1. ಹಾಲ್ನ ಮೇಲ್ಛಾವಣಿ ಕುಸಿತ, ಐವರಿಗೆ ಗಾಯ
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಭಾರಿ ಅನಾಹುತವೊಂದು ತಪ್ಪಿದೆ. ಗೇಟ್ ನಂಬರ್ 8ರಲ್ಲಿನ ಪಾರ್ಟಿ ಹಾಲ್ನ ಮೇಲ್ಛಾವಣಿ ಕುಸಿದಿದ್ದರಿಂದ ಐವರು ಕಾರ್ಮಿಕರು ಗಾಯಗೊಂಡಿದ್ದು, ಓರ್ವ ಕಾರ್ಮಿಕನಿಗೆ ಕೈ ಮುರಿದಿದೆ. ಕಾರ್ಯಕ್ರಮದ ಹಿನ್ನೆಲೆ ಸೆಟ್ ನಿರ್ಮಾಣ ಮಾಡಲಾಗಿತ್ತು. ಕೋವಿಡ್ ಹೆಚ್ಚಳವಾದ್ದರಿಂದ ಕಾರ್ಯಕ್ರಮ ರದ್ದಾಗಿತ್ತು. ಹೀಗಾಗಿ, ಡೆಕೋರೇಷನ್ ಮಾಡಿದ್ದ ಸೆಟ್ ಬಿಚ್ಚುವ ವೇಳೆ ಮೇಲ್ಛಾವಣಿ ಕುಸಿದಿದೆ.
2. ಕೀಲು ತಜ್ಞ ಡಾ. ಸಲಾವುದ್ದಿನ್ ಎಸಿಬಿ ಬಲೆಗೆ
ರೋಗಿಯ ಕುಟುಂಬಸ್ಥರ ಬಳಿ ಹಣ ಕೇಳುವಾಗ ಎಸಿಬಿಗೆ ರೆಡ್ ಹ್ಯಾಂಡಾಗಿ ವೈದ್ಯ ಸಿಕ್ಕಿ ಬಿದ್ದಿರುವ ಘಟನೆ ಕೊಪ್ಪಳದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲುಬು ಮತ್ತು ಕೀಲು ತಜ್ಞ ಡಾ ಸಲಾವುದ್ದಿನ್ ಹಾಗೂ ಗ್ರೂಪ್ ಡಿ ನೌಕರ ವೀರೇಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಆಸ್ಪತ್ರೆಗೆ ದಾಖಲಾದ ರೋಗಿ ಬಳಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲು 6 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.
3. ಸೋಮವಾರದಿಂದ ಮತ್ತೆ ಶಾಲೆಗಳು ಆರಂಭ
ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಸೋಮವಾರದಿಂದ ಮತ್ತೆ ಶಾಲೆ ಆರಂಭವಾಗಲಿವೆ ಅಂತಾ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಕಳೆದ ಜನವರಿ 13 ರಂದು ಹುಬ್ಬಳ್ಳಿ ಹಾಗೂ ಧಾರವಾಡ ತಾಲೂಕಿನ 1 ರಿಂದ 8 ನೇ ತರಗತಿಗಳನ್ನು ಬಂದ್ ಮಾಡಿ ಆದೇಶ ಮಾಡಲಾಗಿತ್ತು. ಎರಡೂ ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಜಿಲ್ಲಾಡಳಿತ ಶಾಲೆ ಬಂದ್ ಮಾಡಿತ್ತು. ಇದೀಗ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಹಿನ್ನಲೆ ಮತ್ತೆ ಶಾಲೆ ಆರಂಭಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.
