ತುಮಕೂರು: ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಇಷ್ಟು ದಿನ ತಣ್ಣಗಾಗಿದ್ದ ಮುಂದಿನ ಸಿಎಂ ವಿಚಾರ ಇದೀಗ ತುಮಕೂರಿನಲ್ಲಿ ಸದ್ದು ಮಾಡ್ತಿದ್ದು, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬೆಂಬಲಿಗರು ಮುಂದಿನ ಸಿಎಂ ನೀವೆ ಎಂದು ಕಹಳೆ ಮೊಳಗಿಸಿದ್ದಾರೆ.
ಕೊರಟಗೆರೆಯ ಚಿಕ್ಕಗುಂಡಗಲ್ ಗ್ರಾಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿ.ಪರಮೇಶ್ವರ್ ಅವರಿಗೆ, ಬೆಂಬಲಿಗರು ಮುಂದಿನ ಸಿಎಂ ನೀವೆ ಎಂದು ಜೈಕಾರ ಹಾಕಿದ್ದಾರೆ. ಇದರಿಂದ ಕೋಪಗೊಂಡ ಅವರು ‘ನಾನು ಸಿಎಂ ಆಗಬೇಕು ಎಂದು ಬಹಿರಂಗವಾಗಿ ಕೂಗ್ಬೇಡಿ’ ಎಂದು ಮನವಿ ಮಾಡಿದ್ದಾರೆ. ನೀವು ಇಲ್ಲಿ ಹೇಳೋಕೆ ಶುರುಮಾಡಿದ್ರೆ. ಅಲ್ಲಿ ನನಗೆ ಹೊಡೆತ ಬೀಳೋಕೆ ಶುರುವಾಗುತ್ತೆ. ಸಿಎಂ ವಿಚಾರ ಎತ್ತಿದ್ರೆ ಬಹಳ ಕಷ್ಟ ಆಗುತ್ತೆ. ನಿಮ್ಮ ಹಾಗೂ ಪರಮಾತ್ಮನ ಆಶೀರ್ವಾದ ಇದ್ರೆ ನಾನು ಮುಖ್ಯಮಂತ್ರಿ ಆಗ್ತಿನಿ, ಇವಾಗ ಸುಮ್ನಿರಿ ಹಾಗೇ ಕೂಗಬೇಡಿ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಮುಂದಿನ ಸಿಎಂ ವಿಚಾರವನ್ನು ನಮ್ಮ ಪಕ್ಷದ ಹಿರಿಯ ಮುಖಂಡರು, ಮತ್ತು ಹೈಕಮಾಂಡ್ನವ್ರು ನಿರ್ಧಾರ ಮಾಡ್ತಾರೆ. ಅಲ್ಲಿಯವರೆಗೆ ನಾವು ಸುಮ್ಮನೆ ಇರಬೇಕು. ನನಗೆ ನಿಮ್ಮ ಆಶೀರ್ವಾದವೊಂದಿದ್ದರೆ ಸಾಕು. ಇದರಿಂದ ತೊಂದರೆಯಾಗೋದು ನನಗೆ ದಯವಿಟ್ಟು ಆ ರೀತಿಯಲ್ಲಿ ಕೂಗಬೇಡಿ ಎಂದು ಪರಮೇಶ್ವರ್ ತಮ್ಮ ಬೆಂಬಲಿಗರ ಬಳಿ ಕೋರಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post