಿಕೊಂಡಿದ್ದು, ಇವುಗಳನ್ನು ಮುಗಿಸಿದ ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಂಗೀತ ವಾಸುಕಿವೈಭವ್, ಛಾಯಾಗ್ರಹಣ ವಿರಾಜ್‌ಸಿಂಗ್, ಕಾರ್ಯಕಾರಿ ನಿರ್ಮಾಪಕರಾಗಿ ಪ್ರವೀಣ್‌ಯಾದವ್ ಅವರು ನಿರ್ವಹಿಸುತ್ತಿದ್ದಾರೆ. ಉಳಿದಂತೆ ತಾರಾಗಣ, ತಂತ್ರಜ್ಘರ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಂಡವು ಹೇಳಿಕೊಂಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post