4. ‘ಮೂರನೇ ಪೀಠ ಆದ್ರೆ ತಪ್ಪೇನಿಲ್ಲ’
ವೀರಶೈವ ಲಿಂಗಾಯತ ಪಂಚಮಸಾಲಿ ಮೂರನೇ ಪೀಠದ ಹಿಂದೆ ನಿರಾಣಿ ಕೈವಾಡವಿದೆ ಎಂಬ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಈ ಸಮಾಜಕ್ಕಾಗಿ ನಿರಾಣಿ ಕುಟುಂಬ ಏನು ಮಾಡಿದೆ ಅನ್ನೋದು ರಾಜ್ಯದ ಜನತೆಗೆ ಗೊತ್ತಿದೆ. ನನ್ನಲ್ಲಿ ಎರಡು ಪೀಠಗಳು ಒಂದೇ ಎಂಬ ಭಾವನೆಯು ಇದೆ. ಮೂರನೇ ಪೀಠದ ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಮೂರನೇ ಪೀಠ ಆದ್ರೆ ತಪ್ಪಲ್ಲ, ಸಮಾಜ ದೊಡ್ಡದಿದೆ ಎಂದು ನಿರಾಣಿ ಹೇಳಿದ್ರು.
5. ಪ್ರವಾಸಿಗರಿಲ್ಲದೆ ಭಣಗುಡುತ್ತಿರುವ ಸಸ್ಯೋದ್ಯಾನ
ವೀಕೆಂಡ್ ಕರ್ಫ್ಯೂ ರದ್ದಾದ್ರು ಗದಗನ ಬಿಂಕದಕಟ್ಟಿಯ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ದತ್ತ ಪ್ರವಾಸಿಗರು ಬರುತ್ತಿಲ್ಲ.ಈ ಹಿಂದೆ ವೀಕೆಂಡ್ ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಸ್ಯೋದ್ಯಾನಕ್ಕೆ ಪ್ರವಾಸಿಗರು ಬರುತ್ತಿದ್ದರು. ಆದ್ರೆ ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವದರಿಂದ ಸಸ್ಯೋದ್ಯಾನ ಖಾಲಿ ಖಾಲಿಯಾಗಿದೆ.
6. 16 ವರ್ಷಗಳ ಬಳಿಕ ಆರೋಪಿ ಅರೆಸ್ಟ್
ತುಮಕೂರಲ್ಲಿ ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈ ಮೂಲಕ 16 ವರ್ಷಗಳ ಹಿಂದಿನೆ ಕೇಸ್ ಅನ್ನು ಪೊಲೀಸರು ಬೇಧಿಸಿದ್ದಾರೆ. ಅಪಘಾತ ಮಾಡಿ 2006 ರಲ್ಲಿ ರಾಮ ಜೈಸ್ಟಾರ್ ಎಂಬ ಆರೋಪಿ ಬೇಲ್ ಪಡೆದು ಎಸ್ಕೇಪ್ ಆಗಿದ್ದ. ಯರಗುಂಟೇಶ್ವರ ದೇಗುಲದ ಬಳಿ ಅಪಘಾತ ಮಾಡಲಾಗಿತ್ತು. ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಪಶುವೈದ್ಯಾಧಿಕಾರಿಗಳು ಸಾವನ್ನಪ್ಪಿದ್ದರು. ಆರೋಪಿ ಬಂಧನ ಬಳಿಕ ಜಾಮೀನಿನ ಮೇಲೆ ಹೊರ ಬಂದು ಅಂದಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಹಳೆಯ ಪ್ರಕರಣಗಳ ಪರಿಶೀಲನೆ ವೇಳೆ ಈ ಕೇಸ್ ಕಂಡು ಬಂದಿತ್ತು. ಬಾಂಬೆಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ ಪೊಲೀಸರು ಕಡೆಗೂ ಬಂಧಿಸಿದ್ದಾರೆ.
7. ಇಂದು ತಮಿಳುನಾಡು ಸಂಪೂರ್ಣ ಲಾಕ್‌ಡೌನ್
ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಿ ಸಿಎಂ ಎಂ.ಕೆ. ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ. ಜನವರಿ 16ರಂದು ವಿಧಿಸಿದ್ದ ಲಾಕ್‌ಡೌನ್ ವೇಳೆಯ ನಿಯಮಗಳೇ ಜನವರಿ 23ಕ್ಕೂ ಅನ್ವಯಿಸುತ್ತವೆ ಎಂದು ತಿಳಿಸಿದ್ದಾರೆ. ಇನ್ನು, ಸೋಂಕಿನ ಪ್ರಕರಣಗಳು ಹರಡುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಸಿಎಂ ಸ್ಟಾಲಿನ್ ಮನವಿ ಮಾಡಿಕೊಂಡಿದ್ದಾರೆ.
