ದಾವಣಗೆರೆ: ಅಣ್ಣನ ಮದುವೆಗೆ ಜವಳಿ ಖರೀದಿಸಲು ಬಂದ ಯುವಕನ ಕತ್ತು ಸೀಳಿ ಬರ್ಬರವಾಗಿ ಕೊಂದ ಘಟನೆ ಜಿಲ್ಲೆಯ ಕುಂದವಾಡ ಕೆರೆ ಹತ್ತಿರ ನಡೆದಿದೆ.
ಹರಿಹರದ ಮೂಲದ ಅಲ್ತಾಫ್ (22)ಮೃತ ಯುವಕ. ಸಾವನ್ನಪ್ಪಿರುವ ಯುವಕ ತನ್ನ ಅಣ್ಣನ (ದೊಡ್ಡಮ್ಮನ ಮಗ) ಜೊತೆ ಮದುವೆಗೆ ಜವಳಿ ತರಲೆಂದು ಡಿಯೋ ಬೈಕ್ನಲ್ಲಿ ದಾವಣಗೆರೆಗೆ ಬಂದಿದ್ದ. ಈ ವೇಳೆ ಕುಂದವಾಡ ಕೆರೆ ವ್ಯಾಪ್ತಿಯಲ್ಲಿ ಬರುತ್ತಿದ್ದಂತೆ ಎದುರಾದ ದಷ್ಕರ್ಮಿಗಳ ಅಲ್ತಾಪ್ ಕತ್ತು ಸೀಳಿ ಎಸ್ಕೇಪ್ ಆಗಿದ್ದಾರೆ. ಇತ್ತ ಅಣ್ಣ ಇಬ್ರಾಹಿಂ ಕೂಡ ಘಟನೆ ನಡೆದ ದಿನದಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಪ್ರಕರಣದ ಹಿನ್ನೆಲೆ..
ನಾಪತ್ತೆಯಾಗಿರೋ ಇಬ್ರಾಹಿಂಗೆ ಇದೆ ಮಾರ್ಚ್ ತಿಂಗಳಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗೆ ಬಟ್ಟೆ ಖರೀದಿಸಲು ಅಣ್ಣ ತಮ್ಮ ಇಬ್ಬರು ತೆರಳಿದ್ದರು. ಈ ವೇಳೆ ರಾತ್ರಿಯಾದರು ಇಬ್ಬರು ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಮೃತ ಅಲ್ತಾಫ್ ತಂದೆ ಮಹಬೂಬ್ ಪಾಷಾ ಹರಿಹರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಮಾರನೆ ದಿನವೇ ಕುಂದುವಾಡ ಕೆರೆ ಬಳಿ ಕತ್ತು ಸೀಳಿದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ವೇಳೆ ಶವ ಪರಿಶೀಲನೆ ನಡೆಸಿದಾಗ ಅಲ್ತಾಫ್ ಕೊಲೆಯಾಗಿರೋದು ಧೃಡವಾಗಿದೆ. ಸದ್ಯ ಘಟನೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಮತ್ತು ನಾಪತ್ತೆಯಾದ ಮದುವೆ ಗಂಡಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post