ಬೆಂಗಳೂರು: ರಾಜ್ಯದಲ್ಲಿ ಸದ್ಯ ವೀಕೆಂಡ್ ಕರ್ಫ್ಯೂ ರೂಲ್ಸ್ ಗೊಂದಲ ಬಿಗಡಾಯಿಸುತ್ತಿದೆ. ರೂಲ್ಸ್ ತಂದಿರೋ ಸರ್ಕಾರದ ಸಚಿವರುಗಳಲ್ಲೇ ಈ ಬಗ್ಗೆ ಇಬ್ಬಗೆಯ ನಿಲುವುಗಳು ಮೂಡುತ್ತಿವೆ. ಆರೋಗ್ಯ ಸಚಿವ ಸುಧಾಕರ್ ಹೊರತುಪಡಿಸಿ ಇನ್ನುಳಿದ ಬಹುತೇಕರು ವೀಕೆಂಡ್ ಕರ್ಫ್ಯೂ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇದರಿಂದಾಗಿ ಸಿಎಂ ಬೊಮ್ಮಾಯಿಗೂ ಟೆನ್ಶನ್ ಶುರುವಾಗಿದೆ.
ಸಿಎಂ ಬೊಮ್ಮಾಯಿಗೆ ಶುರುವಾಯ್ತು ‘ಕರ್ಫ್ಯೂ’ ಕಿರಿಕಿರಿ!
ಕೊರೊನಾ ಹೆಚ್ಚಳವಾಗೋ ಭೀತಿಯಲ್ಲಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಸರ್ಕಾರದ ಈ ರೂಲ್ಸ್‌ಗಳಿಂದ ಜನರ ಬದುಕು ದುಸ್ಥರವಾಗಿದೆ. ಇದೇ ವಿಚಾರಕ್ಕೆ ವೀಕೆಂಡ್ ಕರ್ಫ್ಯೂ ಮುಂದುವರಿಕೆ ಬಗ್ಗೆ ಸರ್ಕಾರದ ಹಲವು ಶಾಸಕರು ಮತ್ತು ಸಚಿವರುಗಳಿಂದಲೇ ಅಪಸ್ವರಗಳು ಕೇಳಿಬರ್ತಿವೆ. ತಾಂತ್ರಿಕಾ ಸಲಹಾ ಸಮಿತಿ ಹೇಳಿದೆ ಅಂತಾ ವೀಕೆಂಡ್ ಕರ್ಫ್ಯೂ ನಿರ್ಧಾರ ಕೈಗೊಂಡಿರೋದಾಗಿ ಸಚಿವ ಸುಧಾಕರ್ ಹೇಳ್ತಿದ್ದಾರೆ. ಆದರೆ ಸುಧಾಕರ್ ಹೊರತುಪಡಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿ.ಟಿ.ರವಿ ಮತ್ತು ಪ್ರತಾಪ್ ಸಿಂಹ ಸೇರಿದಂತೆ ಬಹತೇಕರಿಗೆ ಈ ವಾರಾಂತ್ಯ ಕರ್ಫ್ಯೂ ಬೇಡವಾಗಿದೆ.
ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಸುವ ವಿಚಾರಕ್ಕೆ ಸ್ವಪಕ್ಷದ ನಾಯಕರಲ್ಲೇ ಭಿನ್ನಾಭಿಪ್ರಾಯಗಳು ಕೇಳಿ ಬರ್ತಿವೆ. ಬಿಜೆಪಿ ಶಾಸಕರು, ಸಚಿವರ ಗೊಂದಲದ ಹೇಳಿಕೆಗಳು ಜನರನ್ನೂ ಕನ್ಫ್ಯೂಸ್ ಮಾಡ್ತಿವೆ. ಇದೇ ಕಾರಣಕ್ಕೆ ಇಂದು ಮಹತ್ವದ ಸಭೆ ನಡೆಸಲು ಸಿಎಂ ಮುಂದಾಗಿದ್ದು, ಈ ಎಲ್ಲ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ಸರ್ಕಾರಕ್ಕೆ ‘ವೀಕೆಂಡ್’ ಟೆನ್ಶನ್
- ಪ್ರಶ್ನೆ 1 : ಸಚಿವರ ಮಾತಿನಂತೆ ತಾಂತ್ರಿಕ ಸಲಹಾ ಸಮಿತಿ ನಡೆದುಕೊಳ್ತಿದ್ಯಾ?
- ಪ್ರಶ್ನೆ 2 : ಪರಾಮರ್ಶೆಗೆ ಮುಂದಾಗದೆ ತಾಂತ್ರಿಕ ಸಲಹಾ ಸಮಿತಿ ಹೇಳ್ತಿದ್ಯಾ?
- ಪ್ರಶ್ನೆ 3 : ಕರ್ಫ್ಯೂ ವಿಚಾರದಲ್ಲಿ ಸರ್ಕಾರದ ಸಚಿವರೇ ಭಿನ್ನ ಹೇಳಿಕೆ ಸರಿನಾ?
- ಪ್ರಶ್ನೆ 4 : ತಾವೇ ರೂಲ್ಸ್ ಪಾಲಿಸದೇ ಜನಕ್ಕೆ ರೂಲ್ಸ್ ಪಾಠ ಮಾಡೋದ್ಯಾಕೆ?
- ಪ್ರಶ್ನೆ 5 : ತಾಂತ್ರಿಕ ಕಮಿಟಿಯವರು ಬಿಟ್ಟು ಉಳಿದವ್ರು ಮಾತಾಡಿರೋದೇಕೆ?
ಒಂದೆಡೆ ಸಚಿವ ಸುಧಾಕರ್ ವೀಕೆಂಡ್ ಕರ್ಫ್ಯೂ ಬಗ್ಗೆ ಒಲವು ತೋರ್ತಿದ್ದಾರೆ. ಇನ್ನೊದೆಡೆ ಸ್ವಪಕ್ಷದ ನಾಯಕರೇ ವೀಕೆಂಡ್ ಕರ್ಫ್ಯೂ ವಿರೋಧಿಸ್ತಿದ್ದಾರೆ. ಇವರಿಬ್ಬರ ಬಿನ್ನಾಭಿಪ್ರಾಯಗಳಿಂದ ರಾಜ್ಯದ ಜನತೆ ಗೊಂದಲಕ್ಕೊಳಗಾಗಿದ್ದಾರೆ. ಅಲ್ಲದೆ ಸರ್ಕಾರದ ನಿರ್ಧಾರದಿಂದ ಜನರ ಬದುಕು ದುಸ್ಥರವಾಗಿದ್ದು ಜನರಿಗೂ ವೀಕೆಂಡ್ ಕರ್ಫ್ಯೂ ಮುಂದುವರಿಕೆ ಬೇಡವಾಗಿದೆ. ಇದೆಲ್ಲದಕ್ಕೂ ಇಂದಿನ ಸಭೆಯಿಂದಲೇ ಉತ್ತರ ದೊರೆಯುವ ಸಾಧ್ಯತೆ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post