ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ಈ ಬೌಲರ್ ಆಯ್ಕೆ ತಂಡಕ್ಕೆ ಅನಿವಾರ್ಯ ಇತ್ತಾ ಎಂಬ ಪ್ರಶ್ನೆ ಹುಟ್ಟಿದೆ. ಆಫ್ರಿಕಾ ಕಂಡಿಷನ್ಗೆ ಹೇಳಿ ಮಾಡಿಸಿದ ಬೌಲರ್ ಆಗಿದ್ರು ಇವರು. ಆದ್ರೆ ಇವರನ್ನೇ ತಂಡದಿಂದ ದೂರವಿಟ್ಟು ದೊಡ್ಡ ಪ್ರಮಾದ ಮಾಡಿಕೊಂಡಿತಾ ಆಯ್ಕೆ ಸಮಿತಿ..?
ಮೊದಲ ಏಕದಿನ ಪಂದ್ಯದಲ್ಲಿ ದೊಡ್ಡ ಪ್ರಮಾದಗಳಿಂದ ಟೀಮ್ ಇಂಡಿಯಾ ಸೋಲು ಕಂಡಿತು. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ವಿಭಾಗ ಕೂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆದರೆ ಎದುರಾಳಿ ಸೌತ್ ಆಫ್ರಿಕಾ ಎರಡೂ ವಿಭಾಗಗಳಲ್ಲೂ ಮಿಂಚಿ ಭರ್ಜರಿ ಜಯ ಸಾಧಿಸ್ತು. ಆದ್ರೆ ಎಲ್ಲೋ ಒಂದು ಕಡೆ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲಿಂಗ್ ಕೊರತೆ, ಎದ್ದು ಕಾಣ್ತಿದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸೌತ್ ಆಫ್ರಿಕನ್ ಕಂಡೀಷನ್ಸ್ಗೆ ಸೂಟ್ ಆಗ್ತಿದ್ರು ಚೈನಾಮನ್.!
ಹೌದು.. ಸೌತ್ ಆಫ್ರಿಕಾ ಕಂಡೀಷನ್ನಲ್ಲಿ ರಿಸ್ಟ್ ಸ್ಪಿನ್ನರ್ ಅಗತ್ಯ ತೀವ್ರವಾಗಿ ಕಾಡಿತ್ತು. ಏಕೆಂದರೆ ದಕ್ಷಿಣ ಆಫ್ರಿಕಾದ ರಿಸ್ಟ್ ಸ್ಪಿನ್ನರ್ ತಬ್ರೈಜ್ ಶಂಸಿ, ಅದ್ಭುತ ಬೌಲಿಂಗ್ ಮಾಡಿದ್ದೇ ಇದಕ್ಕೆ ಸಾಕ್ಷಿ. ಅದರಲ್ಲೂ ಅರ್ಧಶತಕ ಸಿಡಿಸಿ ಅದ್ಭುತವಾಗಿ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೇ ಗೇಟ್ ಪಾಸ್ ನೀಡಿ, ತಂಡದ ಮೇಲೆ ಹಿಡಿತ ಸಾಧಿಸಲು, ಶಂಸಿ ಯಶಸ್ವಿಯಾದ್ರು. ಹೀಗಾಗಿ ಕುಲ್ದೀಪ್ ಕೂಡ ತಂಡದಲ್ಲಿ ಇದ್ದಿದ್ರೆ, ಈ ಕಂಡಿಷನ್ಸ್ನಲ್ಲಿ ಪಕ್ಕಾ ಮೇಲುಗೈ ಸಾಧಿಸುತ್ತಿದ್ರು.
ಕಳೆದ ಸರಣಿಯಲ್ಲಿ ಕುಲ್ದೀಪ್ ಕಬಳಿಸಿದ್ದು, ಬರೋಬ್ಬರಿ 17 ವಿಕೆಟ್!
ಕುಲ್ದೀಪ್ ಈ ಕಂಡಿಷನ್ಸ್ನಲ್ಲಿ ಬೆಸ್ಟ್ ಅನ್ನೋದಕ್ಕೆ, ಸಾಕ್ಷಿಯೇ ಕಳೆದ ಸರಣಿಯಲ್ಲಿ ನೀಡಿದ ಪ್ರದರ್ಶನ. 2017-18ರಲ್ಲಿ ನಡೆದ 6 ಪಂದ್ಯಗಳ ಏಕದಿನ ಪಂದ್ಯಗಳ ಸರಣಿಯಲ್ಲಿ ಕುಲ್ದೀಪ್, 17 ವಿಕೆಟ್ ಕಬಳಿಸಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ರು. ಹರಿಣಗಳ ನಾಡಲ್ಲಿ ಐತಿಹಾಸಿಕ ಏಕದಿನ ಸರಣಿ ಗೆಲ್ಲಲು ಕಾರಣರಾಗಿದ್ರು. ಇದೇ ಕಾರಣಕ್ಕೆ ಈ ಸರಣಿಗೆ, ಕುಲ್ದೀಪ್ ಸೇವೆ ಅಗತ್ಯವಾಗಿತ್ತು ಎನ್ನಲಾಗ್ತಿದೆ.
ತಂಡದಲ್ಲಿ ಕುಲ್ಚಾ ಜೋಡಿ ಇದ್ದರೆ ಆಗುತ್ತೆ ಮೋಡಿ
ಹೌದು.. ಇದು ನೂರಕ್ಕೆ ನೂರು ಸತ್ಯ. ಇದಕ್ಕೆ ಬೇರೆ ಸರಣಿಗಳ ಉದಾಹರಣೆ ಏಕೆ? 2017-18ರ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯೇ ಸಾಕು. ಕುಲ್ದೀಪ್ 17 ವಿಕೆಟ್ ಪಡೆದಿದ್ರೆ, ಯಜುವೇಂದ್ರ ಚಹಲ್ 16 ವಿಕೆಟ್ ಕಬಳಿಸಿ ಹೆಚ್ಚು ವಿಕೆಟ್ ಪಡೆದವ್ರ ಪಟ್ಟಿಯಲ್ಲಿ, 2ನೇ ಸ್ಥಾನದಲ್ಲಿದ್ರು. ಇದೇ ಸರಣಿಯಲ್ಲ. ಪ್ರತಿಯೊಂದು ಸರಣಿಯಲ್ಲೂ ಈ ಜೋಡಿ ಕಮಾಲ್ ಮಾಡಿದ್ದುಂಟು. ಹಾಗಾಗಿ ಕುಲ್ದೀಪ್ ತಂಡದಲ್ಲಿ ಇದ್ದಿದ್ರೆ, ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಖಂಡಿತವಾಗಿಯೂ ಬೀರುತ್ತಿತ್ತು ಅನ್ನೋದು ತಜ್ಞರ ಅಭಿಪ್ರಾಯ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post