ಬಾಡಿ ಬಿಲ್ಡರ್ ಅಂದ್ರೆ ತಟ್ಟನೆ ನೆನಪಾಗೋದು ಅವರ ಅನುಸರಿಸುವ ಊಟದ ಪದ್ಧತಿ. ಯಾಕಂದ್ರೆ ಬಾಡಿ ಬಿಲ್ಡರ್ಗಳ ಕಟ್ಟುಮಸ್ತಿನ ದೇಹ ನೋಡ್ತಿದ್ದರೆ ಅದನ್ನು ಪೋಷಿಸಲು ಅವರು ಅನುಸರಿಸುವ ಊಟದ ಪದ್ಧತಿಯ ಕುರಿತು ಜನರಿಗೆ ಸಹಜವಾಗಿ ಆಸಕ್ತಿ ಇದ್ದೇ ಇರುತ್ತದೆ.
ಸದ್ಯ ಬ್ರಿಟಿಷ್ ಬಾಡಿ ಬಿಲ್ಡರ್ ಒಬ್ಬರು ತಮ್ಮ ಊಟದ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡ್ತಿದ್ದಾರೆ. ಇವರು ಪ್ರತಿನಿತ್ಯ ಬರೋಬ್ಬರಿ 7000 ಕೆಜಿ ಕ್ಯಾಲೋರಿ ಹೊಂದಿರುವ ಊಟವನ್ನು ಸೇವಿಸುತ್ತಿದ್ದಾರೆ ಅಂದ್ರೆ ನೀವು ಅರೆ ಕ್ಷಣ ಶಾಕ್ ಆಗೋದು ಫಿಕ್ಸ್! ಈ ವಿಚಾರವನ್ನು ಖುದ್ದು ಅವರೇ ಹಂಚಿಕೊಂಡಿದ್ದು ಉತ್ತಮ ದೇಹದಾರ್ಢ್ಯವನ್ನು ಹೊಂದಲು ಇದು ನನಗೆ ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.
‘ದಿ ಬೀಸ್ಟ್’ ಎಂದೇ ಖ್ಯಾತಿಗಳಿಸಿರುವ ಅಮೆರಿಕಾ ಮೂಲದ ಎಡ್ವರ್ಡ್ ಸ್ಟಿಫನ್ ಹಾಲ್ 2017ರಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ವಿಶ್ವದ ಬಲಿಷ್ಠ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದರು. ಇವರು ‘ಎಡ್ಡಿ’ ಎಂಬ ಹೆಸರಿನಿಂದಲೇ ಜನಾನುರಾಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ ಇವರು ಸದ್ಯ ತಮ್ಮ ಊಟದ ಸಿಕ್ರೇಟ್ ರಿವಿಲ್ ಮಾಡಿದ್ದು ದಿನಕ್ಕೆ 6 ಬಾರಿ ಊಟ ಮಾಡಿ 7000 ಕೆಜಿ ಕ್ಯಾಲೋರಿಯನ್ನ ಸಂಪಾದಿಸ್ತೇನೆ ಅಂತ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಗಂಡನಿಗೆ ಬೆಂಬಲವಾಗಿ ನಿಂತ ಪತ್ನಿ
ಎಡ್ವರ್ಡ್ ದಿನವೊಂದಕ್ಕೆ ಬರೋಬ್ಬರಿ 7000 ಕ್ಯಾಲೋರಿ ಇರುವ ಆಹಾರವನ್ನು ಸೇವಿಸ್ತಾರಂತೆ. ಅಷ್ಟೊಂದು ಕ್ಯಾಲೋರಿ ಇರುವ ಆಹಾರವನ್ನು ತಯಾರಿಸೋದು ಕೂಡ ಇವರ ಧರ್ಮಪತ್ನಿ ಅಲೆಕ್ಸಾಂಡ್ರಾ ಹಾಲ್. ಪತಿಯ ಪ್ರತಿ ಹೆಜ್ಜೆಯಲ್ಲೂ ಬೆಂಬಲವಾಗಿ ನಿಂತಿರುವ ಅಲೆಕ್ಸಾಂಡ್ರಾ ನಿತ್ಯ 6 ಬಾರಿ ಸಾಕಷ್ಟು ಕ್ಯಾಲೋರಿ ಇರುವ ಖಾದ್ಯಗಳನ್ನು ತಯಾರಿಸುತ್ತಾರೆ.
