ನಿರ್ದೇಶಕ ಮಂಸೋರೆ ಇವ್ರ ಸಿನಿಮಾಗಳ ಕಥೆಗಳು ಮನಸೂರೆ ಗೊಳಿಸುವಂತವು. ಈ ಕಾರಣಕ್ಕೆ ಇರಬೇಕು ನಿರ್ದೇಶಕ ಮಂಸೋರೆ ಅವರ ಸಿನಿಮಾಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಬಂದಿರೋದು. ಈಗ ವಿಷಯವೇನು ಗೊತ್ತಾ? ಮಂಸೋರೆ ಹೊಸ ಸಿನಿಮಾ ಮಾಡ್ತಿದ್ದಾರೆ. ಈ ಹೊಸ ಸಿನಿಮಾ ಶುರುವಾಗೋದಕ್ಕು ಮೊದಲು ಸಾಯಿ ಪಲ್ಲವಿ ಅವರಿಗೆ ಕಥೆ ಹೇಳಿ ಒಪ್ಪಿಸಿದ್ದರು. ಇನ್ನೇನು ಸಾಯಿ ಪಲ್ಲವಿಯವರ ಕನ್ನಡ ಸಿನಿಮಾ ಶುರುವಾಗಬೇಕು ಅನ್ನೋಷ್ಟರಲ್ಲಿ ಹೊಸ ಸಿನಿಮಾ ಮಾಡ್ತೌವ್ರೆ ಮಂಸೋರೆ.
ಸಾಯಿ ಪಲ್ಲವಿ..ಸೌಥ್ ಸಿನಿ ದುನಿಯಾದ ಸ್ಟಾರ್ ನಟಿಮಣಿ. ಈಕೆಯ ಅಂದ ಅರ್ಧಕೇಜಿ ಇದ್ರೆ ಈಕೆಯ ನಟನೆಯ ಚೆಂದ ನೂರು ಕೆಜಿ. ಅದ್ಭುತ ನೈಜ ಅಭಿನಯದಿಂದ ಸೌಥ್ ಇಂಡಿಯಾದಲ್ಲಿ ಫೇಮಸ್ ಆಗಿರೋ ಸಾಯಿ ಪಲ್ಲವಿ ಕನ್ನಡ ಚಿತ್ರರಂಗಕ್ಕೆ ಕರೆತರಲು ನಾತಿಚರಾಮಿ ಖ್ಯಾತಿಯ ನಿರ್ದೇಶಕ ಮಂಸೋರೆ ಕಸರತ್ತು ಶುರು ಮಾಡಿದ್ದಾರೆ.
ಸೌಥ್ ಸಿನಿ ದುನಿಯಾದ ನಟಿಮಣಿಯರ ದಾರಿ ಅವರ ಸ್ಟೋರಿ ಒಂದೊಂದು ರೀತಿ ಇದ್ರೆ, ನಟಿ ಸಾಯಿ ಪಲ್ಲವಿಯವರ ದಾರಿ ಆ ದಾರಿಯ ದಾಖಲೆಯ ಸ್ಟೋರಿನೇ ಬೇರೆ. ಅದೆಂತಹ ಪಾತ್ರವೇ ಬರ್ಲಿ ಆ ಪಾತ್ರವೇ ಸೋತು ಸುಣ್ಣವಾಗಬೇಕು ಅಂತಹ ಅಭಿನೇತ್ರಿ ಸಾಯಿ ಪಲ್ಲವಿ. ಗ್ಲಾಮರ್ ಇಲ್ಲ. ರೂಪ ಇಲ್ಲ, ಶೇಪ್ ಇಲ್ಲ , ಎಕ್ಸ್ಪೋಸ್ ಅಂತು ಮೊದ್ಲೇ ಇಲ್ಲ. ಆದ್ರೂ ಈಕೆಯ ಸಿನಿಮಾ ಅಂದ್ರೆ ಜನಮನ ಹುಚ್ಚೆದ್ದು ಕುಣಿಯುತ್ತದೆ. ಒಳ್ಳೆಯ ಕಥೆಗಳು ಸಾಯಿ ಪಲ್ಲವಿ ಅವರನ್ನೇ ಹುಡುಕಿಕೊಂಡು ಹೊಗುತ್ತದೆ.
