ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿರುವ ಕೇಂದ್ರಿಯ ಗುತ್ತಿಗೆಯಲ್ಲಿ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಎ ಪ್ಲಸ್ ದರ್ಜೆಗೆ ಬಡ್ತಿ ನೀಡುವ ಸಾಧ್ಯತೆ ಇದೆ. ಈಗಾಗಲೇ ರೋಹಿತ್, ಕೊಹ್ಲಿ ಮತ್ತು ಬೂಮ್ರಾ ಎ ಪ್ಲಸ್ ಗ್ರೇಡ್ನಲ್ಲಿದ್ದಾರೆ. ಇವರ ಸಾಲಿಗೆ ಅಂದರೆ ಅಗ್ರದರ್ಜೆಗೆ ಪಂತ್, ರಾಹುಲ್ ಸೇರಲಿದ್ದಾರೆ.
ಕೇಂದ್ರ ಗುತ್ತಿಗೆಯಲ್ಲಿ ಎ ಪ್ಲಸ್ ₹ 7ಕೋಟಿ, ಎ ₹ 5 ಕೋಟಿ, ಬಿ ₹ 3 ಕೋಟಿ ಹಾಗೂ ಸಿ ₹ 1 ಕೋಟಿ ಎಂಬ ನಾಲ್ಕು ವಿಭಾಗಗಳಾಗಿವೆ. ಬಿಸಿಸಿಐ ಸೆಲೆಕ್ಷನ್ ಕಮಿಟೀ ಈ ವಿಭಾಗಗಳಿಗೆ ಆಟಗಾರರನ್ನು ಆಯ್ಕೆ ಮಾಡುತ್ತಾರೆ.
ಬಿ ಗುಂಪಿನ ಇಶಾಂತ್ ಶರ್ಮಾ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸ್ಥಾನದಿಂದ ಕೆಳಗೆ ಜಾರುವ ಸಾಧ್ಯತೆ ಹೆಚ್ಚಿದೆ. ಸಿ ಗುಂಪಿನಲ್ಲಿರೋ ಮೊಹಮ್ಮದ್ ಸಿರಾಜ್, ಬಿ ಗುಂಪಿನ ಶಾರ್ದೂಲ್ ಠಾಕೂರ್ ಈ ವರ್ಷ ಬಡ್ತಿ ಪಡೆಯೋ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post