ಬೆಂಗಳೂರು: ನಾವೆಲ್ಲ ಅಪ್ಪುನ ಜಾಸ್ತಿ ಪ್ರೀತಿಸೇ ಇಲ್ಲ ಎಂದು ರಾಘವೇಂದ್ರ ರಾಜ್ಕುಮಾರ್ ಬೇಸರ ವ್ಯಕ್ತಪಡಿಸಿದರು. ಈ ಸಂಬಂಧ ಮಾತನಾಡುತ್ತಾ ರಾಘಣ್ಣ ಈ ರೀತಿ ಹೇಳಿದ್ರು. ತಂದೆ ಅಭಿಮಾನಿಗಳನ್ನ ದೇವರು ಅಂದ್ರೂ. ಆದರೇ ಆ ಅಭಿಮಾನಿಗಳು ರಾಜ್ಕುಮಾರ್ ಮಗನನ್ನೇ ದೇವರು ಅಂದ್ಬಿಟ್ರೂ ಎಂದರು.
ನೋಡಿ ಅಭಿಮಾನಿಯೊಬ್ಬರು ಹಿಮಾಚಲ ಪ್ರದೇಶದಿಂದ ನಡ್ಕೊಂಡು ಸೈಕಲ್ನಲ್ಲಿ ಬಂದಿದ್ದಾರೆ. ಈಗಿನ ಕಾಲದಲ್ಲಿ ಜನ ಕಾರ್ನಲ್ಲಿ ಟ್ರೈನ್ನಲ್ಲಿ ಹೋಗೊದಿಕ್ಕೆ ಯೋಚ್ನೆ ಮಾಡ್ತಾರೆ. ಇವರು ಮಾತ್ರ ಅಷ್ಟು ದೂರದಿಂದ ಸೈಕಲ್ ಮೂಲಕ ಬಂದಿದ್ದಾರೆ. ಇವರ ಪ್ರೇರಣೆಯಿಂದ ಹಲವರು ನಡೆದುಕೊಂಡು ಬರ್ತಿದ್ದಾರೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post