ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಮಾಸಾಯಿ ಆಫ್ರಿಕಾ ಖಂಡದ ಟಾಂಜಾನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಅವರು ‘ಕೆಜಿಎಫ್-1′ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಭಾರತೀಯ ಚಿತ್ರರಂಗದ ಟಾಪ್ ಹಾಡುಗಳಿಗೆ ಹೆಜ್ಜೆ ಹಾಕುವ ಇವರು ಕೆಲ ದಿನಗಳ ಹಿಂದೆಯಷ್ಟೇ ‘ಪುಷ್ಪ’ ಚಿತ್ರದ ಸಾಮಿ ಸಾಮಿ ಹಾಡು, ಹಾಗೂ ಊ ಅಂಟಾವಾ ಮಾವ, ಊಂ ಅಂಟಾವಾ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ಅದರಂತೇ ಇದೀಗ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್-1′ ಚಿತ್ರದ ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಗಲಿ ಗಲಿ ಮೇ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿ ಯಶ್, ಶ್ರೀನಿಧಿ ಶೆಟ್ಟಿ, ನೇಹಾ ಕಕ್ಕರ್ ಹಾಗೂ ಮೌನಿ ರಾಯ್ ಅವರನ್ನು ಟ್ಯಾಗ್ ಮಾಡಿ ‘ಕೆಜಿಎಫ್’ ಒಂದು ಬ್ಲಾಕ್ ಬಸ್ಟರ್ ಸಿನಿಮಾ. ಈ ಮಾಸ್ಟರ್ ಪೀಸ್ ನನಗೆ ತುಂಬ ಇಷ್ಟ ಅಂತ ಬರೆದುಕೊಂಡಿದ್ದಾರೆ. ಈ ಮೂಲಕ ಆಫ್ರಿಕಾದಲ್ಲೂ ರಾಕಿ ಭಾಯ್ ಯಶ್ ಹವಾ ಜೋರಾಗಿ ಸೌಂಡ್ ಮಾಡುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post