ಮಲಯಾಳಂ , ತೆಲುಗು , ತಮಿಳು ಸಿನಿಮಾಗಳಲ್ಲಿ ಮಿಂಚೋ ಸಾಯಿ ಪಲ್ಲವಿಯವರನ್ನ ಕನ್ನಡಕ್ಕೆ ಕರೆತರೋಕೆ ಈಗಾಗಲೇ ಅನೇಕ ಸ್ಯಾಂಡಲ್ವುಡ್ ಸಿನಿ ಮುಖಂಡರು ಪ್ರಯತ್ನಿಸಿದ್ದಾರೆ. ಬಟ್ ಈಗ ಒಂದು ಸುದ್ದಿ ಸಮಾಚಾರ ಗಾಂಧಿನಗರದಿಂದ ವಿಜಯನಗರ ನಾಗರಭಾವಿ ತನಕ ಹಬ್ಬಿದೆ. ಸಾಯಿ ಪಲ್ಲವಿ ಅವರಿಗೆ ಕನ್ನಡದ ರಾಷ್ಟ್ರ ಪಶಸ್ತಿ ವಿಜೇತ ಸಿನಿಮಾಗಳ ನಿರ್ದೇಶಕ ಮಂಸೋರೆ ಕಥೆ ಹೇಳಿ ಅಪ್ರೋಚ್ ಮಾಡಿದ್ದಾರಂತೆ. ಮಂಸೋರೆ ಕಥೆಯನ್ನ ಕೇಳಿ ಸಾಯಿ ಪಲ್ಲವಿ ಕೂಡ ಇಂಪ್ರೆಸ್ ಆಗೌವ್ರೆ.
ಸಾಯಿ ಪಲ್ಲವಿ ಅವರಿಗೆ ಮಂಸೋರೆ ಹೇಳಿರುವ ಕಥೆ ಇಷ್ಟವಾಗಿದೆ. ಆದ್ರೆ ಪೂರ್ತಿ ಸ್ಕ್ರಿಪ್ಟ್ ಅನ್ನ ಕೊಡಿ ಅಂತ ಕೇಳಿದ್ದಾರೆ ಸಾಯಿ ಪಲ್ಲವಿ. ಸ್ಕ್ರಿಪ್ಟ್ ಕುಸರಿ ಕೆಲಸದಲ್ಲಿ ಈಗಾಗಲೇ ಮಂಸೋರೆ ಬ್ಯುಸಿ ಯಾಗಿದ್ದರೆ. ಆದ್ರೆ ಸದ್ಯ ಸಾಯಿ ಪಲ್ಲವಿ ಅವರ ಕಾಲ್ ಶೀಟ್ ಎರಡು ವರ್ಷಗಳ ಕಾಲ ಸಿಗದೆ ಇರೋದ್ರ ಕಾರಣ ಹೊಸ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ ಮಂಸೋರೆ.
ಮಂಸೋರೆ ಈಗ ಕೈಗೆತ್ತಿಕೊಂಡಿರುವ ಸಿನಿಮಾ 19.20.21. ಟೈಟಲೇ ಡಿಫರೆಂಟ್ ಆಗಿದೆ. ಇತ್ತಿಚಿನ ದಿನಗಳಲ್ಲಿ ನಡೆದ ಒಂದು ನೈಜ ಘಟನೆಯೊಂದನ್ನ ಇಟ್ಕೊಂಡು ಈ ಬಾರಿ ಸಿನಿಮಾ ಮಾಡಲು ಹೊರಟ್ಟಿದ್ದಾರೆ ಮಂಸೋರೆ. ಆಕ್ಟ್ 1978 ಸಿನಿಮಾಕ್ಕೆ ಬಂಡವಾಳ ಹೂಡಿದ್ದ ದೇವರಾಜ್ ಈ 19.20.21 ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಲೋಕೆಷನ್ ಹಂಟಿಂಗ್ನಲ್ಲಿರುವ ಮಂಸೋರೆ ಟೀಮ್ ಮಾರ್ಚ್ ತಿಂಗಳಿನಿಂದ ಶೂಟಿಂಗ್ ಅಡ್ಡಕ್ಕೆ ಇಳಿಯಲಿದೆ. 19.20.21 ಸಿನಿಮಾದಲ್ಲಿ ಯಾರು ಹೀರೋ ಹೀರೋಯಿನ್ ಅನ್ನೊದನ್ನ ಬಹಿರಂಗ ಪಡಿಸಿಲ್ಲ , ಸಾಯಿ ಪಲ್ಲವಿ ಅವರ ಜೊತೆ ಪೊಲಿಟಿಕಲ್ ಡ್ರಾಮಾ ಮಾಡೋ ಕನಸನ್ನು ಕೈ ಬಿಟ್ಟಿಲ್ಲ ಮಂಸೋರೆ. ಶೀಘ್ರದಲ್ಲಿ ಶುಭ ಸಿನಿ ಸುದ್ದಿ ಕೊಟ್ಟೆ ಕೊಡ್ತಾರೆ ಸಂಚಾರಿ ವಿಜಯ್ ಅವರ ಕ್ಲೋಸ್ ಫ್ರೆಂಡ್ ಮಂಸೋರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post