ಭಾರತ – ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಕೆಲವರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಈ ಸರಣಿಯಲ್ಲಿ ಅತ್ಯುದ್ಭುತ ಪ್ರದರ್ಶನ ನೀಡಿದ್ರೆ ಮಾತ್ರ ಕ್ರಿಕೆಟ್ ಕರಿಯರ್ ಉಳಿಯಲಿದೆ. ಎಡವಿದ್ರೆ ಕರಿಯರ್ ಖತಂ ಆಗೋದು ಬಹುತೇಕ ಖಚಿತವಾಗಿದೆ.
ಪ್ರತಿಷ್ಠೆ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಏಕದಿನ ಸರಣಿ ಮೇಲೆ ಭಾರತ ಕಣ್ಣಿಟ್ಟಿದೆ. ಈ ಸರಣಿ ಗೆದ್ದು ಸೇಡು ತೀರಿಸಿಕೊಳ್ಳಲು ತಯಾರಿ ನಡೆಸ್ತಿದೆ. ಅದಕ್ಕಾಗಿ ಟೀಮ್ ಇಂಡಿಯಾದ ಆಟಗಾರರು ಭರ್ಜರಿ ಸಿದ್ಧತೆ ಕೂಡ ಮಾಡಿಕೊಳ್ತಿದ್ದಾರೆ. ಇದರ ನಡುವೆಯೇ ಪ್ಲೇಯಿಂಗ್ ಇಲೆವೆನ್ ಆಯ್ಕೆಯ ಚರ್ಚೆಯೂ ಹುಟ್ಟಿದ್ದು, ಸ್ಥಾನಕ್ಕಾಗಿ ಪೈಪೋಟಿ ಹೆಚ್ಚಾಗಿದೆ. ಬಹುತೇಕ ಅನುಭವಿಗಳಿಗೆ ಮಣೆ ಹಾಕೋ ಸಾಧ್ಯತೆ ದಟ್ಟವಾಗಿದ್ದು, ಇದೇ ಅವರಿಗೆ ಕೊನೆಯ ಅವಕಾಶವೂ ಆಗಿರಲಿದೆ ಎಂದು ಹೇಳಲಾಗ್ತಿದೆ.
- ನಂಬರ್ 01 -ಶಿಖರ್ ಧವನ್
ಕೊನೆ ಅವಕಾಶದ ಪಟ್ಟಿಯಲ್ಲಿ ಮೊದಲ ಹೆಸರು ಇರೋದೇ ಗಬ್ಬರ್ ಶಿಖರ್ ಧವನ್ರದ್ದು. ಸದ್ಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್ನಿಂದ ದೂರವಾಗಿರುವ ಧವನ್ ಫಾರ್ಮ್ ಸಮಸ್ಯೆಗೆ ಸಿಲುಕಿದ್ದು, ಲಯ ಕಂಡುಕೊಳ್ಳಲು ಪರದಾಡ್ತಿದ್ದಾರೆ. ಇತ್ತೀಚೆಗೆ ಮುಗಿದ ವಿಜಯ್ ಹಜಾರೆ ಟೂರ್ನಿಯಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಆದರೂ ಮಣೆ ಹಾಕಲಾಗಿದ್ದು, ಈ ಪ್ರವಾಸದಲ್ಲಿ ಮತ್ತೆ ವೈಫಲ್ಯ ಅನುಭವಿಸಿದ್ರೆ, ಧವನ್ಗೆ ಪರ್ಮನೆಂಟ್ ಗೇಟ್ ಪಾಸ್ ಗ್ಯಾರಂಟಿ ಎನ್ನಲಾಗ್ತಿದೆ.
