ರೋಷಿನಿ ತೇಲ್ಕರ್.. ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ವೀಕ್ಷಕರನ್ನ ರಂಜಿಸಿದ ಚಲುವೆ. ಕಿನ್ನರಿಯಲ್ಲಿ ವಿಲನ್ ಆಗಿ ಮಿಂಚಿ ಮರೆಯಾಗಿದ್ದ ರೋಷಿನಿ ತೇಲ್ಕರ್ ಈಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೌದು, ನಮ್ಮನೆ ಯುವರಾಣಿ ತಂಡಕ್ಕೆ ಕಾಲಿಟ್ಟಿದ್ದಾರೆ ರೋಷಿನಿ ತೇಲ್ಕರ್.
ಈಗಾಗಲೇ ನಮ್ಮನೆ ಯುವಾರಾಣಿ ತಂಡದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಕತೆಯ ಜೊತೆ ಜೊತೆಗೆ ತಾರಾಗಣ ಕೂಡ ಬದಲಾಗುತ್ತಿದೆ. ಪ್ರಣಮ್ ಪಾತ್ರದಲ್ಲಿ ಸ್ನೇಹಿತ್ ಗೌಡ, ಗಂಗಾ ಪಾತ್ರದಲ್ಲಿ ಖುಷಿ ಶಿವು, ನಮ್ರತಾ ಪಾತ್ರದಲ್ಲಿ ನಟಿ ಲತಾ ಮಿಂಚುತ್ತಿದ್ದಾರೆ. ಈ ಸಾಲಿಗೆ ಈಗ ರೋಷಿನಿ ತೇಲ್ಕರ್ ಕೂಡ ಸೇರ್ಪಡೆಯಾಗಿದ್ದು, ನವ್ಯಾ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.
ನಮ್ರತಾ ಪ್ರೀತಿಸಿ ಮದುವೆ ಆಗಿರ್ತಾಳೆ. ನಮ್ರತಾ ನಾದಿನಿ ಈ ನವ್ಯಾ, ಪ್ರಣಮ್ನ ಫ್ರೇಂಡ್ ಕೂಡ ಹೌದು. ನವ್ಯಾ ಕುಂತಂತ್ರದ ಹುಡುಗಿಯಾಗಿದ್ದು, ನಮ್ರತಾ ಬಾಳಿಗೆ ಮುಳ್ಳಾಗಿರ್ತಾಳೆ. ಪ್ರಣಮ್ ಮೇಲೆ ನವ್ಯಾ ಕಣ್ಣಿಟ್ಟಿರುತ್ತಾಳೆ. ಸದ್ಯ ಪ್ರಣಮ್ ಹಾಗೂ ಗಂಗಾ ನಡುವೆ ಕ್ಯೂಟ್ ಕ್ಯೂಟ್ ಮೂಮೆಂಟ್ಗಳು ನಡೆಯುತ್ತಿದ್ದು, ಇವರಿಬ್ಬರ ನಡುವೆ ನವ್ಯಾ ಎಂಟ್ರಿಯಾಗಲಿದೆ.
ಈಗಾಗಲೇ ರಾಜ್ಗುರು ಮನೆತನವನ್ನ ಹಾಳು ಮಾಡಲು ದ್ವೇಷ ಅಸೂಯೆ ತುಂಬಿಕೊಂಡು ಮತ್ತೆ ಕಲ್ಪನಾ ಬಂದಿದ್ದಾಳೆ. ನವ್ಯಾ ಎಂಟ್ರಿ ಕೂಡ ಆಗಿದೆ. ಹೀಗಾಗಿ ಯುವರಾಣಿಯ ಕಥೆಗೆ ಸಾಕಷ್ಟು ತಿರುವುಗಳು ಸಿಗಲಿವೆ. ಒಟ್ಟಿನಲ್ಲಿ ನಮ್ಮನೆ ಯುವರಾಣಿ ಮೂಲಕ ಒನ್ಸ್ ಅಗೇನ್ ಖಳನಾಯಕಿಯಾಗಿ ಜನರನ್ನ ರಂಜಿಸಲು ಬಂದಿರುವ ರೋಷಿನಿ ತೇಲ್ಕರ್ಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post