ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವೆ ನಡೆದ ಐದು ಪಂದ್ಯಗಳ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮಿನ್ಸ್ ಪಡೆ ಭರ್ಜರಿ ಗೆಲುವು ದಾಖಲಿಸಿದೆ. ಒಂದೇ ಒಂದು ಪಂದ್ಯವನ್ನೂ ಗೆಲ್ಲಲು ಸಾಧ್ಯವಾಗದ ಇಂಗ್ಲೆಂಡ್, 4-0 ಅಂತರದಲ್ಲಿ ಹೀನಾಲು ಸೋಲು ಕಂಡಿದ್ದು, ಒಂದು ಪಂದ್ಯದಲ್ಲಿ ಮಾತ್ರ ಡ್ರಾ ಸಾಧಿಸಲು ಯಶಸ್ಸು ಕಂಡಿತು. ಆದರೆ ಕಳಪೆ ಪ್ರದರ್ಶನ ನೀಡಿದ ಇಂಗ್ಲೆಂಡ್ ವಿರುದ್ಧ ತಮ್ಮ ದೇಶದ ಮಾಜಿ ಕ್ರಿಕೆಟಿಗರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು.
ಜೋ ರೂಟ್ ಅವರನ್ನು ನಾಯಕತ್ವದಿಂದ ಅವರನ್ನು ಕಿತ್ತು ಹಾಕಿ ಎಂದೆಲ್ಲಾ ಒತ್ತಾಯ ಮಾಡಿದ್ದರು. ಇದೀಗ ಮತ್ತೊಂದು ವಿಷಯಕ್ಕೆ ಜೋ ರೂಟ್ ವಿರುದ್ಧ ಹರಿಹಾಯ್ದಿದ್ದಾರೆ. ಆ್ಯಷಸ್ ಟೆಸ್ಟ್ ಸರಣಿ ಸೋತರೂ ಆಸ್ಟ್ರೇಲಿಯಾ ಆಟಗಾರರ ಜೊತೆ ಪಾರ್ಟಿ ಮಾಡಿರುವ ಜೋ ರೂಟ್ ಅವರ ವಿಡಿಯೋವೊಂದು ವೈರಲ್ ಆಗ್ತಿದೆ.
Police moving on early morning Ashes party. Story on https://t.co/fDqIhz1nzH #ashes @9NewsAUS pic.twitter.com/9XC39GoWUv
— Tim Arvier (@TimArvier9) January 18, 2022
ಈ ವಿಡಿಯೋ ನೋಡಿದ ಅಭಿಮಾನಿಗಳು, ಜೋ ರೂಟ್ ವಿರುದ್ಧ ಕಿಡಿಕಾರಿದ್ದಾರೆ. ಬದ್ದ ಎದುರಾಳಿ ವಿರುದ್ಧ ಸರಣಿ ಸೋತಿರುವ ಯಾವುದೇ ಬೇಸರ ಅವರಲ್ಲಿ ಕಾಣುತ್ತಿಲ್ಲ. ಕುಡಿದು ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವ ಮೂಲಕ ಅವಮಾನ ಮಾಡಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post