ವಿರಾಟ್ ಕೊಹ್ಲಿ ಇನ್ಮುಂದೆ ತನ್ನ ಗರ್ವವನ್ನ ಬಿಟ್ಟು ಯುವ ಆಟಗಾರರ ಕೆಳಗಡೆ ಆಡಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ಸಿಗೆ ವಿರಾಟ್ ಕೊಹ್ಲಿ ವಿದಾಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕಪಿಲ್ ದೇವ್, ನಾನು ವಿರಾಟ್ ಕೊಹ್ಲಿಯ ನಿರ್ಧಾರವನ್ನ ಸ್ವಾಗತಿಸುತ್ತೇನೆ. ಟಿ-20 ನಾಯಕತ್ವ ತ್ಯಜಿಸಿದ ಬಳಿಕ ಕಠಿಣ ಹಾದಿಯಲ್ಲಿದ್ದಾರೆ. ವಿರಾಟ್ ಕೊಹ್ಲಿ ಈಗ ತನ್ನ ಗರ್ವವನ್ನ ಬಿಡಬೇಕು. ಸುನೀಲ್ ಗವಾಸ್ಕರ್ ನನ್ನ ನಾಯಕತ್ವದಡಿಯಲ್ಲಿ ಆಡಿದ್ರು. ನಾನು ಶ್ರೀಕಾಂತ್ ಹಾಗೂ ಅಜರುದ್ದೀನ್ ಕೆಳಗಡೆ ಆಡಿದ್ದೆ. ಈಗ ಕೊಹ್ಲಿ ತನ್ನ ಗರ್ವವನ್ನ ಬಿಟ್ಟು ಯುವ ಆಟಗಾರರ ಕೆಳಗಡೆ ಆಡಬೇಕು. ಜೊತೆಗೆ ಯುವ ನಾಯಕನಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳೊದ್ರೊಂದಿಗೆ ವಿರಾಟ್ ಕೊಹ್ಲಿ ನಾಯಕನಾಗಿ ಮೂರು ಮಾದರಿಯಿಂದ ಕೊಹ್ಲಿ ಕೆಳಗಿಳಿದಂತಾಗಿದೆ. ಇನ್ಮುಂದೆ ಕೊಹ್ಲಿ ಒಬ್ಬ ಸಾಮಾನ್ಯ ಆಟಗಾರನಷ್ಟೇ. ಕಳೆದ ಕೆಲ ವರ್ಷಗಳಿಂದ ಕಿಂಗ್ ಆಗಿ ಮೆರೆದ ವಿರಾಟ್, ಅಧಿಕಾರವಿಲ್ಲದೇ ತಂಡದಲ್ಲಿ ಹೇಗೆ ಇರ್ತಾರೆ ಅನ್ನೋದೇ ಕುತೂಹಲ ಮೂಡಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post