ಭಾರತ-ಸೌತ್ ಆಫ್ರಿಕಾ ನಡುವಿನ 2ನೇ ಏಕದಿನಕ್ಕೆ ವೇದಿಕೆ ಸಜ್ಜಾಗಿದೆ. ಸರಣಿ ಗೆಲುವು ನಿರ್ಧರಿಸೋ ಪಂದ್ಯಕ್ಕೂ ಮುನ್ನ ಹಲವು ಪ್ರಶ್ನೆಗಳು ಹುಟ್ಟಿವೆ. ಈ ಪ್ರಶ್ನೆಗಳಿಗೆ ಪಂದ್ಯಕ್ಕೂ ಮುನ್ನ ಉತ್ತರ ಕಂಡುಕೊಳ್ಳೋದು ಅನಿವಾರ್ಯವಾಗಿದೆ.
ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಫೈಟ್ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ ತಂಡ ಇದೀಗ ಸರಣಿ ನಿರ್ಣಾಯಕ ಪಂದ್ಯ ಗೆಲುವಿನತ್ತ ಗುರಿ ನೆಟ್ಟಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು ಕೂಡ ಅನಿವಾರ್ಯವಾಗಿದೆ.
ಯಾವ ಸ್ಲಾಟ್ನಲ್ಲಿ ರಾಹುಲ್ ಆಡಬೇಕು?
ಕಳೆದ 2 ವರ್ಷಗಳಿಂದ ಕೆ.ಎಲ್.ರಾಹುಲ್ ಏಕದಿನ ಮಾದರಿಯಲ್ಲಿ ಮಿಡಲ್ ಆರ್ಡರ್ ಬ್ಯಾಟಿಂಗ್ನ ಬಲವಾಗಿದ್ರು. ಉತ್ತಮ ಸರಾಸರಿಯಲ್ಲಿ ಬ್ಯಾಟಿಂಗ್ ಕೂಡ ನಡೆಸಿದ್ರು. ಇದೀಗ ರೋಹಿತ್ ಅಲಭ್ಯತೆಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ವೈಫಲ್ಯ ಕಂಡಿದ್ದಾರೆ. ಹೀಗಾಗಿ ರೆಡ್ ಹಾಟ್ ಫಾರ್ಮ್ನಲ್ಲಿರೋ ಋತುರಾಜ್ ಗಾಯಕ್ವಾಡ್ಗೆ ಅವಕಾಶ ನೀಡಿ, ರಾಹುಲ್ ಮಿಡಲ್ ಆರ್ಡರ್ನಲ್ಲಿ ಬ್ಯಾಟ್ ಬೀಸೋದು ಸೂಕ್ತವಾಗಿದೆ.ಇಬ್ಬರು ಆಲ್ರೌಂಡರ್ ಬೇಕಾ? ಹೆಚ್ಚುವರಿ ಬ್ಯಾಟ್ಸ್ಮನ್ ಬೇಕಾ?
ಮೊದಲ ಏಕದಿನದಲ್ಲಿ ಇಬ್ಬರು ಆಲ್ರೌಂಡರ್ಗಳೊಂದಿಗೆ ಭಾರತ ಕಣಕ್ಕಿಳಿದಿತ್ತು. ಆದರೆ ಮಿಡಲ್ ಆರ್ಡರ್ನ ಕಳಪೆ ಪ್ರದರ್ಶನ ತಂಡಕ್ಕೆ ಹೊರೆಯಾಯ್ತು. ಹೀಗಾಗಿ ಬ್ಯಾಟಿಂಗ್ ಬಲ ಹೆಚ್ಚಿಸಲು, ಬೆಂಚ್ನಲ್ಲಿರೋ ಸೂರ್ಯಕುಮಾರ್ ಅಥವಾ ಇಶಾನ್ ಕಿಶನ್ ಅವಕಾಶ ನೀಡಬೇಕಾ ಎಂಬ ಬಗ್ಗೆ ಯೋಚನೆ ಮಾಡಬೇಕಿದೆ.
ಇಬ್ಬರು ಸ್ಪಿನ್ನರ್ಗಳ ಅಗತ್ಯತೆ ಇದ್ಯಾ.?
ಹರಿಣಗಳ ನಾಡಲ್ಲಿ ಟೀಮ್ ಇಂಡಿಯಾದ ಸ್ಪಿನ್ ಅಸ್ತ್ರ ಮೋಡಿಯನ್ನೇ ಮಾಡ್ತಿಲ್ಲ. ಟೆಸ್ಟ್ ಸರಣಿಯಲ್ಲಾಗಿದ್ದೇ, ಏಕದಿನ ಸರಣಿಯಲ್ಲೂ ರಿಪೀಟ್ ಆಗ್ತಿದೆ. ಹೀಗಾಗಿ ಇಬ್ಬರು ಸ್ಪಿನ್ ಬೌಲರ್ಗಳ ಬದಲು, ಒಬ್ಬ ಸಮರ್ಥ ವೇಗಿಯನ್ನ ಕಣಕ್ಕಿಳಿಸಬೇಕಾ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.
6ನೇ ಬೌಲರ್ ಬೇಕಾ? ಅಥವಾ 5 ಜನ ಸ್ಪೆಷಲಿಸ್ಟ್ಸ್ ಸಾಕಾ?
ಮೊದಲ ಏಕದಿನದಲ್ಲಿ ವೆಂಕಟೇಶ್ ಅಯ್ಯರ್ರನ್ನ ಫಾಸ್ಟ್ ಬೌಲಿಂಗ್ ಆಲ್ರೌಂಡರ್ ಆಗಿ ಕಣಕ್ಕಿಳಿಸಲಾಗಿತ್ತು. ಆದ್ರೆ, ಬೌಲರ್ ಆಗಿ ಯೂಸ್ ಮಾಡಿಕೊಳ್ಳಲಿಲ್ಲ. ಐವರು ಸ್ಪೆಷಲಿಸ್ಟ್ ವೇಗಿಗಳಿದ್ದಾಗ, ಆಲ್ರೌಂಡರ್ ಬೇಕಾ ಎಂಬ ಗೊಂದಲವನ್ನೂ ತಂಡ ಬಗೆ ಹರಿಸಿಕೊಳ್ಳಬೇಕಿದೆ.
ಭುವನೇಶ್ವರ್ ಕುಮಾರ್ಗೆ ಮತ್ತೆ ಅವಕಾಶ ನೀಡಬೇಕಾ.?
ಟೀಮ್ ಇಂಡಿಯಾದ ಸ್ವಿಂಗ್ ಮಾಸ್ಟರ್ ಬೌಲಿಂಗ್ ಖದರ್ ಕಂಪ್ಲೀಟ್ ಮಾಯವಾಗಿದೆ. ಮೊದಲಿನಂತೆ ಸ್ಪೆಲ್ಗಳನ್ನ ಮಾಡುವಲ್ಲಿ ಎಡವುತ್ತಿರೋ ಭುವಿ, ಇಂಫ್ಯಾಕ್ಟ್ಫುಲ್ ಪ್ರದರ್ಶನ ನೀಡ್ತಿಲ್ಲ. ಹೀಗಾಗಿ ಭುವಿಗೆ ಅವಕಾಶ ನಿರಾಕರಿಸಿ, ಬೆಂಚ್ನಲ್ಲಿರೋ ಮೊಹಮದ್ ಸಿರಾಜ್ ಅಥವಾ ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಬೇಕಾ ಅನ್ನೋಗೂ ಉತ್ತರ ಹುಡುಕಿಕೊಳ್ಳಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post