ಇದನ್ನೂ ಓದಿ: ನಿಷ್ಕಲ್ಮಷ ಪ್ರೇಮ; ಕಣ್ಮನ ಸೆಳೆದ ಜೋಡಿ ಗೂಬೆಗಳ ಮುದ್ದಾಟ
ಜೊತೆಗೆ ಅವರ ಡಯಟ್ ಮೇಲೆ ನಿಗಾ ಇಡುವ ಅವರು ಪ್ರತಿ ಅಡುಗೆ ತಯಾರಿಸುವಾಗ ಅದನ್ನು ಮಾಡುವ ಬಗೆಯನ್ನು ಎಡ್ವರ್ಡ್ಗೆ ವಿವರಿಸುತ್ತ ಹೋಗುತ್ತೇನೆ ಎಂದು ನಗುಮೊಗದಿಂದಲೇ ಹೇಳುತ್ತಾರೆ.
ಕಾರ್ಬೋಹೈಡ್ರೇಟ್ಸ್, ಪ್ರೋಟಿನ್, ತರಕಾರಿಯುಕ್ತ ಆಹಾರವನ್ನು ನಾನು ರೆಡಿ ಮಾಡ್ತೇನೆ. ಜೊತೆಗೆ ಮೆನು ರೆಡಿ ಆಗುತ್ತಿದ್ದಂತೆ ನಾನೇ ಸ್ವತಃ ಅವರಿಗೆ ಪ್ಲೇಟ್ ರೆಡಿ ಮಾಡಿಕೊಡ್ತೇನೆ. ಊಟದಲ್ಲಿ ಸಾಕಷ್ಟು ಮೆನು ಇರೋದ್ರಿಂದ ಅದು ಒಂದೇ ಪ್ಲೇಟ್ನಲ್ಲಿ ಸೆಟ್ ಆಗೋದಿಲ್ಲ.
ಹೀಗಾಗಿ ನಾನೇ ಖುದ್ದು ಪ್ಲೇಟ್ ರೆಡಿ ಮಾಡಿ ಕೊಟ್ಟ ನಂತರ ಅವರು ಊಟ ಮಾಡ್ತಾರೆ. ಇನ್ನು ನಾನು ಇಲ್ಲದ ಸಂದರ್ಭದಲ್ಲಿ ಅವರಿಗೆ ಆಹಾರವನ್ನು ಹೇಗೆ ತಯಾರು ಮಾಡಿಕೊಳ್ಳಬೇಕು ಎಂಬುದರ ಕುರಿತು ಗೈಡ್ ಮಾಡಿ ಹೋಗುತ್ತೇನೆ ಎಂದಿದ್ದಾರೆ. ಸದ್ಯ ಸೆಪ್ಟೆಂಬರ್ನಲ್ಲಿ ನಡೆಯಲಿರೋ ಬಾಡಿ ಬಿಲ್ಡಿಂಗ್ ಶೋಗೆ ಅವರು ತಯಾರಾಗ್ತಿದ್ದು ಅದರತ್ತ ಪೋಕಸ್ ಮಾಡಿದ್ದಾರೆ.
ಇದನ್ನೂ ಓದಿ: ಲವರ್ಗಾಗಿ ಆಕೆ ತಾಯಿಗೆ ಕಿಡ್ನಿ ಕೊಟ್ಟ ಪ್ರೇಮಿ; ಒಂದೇ ಕಿಡ್ನಿಯವ ಬೇಡ ಅಂತ ಇನ್ನೊಬ್ಬನ ಕೈ ಹಿಡಿದ ಹುಡುಗಿ
ವಿಶೇಷ ವರದಿ: ಮಾಲತೇಶ್ ಅಗಸರ, ಡಿಜಿಟಲ್ ಡೆಸ್ಕ್
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post