ಇತ್ತೀಚಿಗೆ ರಿಲೀಸ್ ಆದ ಸೂರ್ಯ ಅಭಿನಯದ ‘ಜೈ ಭೀಮ್’ ಸಿನಿಮಾ ಸಾಕಷ್ಟು ಯಶಸ್ಸು ಗಳಿಸಿತ್ತು. ಸಿನಿಮಾದಲ್ಲಿ ಕೆಳವರ್ಗದವರ ಮೇಲೆ ಆಗಿದ್ದ ದೌರ್ಜನ್ಯದ ನೈಜ ಕಥೆಯನ್ನು,ಈ ಸಿನಿಮಾದಲ್ಲಿ ತುಂಬಾ ಅದ್ಭುತಾವಗಿ ತೋರಿಲಾಗಿದೆ.ಈ ಸಿನಿಮಾವನ್ನು ನೋಡಿ ಇಡೀ ಭಾರತವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಹೌದು ಜೈ ಭೀಮ್ ಸೂರ್ಯ ನಟನೆಯ ಚಿತ್ರ. ಅಮೇಜಾನ್ ಪ್ರೈಮ್ನಲ್ಲಿ ವಿಡಿಯೋ ರಿಲೀಸ್ ಆದ ಮೇಲಂತೂ ಚಿತ್ರದ ಬಗ್ಗೆ ಮತ್ತಷ್ಟು ಮೆಚ್ಚುಗೆ ವ್ಯಕ್ತವಾಯಿತು.
ಭಾರತೀಯ ಚಿತ್ರರಂಗದಲ್ಲಿ 2021ರಲ್ಲಿ ರಿಲೀಸ್ ಆದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಸದ್ಯ ಈಗ ‘ಜೈ ಭೀಮ್’ ಸಿನಿಮಾಗೆ ಮತ್ತೊಂದು ಅಭಿಮಾನದ ಗರಿ ಸೇರುವ ಸಮಯ ಬಂದಿದೆ. ಆಸ್ಕರ್ ಸಂಸ್ಥೆ ನೀಡುವ ಪ್ರಶಸ್ತಿಗೆ 276 ಸಿನಿಮಾಗಳು ಆಯ್ಕೆ ಆಗಿದ್ದು. ಆಯ್ಕೆಗೊಂಡ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ‘ಜೈಭೀಮ್’ ಹಾಗೂ ಮಲಯಾಳಂನ ಮೋಹನ್ ಲಾಲ್ ನಟನೆಯ ‘ಮರಕ್ಕರ್’ ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ.
#JaiBhim and #Marakkar have made it to the #Oscars2022 long list. Read on.https://t.co/ftdF9lOJI3
— Filmfare (@filmfare) January 22, 2022
ಈ ಬಾರಿಯ 94ನೇ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಮಾರ್ಚ್ 27ರಂದು, ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿದೆ. ‘ಜೈ ಭೀಮ್’ ಆಸ್ಕರ್ ರೇಸ್ನಲ್ಲಿ ಇರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದೆ. ಇನ್ನು,‘ಮರಕ್ಕರ್’ಚಿತ್ರ ತಂಡ ಕೂಡ ಈ ಬಗ್ಗೆ ಸಂತಸ ಹೊರಹಾಕಿದೆ. ಈ ಸಿನಿಮಾಗಳು ಫಿನಾಲೆ ತಲುಪಿ ಪ್ರಶಸ್ತಿ ಬಾಚಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post