ಇಂದಿನಿಂದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟಿ20 ಟೂರ್ನಿ ಆರಂಭವಾಗಲಿದೆ. ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಶೋಯಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟಿಗರು ಮರಳಿ ಕಣಕ್ಕೆ ಇಳಿಯಲಿರೋ ಲೀಗ್ ಇದಾಗಿದೆ.
ಇನ್ನು, ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಮುಖಾಮುಖಿ ಆಗಲಿವೆ. ಡಬಲ್ ರೌಂಡ್ ಬಳಿಕ ಅಗ್ರ 2 ತಂಡಗಳು ಜನವರಿ 29ರಂದು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ವೀರೇಂದ್ರ ಸೆಹ್ವಾಗ್ ಇಂಡಿಯಾ ಮಹಾರಾಜಸ್ ತಂಡ ಮುನ್ನಡೆಸಲಿದ್ದಾರೆ. ಮೊಹಮದ್ ಕೈಫ್ ಈ ತಂಡದ ಉಪನಾಯಕ. ಆಸ್ಟ್ರೇಲಿಯಾದ ಜಾನ್ ಬುಕಾನನ್ ಅವರನ್ನು ತಂಡದ ಕೋಚ್. ಪಾಕಿಸ್ತಾನದ ಮಾಜಿ ಬ್ಯಾಟರ್ ಮಿಸ್ಬಾ ಉಲ್ ಹಕ್ ಏಷ್ಯಾ ಲಯನ್ಸ್ ತಂಡ ಮುನ್ನಡೆಸಲಿದ್ದು, ಈ ತಂಡದ ವೈಸ್ ಕ್ಯಾಪ್ಟನ್ ತಿಲಕರತ್ನೆ ದಿಲ್ಶಾನ್ ಆಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post