ಲೆಜೆಂಡ್ಸ್ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡ ಭರ್ಜರಿ ಗೆಲುವು ದಾಖಲಿಸಿದೆ. ಏಷ್ಯನ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಮಹಾರಾಜಾಸ್ ತಂಡದ ನಾಯಕ ಮೊಹಮ್ಮದ್ ಕೈಫ್ ಬೌಲಿಂಗ್ ಆಯ್ದುಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಏಷ್ಯಾ ಲಯನ್ಸ್ಗೆ ಶ್ರೀಲಂಕಾ ಮೂಲದ ಉಪುಲ್ ತರಂಗ ಮತ್ತು ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಉತ್ತಮ ಆರಂಭ ನೀಡಿದ್ರು. ಈ ಮೂಲಕ ಏಷ್ಯಾ ಲಯನ್ಸ್ ತಂಡ ನಿಗಧಿತ 20 ಓವರ್‌ಗಳಲ್ಲಿ 175 ರನ್ ಗಳಿಸಿತು.
ಇಂಡಿಯಾ ಮಹಾರಾಜಾಸ್ ತಂಡದ ಪರ ಮನ್ ಪ್ರೀತ್ ಗೋನಿ 3 ವಿಕೆಟ್ ಪಡೆದರೆ, ಇರ್ಫಾನ್ ಪಠಾಣ್ 2 ವಿಕೆಟ್ ಹಾಗೂ ಮುನಾಫ್ ಪಟೇಲ್ ಮತ್ತು ಸ್ಟುವರ್ಟ್ ಬಿನ್ನಿ ತಲಾ ಒಂದೊಂದು ವಿಕೆಟ್ ಪಡೆದರು. ಗುರಿಯನ್ನು ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಆಟಗಾರರಾದ ನಮನ್ ಓಜಾ, ಸ್ಟುವರ್ಟ್ ಬಿನ್ನಿ ಬೇಗನೆ ಪೆವಿಲಿಯನ್ ಸೇರಿಕೊಂಡರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬದ್ರಿನಾಥ್ ಶೂನ್ಯ ಸುತ್ತಿ ವಾಪಸಾದರು.
ಇದನ್ನೂ ಓದಿ: ICC T20 ವಿಶ್ವಕಪ್ ಟೈಂ ಟೇಬಲ್ ಔಟ್.. ಪಾಕ್ ವಿರುದ್ಧ ಭಾರತ ಪಂದ್ಯ ಯಾವಾಗ?
4ನೇ ವಿಕೆಟ್‍ಗೆ ಜತೆಯಾದ ನಾಯಕ ಮೊಹಮ್ಮದ್ ಕೈಫ್ ಮತ್ತು ಯೂಸುಫ್ ಪಠಾಣ್ 117 ರನ್‌ಗಳ ಜತೆಯಾಟ ಆಡಿದರು. ಅಂತಿಮ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಇರ್ಫಾನ್ ಪಠಾಣ್ ಗೆಲುವಿನ ದಡ ಸೇರಿಸಿದ್ರು. ತಂಡ 6 ವಿಕೆಟ್‍ಗಳ ರೋಚಕ ಗೆಲುವನ್ನು ಸಾಧಿಸಿತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post