ಆಗ ಬಿಸಿಸಿಐ ಬಿಗ್ಬಾಸ್ಗಳ ಹೀರೋ ಆಗಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇದೀಗ ವಿಲನ್ ಆಗಿದ್ದಾರೆ. ಮಂಡಳಿಯ ಅಧಿಕಾರಿಗಳ ವಿರುದ್ಧ ನೀಡಿದ್ದ ಆ ಒಂದೇ ಒಂದು ಹೇಳಿಕೆ, ಕಿಂಗ್ ಕೊಹ್ಲಿ ಸಂಕಷ್ಟಕ್ಕೆ ಕಾರಣವಾಗಿದೆ. ಕೊಹ್ಲಿ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ಗಂಗೂಲಿ, ಮಾಜಿ ನಾಯಕನಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.
ವಿರಾಟ್ ಕೊಹ್ಲಿಯನ್ನ ಟಾರ್ಗೆಟ್ ಮಾಡ್ತಿದ್ದಾರಾ ಬಿಗ್ಬಾಸ್ ..?
ಕ್ಯಾಪ್ಟನ್ಶಿಪ್ ತ್ಯಜಿಸಿದ್ರು ಕಿಂಗ್ ಕೊಹ್ಲಿಗೆ ಸಂಕಷ್ಟ ತಪ್ಪಿದಲ್ಲ..!
ವಿರಾಟ್ ಕೊಹ್ಲಿ, ಟೆಸ್ಟ್ ಕ್ಯಾಪ್ಟನ್ಶಿಪ್ನಿಂದ ಕೆಳಗಿಳಿದಿದ್ದಾರೆ. ಆದ್ರೆ ವಿರಾಟ್, ಜವಾಬ್ದಾರಿ ಹುದ್ದೆಯಿಂದ ದೂರ ಸರಿದ್ರೂ, ಸಂಕಷ್ಟ ಮಾತ್ರ ಅವರನ್ನೇ ಹಿಂಬಾಲಿಸುತ್ತಲೇ ಇದೆ. ಹೌದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಕೊಹ್ಲಿ, ಪ್ರಸ್ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ರು. ಆಗ ವಿರಾಟ್, ಬಿಸಿಸಿಐ ವಿರುದ್ಧ ಬಹಿರಂಗ ಹೇಳಿಕೆ ನೀಡಿ, ಬಿಗ್ಬಾಸ್ಗಳ ಆಕ್ರೋಶಕ್ಕೆ ಕಾರಣರಾಗಿದ್ರು. ಇದೇ ನೋಡಿ ಈಗ, ವಿರಾಟ್ ಕೊಹ್ಲಿಗೆ ಮುಳುವಾಗಿ ಪರಿಣಮಿಸಿರೋದು.
ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ರಾ ಗಂಗೂಲಿ..?
ಮಾಧ್ಯಮಗಳನ್ನ ವ್ಯತಿರಿಕ್ತ ಹೇಳಿಕೆಗಳನ್ನ ನೀಡಿದ್ದ ವಿರಾಟ್ ಕೊಹ್ಲಿ ವಿರುದ್ಧ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗರಂ ಆಗಿದ್ರು. ಆದ್ರೆ ಗಂಗೂಲಿ, ಎಲ್ಲೂ ತಮ್ಮ ಅಸಮಾಧಾನವನ್ನ ಹೊರಹಾಕಲಿಲ್ಲ. ಬದಲಿಗೆ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಿ, ಉತ್ತರಿಸುವಂತೆ ಸೂಚಿಸಲು ಮುಂದಾಗಿದ್ರಂತೆ..! ಆದ್ರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಗಂಗೂಲಿಯನ್ನ ತಡೆದ್ರಂತೆ.
ಗಂಗೂಲಿಗೆ ಸಮಾಧಾನ ಮಾಡಿದ ಕಾರ್ಯದರ್ಶಿ ಜಯ್ ಶಾ ಹೇಳಿದ್ದೇನು..?