8. ಎನ್ ಕೌಂಟರ್ನಲ್ಲಿ ಇಬ್ಬರು ಉಗ್ರರು ಫಿನಿಶ್
ಭಾರತದ ಗಡಿಯಲ್ಲಿ ಉಗ್ರರ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಲಾಗಿದ್ದು, ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಶೋಪಿಯಾನ್ ಜಿಲ್ಲೆಯ ಕಿಲ್ ಬಾಬ್ನಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಉಗ್ರರು ಮತ್ತು ಸೇನೆಯ ಮಧ್ಯೆ ಗುಂಡಿನ ಚಕಮಕಿ ಮುಂದುವರೆದಿದೆ. ಘಟನಾ ಸ್ಥಳಕ್ಕೆ ಹೆಚ್ಚಿನ ಯೋಧರು ಧಾವಿಸಿ ಇಡೀ ಪ್ರದೇಶ ಸುತ್ತುವರೆದು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇನ್ನು ಎನ್ ಕೌಂಟರ್ ಗಳಲ್ಲಿ ಲಷ್ಕರ್-ಎ-ತೊಯ್ಬಾ ಉನ್ನತ ಕಮಾಂಡರ್ ಸಲೀಂ ಪರ್ರೆ ಸೇರಿದಂತೆ ಇಬ್ಬರು ಉಗ್ರರು ಸಾವನಪ್ಪಿದ್ದಾರೆ.
9. ಒಂದು ಸೀನ್ಗಾಗಿ 48 ರಿಟೇಕ್ ತೆಗೆದುಕೊಂಡ ನಟಿ
ಬಾಲಿವುಡ್ನ ಹಾಟ್ ಬೆಡಗಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು.ನಟನೆ ವಿಷಯಕ್ಕೆ ಬಂದರೆ ಯಾವುದೇ ಪಾತ್ರಕ್ಕೂ ಸೈ. ಒನ್ಟೇಕ್ಆರ್ಟಿಸ್ಟ್ ಎಂದೇ ಖ್ಯಾತರು. ಇಂತಹ ನಟಿ ಗೆಹ್ರಿಯಾನ್ ಸಿನಿಮಾದ ಒಂದು ಸನ್ನಿವೇಶಕ್ಕಾಗಿ ಬರೋಬ್ಬರಿ 48 ರಿಟೇಕ್ ತೆಗೆದುಕೊಂಡಿದ್ದರಂತೆ.ಗೆಹ್ರಿಯಾನ್ ಸಿನಿಮಾ ಪ್ರಚಾರದ ವೇಳೆ ತಾವು ಈ ಸಿನಿಮಾದ ಸನ್ನಿವೇಶವೊಂದರಲ್ಲಿ ನಟಿಸಲು ಬರೋಬ್ಬರಿ 48 ಟೇಕ್ ಪಡೆದುಕೊಂಡ ಕುತೂಹಲಕಾರಿ ವಿಷಯವನ್ನು ದೀಪಿಕಾ ಹಂಚಿಕೊಂಡಿದ್ದಾರೆ.
10. ಭಾರತದಲ್ಲೇ ನಡೆಯಲಿದೆ ಐಪಿಎಲ್ ಟೂರ್ನಿ?
ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ 2022ರ ಸೀಸನ್ ಭಾರತದಲ್ಲಿಯೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐನ ಅಧಿಕಾರಿಗಳು ತಳಿಸಿದ್ದಾರೆ. ಕೊರೊನಾ COVID-19 ಸಾಂಕ್ರಾಮಿಕ ಸೋಂಕು ಕಡಿಮೆಯಾದರೆ, ಭಾರತದಲ್ಲೇ IPL 2022 ಅನ್ನು ಆಯೋಜಿಸುವ ಕುರಿತು ಬಿಸಿಸಿಐ ನಿರ್ಧರಿಸಿದೆ. ಆದರೆ ಈ ತೀರ್ಮಾನವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post