ಬೆಂಗಳೂರು: ಚಿನ್ನದ ಸರಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿದ ಘಟನೆ ನಗರದ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತ ಸಿದ್ದಮ್ಮ ಆರೋಪಿ ಸಲೀಂ ಬಳಿ ನಾಟಿ ಔಷಧಿ ತೆಗೆದುಕೊಳ್ತಿದ್ದರು ಎನ್ನಲಾಗಿದ್ದು, ಅದೇ ರೀತಿ ನಿನ್ನೆ ಕೂಡ ಔಷಧಿ ತೆಗೆದುಕೊಳ್ಳಲು ಆರೋಪಿ ಮನೆಗೆ ಹೋಗಿದ್ದಾರೆ. ಈ ವೇಳೆ ಆರೋಪಿ ಸಲೀಂ ಸಿದ್ದಮ್ಮರನ್ನು ಕೊಂದು ಚಿನ್ನದ ಸರದೊಂದಿಗೆ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post