ಗಂಗೂಲಿ-ಕೊಹ್ಲಿ ಪ್ರಕರಣ ತಾರಕಕ್ಕೇ ಏರುವ ಮುನ್ನ, ಜಯ್ ಶಾ ಅಖಾಡಕ್ಕೆ ಧುಮುಕಿದ್ರು. ಬಿಸಿಸಿಐ ಅಧ್ಯಕ್ಷ ಗಂಗೂಲಿ ಕೋಪವನ್ನ ಸಮಾಧಾನ ಪಡಿಸಿದ ಜಯ್ ಶಾ, ತಾಳ್ಮೆಯಿಂದ ಇರುವಂತೆ ಮನವಿ ಮಾಡಿಕೊಂಡ್ರಂತೆ.! ಒಂದು ವೇಳೆ ನೀವು ಕೊಹ್ಲಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ರೆ, ಅದು ತಂಡ ಮತ್ತು ಆಟಗಾರರ ಮೇಲೆ ಪರಿಣಾಮ ಬೀರುತ್ತೆ ಅಂತ ತಿಳಿಸಿದ್ರಂತೆ.
ಕೊಹ್ಲಿ ಕ್ಯಾಪ್ಟನ್ಶಿಪ್ ತ್ಯಜಿಸದಿದ್ದಿದ್ರೆ, ಕಿತ್ತೆಸೆಯಲು ರೆಡಿಯಾಗಿತ್ತು ಬಿಸಿಸಿಐ
ಆದ್ರೆ ಈ ಪ್ರಕರಣ ಇಷ್ಟಕ್ಕೆ ಮುಗಿಯಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ, ಕೊಹ್ಲಿ ನಾಯಕತ್ವ ತ್ಯಜಿಸ್ತಾರಾ ಇಲ್ವಾ ಅಂತ, ಬಿಸಿಸಿಐ ವೇಯ್ಟ್ ಌಂಡ್ ವಾಚ್ ಮಾಡುತ್ತಿತ್ತಂತೆ.! ಒಂದು ವೇಳೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯದಿದ್ದಿದ್ರೆ, ಬಿಸಿಸಿಐ ಕಿತ್ತೆಸೆಯಲು ಪ್ಲಾನ್ ಕೂಡ ಮಾಡಲಾಗಿತ್ತಂತೆ.
ಕೊಹ್ಲಿಯನ್ನ ಕಿತ್ತೆಸೆಯಲು ರೆಡಿಯಾಗಿದ್ದರು
” ಕೊಹ್ಲಿ ಬಿಸಿಸಿಐ ವಿರುದ್ಧ ಬಹಿರಂಗ ಹೇಳಿಕೆಗಳನ್ನ ನೀಡಬಾರದಿತ್ತು. ವಿರಾಟ್ ಮಂಡಳಿ ವಿರುದ್ಧ ಮಾತನಾಡಿದ್ದು ತಪ್ಪು..! ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ಸೋಲಿನ ಬಳಿಕ ಕೊಹ್ಲಿ, ನಾಯಕತ್ವವನ್ನ ತ್ಯಜಿಸಿದ್ರು. ಒಂದು ವೇಳೆ ಕೊಹ್ಲಿ ಏನಾದ್ರೂ ನಾಯಕತ್ವದಿಂದ ಕೆಳಗಿಳಿಯದಿದ್ದಿದ್ರೆ, ಅವರನ್ನ ಕಿತ್ತೆಸೆಯುತ್ತಿದ್ದರು..”
– ಬಿಸಿಸಿಐ ಅಧಿಕಾರಿ
ಒಟ್ಟಿನಲ್ಲಿ ಬಿಸಿಸಿಐ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ಕೊಹ್ಲಿ, ಇದೀಗ ಸಾಲು ಸಾಲು ಸಂಕಷ್ಟಗಳನ್ನ ಎದುರಿಸುತ್ತಿರೋದಂತೂ, ಸುಳ್ಳಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post