ಬೆಂಗಳೂರು: ಕಾಂಗ್ರೆಸ್ ಯುವ ನಾಯಕ ಮೊಹಮ್ಮದ್ ನಲಪಾಡ್ ಹಾಗೂ ಅವರ ಬೆಂಬಲಿಗರಿಂದ ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ಆದರೆ ಈ ಆರೋಪವನ್ನ ಇದೀಗ ಸಿದ್ದು ಹಳ್ಳೇಗೌಡ ನಿರಾಕರಿಸಿದ್ದಾರೆ.
ಬಿಜೆಪಿ ಷಡ್ಯಂತ್ರ
ಗಲಾಟೆ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ. ನನ್ನ ಮೇಲೆ ಹಲ್ಲೆಯೇ ಆಗಿಲ್ಲ ಎಂದು ಸಿದ್ದು ಹಳ್ಳೇಗೌಡ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಒಂದನ್ನ ಬಿಡುಗಡೆ ಮಾಡಿರುವ ಸಿದ್ದುಹಳ್ಳೇಗೌಡ.. ಮಾಧ್ಯಮಗಳಲ್ಲಿ ನಲಪಾಡ್ ನನಗೆ ಹೊಡೆದಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಇದು ನೂರಕ್ಕೆ ನೂರರಷ್ಟು ಸುಳ್ಳು, ಸುಳ್ಳು. ತಲೆಗೆ ಹೊಡೆದಿದ್ದಾರೆ, ಮೂಗಿಗೆ ಹೊಡೆದಿದ್ದಾರೆ. ತುಟಿ ಹರಿದು ಹೋಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆಯಲ್ಲ. ಇದೆಲ್ಲ ಸುಳ್ಳು.
ಇದನ್ನೂ ಓದಿ: ಮೊಹಮ್ಮದ್ ನಲಪಾಡ್ರಿಂದ ಹಲ್ಲೆ ಆರೋಪ; ತುರ್ತು ವರದಿ ಕೇಳಿದ ಕೈ ಉಸ್ತುವಾರಿ ಸುರ್ಜೇವಾಲ
ನಾನು ಪ್ರತ್ಯಕ್ಷವಾಗಿ ಇದ್ದೇನೆ. ನಾನು ಮೀಟಿಂಗ್ ಮುಗಿಸಿಕೊಂಡು ಬಳ್ಳಾರಿಗೆ ಹೊರಟಿದ್ದೇನೆ. ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದು ಅವರು ಹೇಳಿದ್ದಾರೆ. ಇದು ಬಿಜೆಪಿ ಅವರು ಮಾಡುತ್ತಿರುವ ಷಡ್ಯಂತ್ರ. ನಾವೆಲ್ಲ ಅಣ್ಣತಮ್ಮಂದಿರರ ಥರಾ ಇದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಯುವ ನಾಯಕ ನಲಪಾಡ್ ವಿರುದ್ಧ ಹಲ್ಲೆ ಆರೋಪ; ಸ್ವಪಕ್ಷೀಯನ ಮೇಲೆಯೇ ಕೈ?
ಇದನ್ನೂ ಓದಿ: ಅಧ್ಯಕ್ಷ ಸ್ಥಾನ ತಪ್ಪಿಸಲಿಕ್ಕಾಗಿ ನನ್ನ ವಿರುದ್ಧ ಪಿತೂರಿ-ಸ್ವ ಪಕ್ಷೀಯರ ವಿರುದ್ಧವೇ ನಲಪಾಡ್ ಗಂಭೀರ ಆರೋಪ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post