Preps in full swing 💪
1⃣ day to for the 1st #SAvIND ODI 👌#TeamIndia pic.twitter.com/C6IlWxi3Lz
— BCCI (@BCCI) January 18, 2022
- ನಂಬರ್ 02 -ಭುವನೇಶ್ವರ್ ಕುಮಾರ್
ಸ್ವಿಂಗ್ ಮಾಸ್ಟರ್ ಎಂದೇ ಖ್ಯಾತಿ ಹೊಂದಿದ್ದ ಭುವನೇಶ್ವರ್ ಕುಮಾರ್ ಸ್ವಿಂಗ್ ಎಲ್ಲೂ ವರ್ಕೌಟ್ ಆಗ್ತಿಲ್ಲ. ಕಳಪೆ ಪ್ರದರ್ಶನದ ಹೊರತಾಗಿಯೂ ಟಿ20 ವಿಶ್ವಕಪ್ಗೆ ಮಣೆ ಹಾಕಲಾಗಿತ್ತು. ಆದ್ರೆ ಅಲ್ಲೂ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ರು. ವಿಶ್ವಕಪ್ ಮಾತ್ರವಲ್ಲ, ಅದರ ಹಿಂದಿನ ಸರಣಿಗಳಲ್ಲೂ ಭುವಿದು ಇದೇ ಕಥೆ. ಇನ್ನು ವಿಜಯ್ ಹಜಾರೆಯಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಆಫ್ರಿಕಾ ಸರಣಿ ಭುವಿ ಪಾಲಿನ ಅಳಿವು-ಉಳಿವಿನ ಸರಣಿಯಾಗಿದೆ.
- ನಂಬರ್ 03 -ಆರ್.ಅಶ್ವಿನ್
ಕಳೆದ ಕೆಲ ವರ್ಷಗಳಿಂದ ಟೆಸ್ಟ್ಗೆ ಮಾತ್ರ ಸೀಮಿತವಾಗಿದ್ದ ರವಿಚಂದ್ರನ್ ಅಶ್ವಿನ್, ಇದೀಗ ಸೀಮಿತ ಓವರ್ಗಳ ತಂಡಕ್ಕೆ ಕಮ್ಬ್ಯಾಕ್ ಮಾಡ್ತಿದ್ದಾರೆ. ಆದ್ರೆ, 4 ವರ್ಷ 6 ತಿಂಗಳ ಬಳಿಕ ಏಕದಿನ ಕ್ರಿಕೆಟ್ಗೆ ಮರಳುತ್ತಿರೋ ಅಶ್ವಿನ್ ಮುಂದೆ, ಸಾಮರ್ಥ್ಯ ಸಾಬೀತು ಪಡಿಸೋ ಅನಿವಾರ್ಯತೆಯಿದೆ. ಇರೋ ಪೈಪೋಟಿಯ ನಡುವೆ ಸ್ಥಾನ ಉಳಿಸಿಕೊಳ್ಳಬೇಕು ಅಂದ್ರೆ, ಪರಿಮಾಣಾತ್ಮಕ ಪ್ರದರ್ಶನ ನೀಡಬೇಕಿದೆ.
— BCCI (@BCCI) January 18, 2022
- ನಂಬರ್ 04 -ಜಯಂತ್ ಯಾದವ್
ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಇಂಜುರಿ ಹಿನ್ನೆಲೆ ಜಯಂತ್ ಯಾದವ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳೊದೇ ಅನುಮಾನ. ಸದ್ಯ ಜಯಂತ್ ತಂಡದ ಪರ ಒಂದು ಆಡಿದ್ದಾರೆ. ಅದು ಕೂಡ 2016ರಲ್ಲಿ. ಬರೋಬ್ಬರಿ 5 ವರ್ಷಗಳ ನಂತರ ತಂಡಕ್ಕೆ ಮರಳುತ್ತಿರುವ ಜಯಂತ್, ಒಂದು ವೇಳೆ ಅವಕಾಶ ಪಡೆದುಕೊಂಡ್ರೆ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲೇಬೇಕು. ಆಗ ಮಾತ್ರ ಸ್ಥಾನ ಭದ್ರಪಡಿಸಿಕೊಳ್ಳೋಕೆ ಸಾಧ್ಯ.
ತಂಡದಲ್ಲಿ ಯುವ ಆಟಗಾರರು ಹಾಗೂ ಅನುಭವಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ. ಹಾಗಾಗಿ ಈ ನಾಲ್ವರು ಆಟಗಾರರಿಗೆ ತಂಡದಲ್ಲಿ ಖಾಯಂ ಸ್ಥಾನ ಬೇಕಂದ್ರೆ, ಅತ್ಯದ್ಭುತ ಪ್ರದರ್ಶನ ನೀಡೋದು ಅನಿವಾರ್ಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post