ಟೆಸ್ಟ್ ಸರಣಿ ಆಯ್ತು.. ಏಕದಿನ ಸರಣಿಯಲ್ಲೂ ಟೀಮ್ ಇಂಡಿಯಾ, ಮುಖಭಂಗ ಅನುಭವಿಸಿತು. ಟೂರ್ನಿ ಆರಂಭಕ್ಕೂ ಮುನ್ನ, ನಾವೇ ಫೇವರಿಟ್ಸ್ ಅಂತಿದ್ದ ಟೀಮ್ ಇಂಡಿಯಾಕ್ಕೆ, ದಕ್ಷಿಣ ಆಫ್ರಿಕಾ ಸರಿಯಾಗೇ ತಿರುಗೇಟು ನೀಡ್ತು. ಆದ್ರೆ ಸೋಲಿಗೆ ಅಸಲಿ ಕಾರಣ ಏನು..? ಯಾರನ್ನ ಹೊಣೆ ಮಾಡಬೇಕು..? ಆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಕೋಚ್ ರಾಹುಲ್ ದ್ರಾವಿಡ್ ಗೇಮ್ಪ್ಲಾನ್ ಉಲ್ಟಾ ಆಯ್ತಾ..?
ಏಕದಿನ ಸರಣಿ ಸೋಲಿಗೆ ಯಾರು ಹೊಣೆ..?
ಟೆಸ್ಟ್ ಸರಣಿ ಸೋತ ಬಳಿಕ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಕಮ್ಬ್ಯಾಕ್ ಮಾಡುತ್ತೆ ಅಂತ, ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ನಿರೀಕ್ಷಿಸಿದ್ರು. ಆದ್ರೆ ಆ ನಿರೀಕ್ಷೆಗಳೆಲ್ಲಾ, ಸುಳ್ಳಾಗಿವೆ. ಏಕದಿನ ಸರಣಿಯನ್ನ ಕೈಚೆಲ್ಲಿರುವ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಮುಖಭಂಗ ಅನುಭವಿಸಿತು. ಆದ್ರೆ ಸರಣಿ ಸೋಲಿಗೆ ಕಾರಣ ಯಾರು..? ನಾಯಕ ಕೆ.ಎಲ್.ರಾಹುಲ್ ಆ..? ಅಥವಾ ಕೋಚ್ ರಾಹುಲ್ ದ್ರಾವಿಡ್ ಆ..? ಈ ಪ್ರಶ್ನೆಗೆ, ಟೀಮ್ ಮ್ಯಾನೇಜ್ಮೆಂಟ್ ಉತ್ತರಿಸಬೇಕಿದೆ.
ಕೆ.ಎಲ್.ರಾಹುಲ್ಗೆ ನಾಯಕ ಪಟ್ಟ ನೀಡಿದ್ದೇ ತಪ್ಪಾಯ್ತಾ..?
ಮೊದಲೆರೆಡು ಏಕದಿನ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್, ಅತ್ಯಂತ ಕಳಪೆಯಾಗಿ ತಂಡವನ್ನ ಮುನ್ನಡೆಸಿದ್ರು. ಬೌಲರ್ಗಳ ರೊಟೇಶನ್, ಫೀಲ್ಡ್ ಪ್ಲೇಸ್ಮೆಂಟ್ ಅಪ್ ಟು ಮಾರ್ಕ್ ಇರಲಿಲ್ಲ..ಹಾಗೇ ಅಗ್ರೆಸಿವ್ ಕ್ಯಾಪ್ಟನ್ಸಿ ಜೊತೆಗೆ ಅಟ್ಯಾಕಿಂಗ್ ಮೈಂಡ್ಸೆಟ್ ಕೂಡ ಇರಲಿಲ್ಲ. ರಾಹುಲ್ ಕ್ಯಾಪ್ಟನ್ಸಿಯಲ್ಲಿ ಪಾಸಿಟಿವ್ಗಿಂತ ಹೆಚ್ಚು ನೆಗೆಟೀವ್ ಅಪ್ರೋಚೇ ಜಾಸ್ತಿಯಾಗಿತ್ತು. ಇನ್ನು ರಾಹುಲ್ ಉತ್ತಮ ಗೇಮ್ ರೀಡರ್ ಕೂಡ ಆಗಿರಲಿಲ್ಲ. ಹಾಗೇ ಕ್ಯಾಪ್ಟನ್ ರಾಹುಲ್ ಟ್ಯಾಕ್ಟಿಕ್ಸ್ ಸಹ, ಅತ್ಯಂತ ಕಳಪೆಯಾಗಿತ್ತು. ರಾಹುಲ್ ಪೊಟೆನ್ಶಿಯಲ್ ಅನ್ನ, ಈಗ ಪ್ರಶ್ನಿಸಲೇಬೇಕು..! ಇದೆಲ್ಲಾ ತಿಳಿದಿದ್ರು, ರಾಹುಲ್ಗೆ ನಾಯಕ ಪಟ್ಟ ನೀಡಿದ್ದು ತಪ್ಪು. ಇದರ ಬದಲು ರಿಶಭ್ ಪಂತ್ಗೆ ನಾಯಕಪಟ್ಟ ನೀಡಿದ್ರೆ, ಒಂದು ಒಳ್ಳೆ ಪ್ರಯೋಗವಾಗ್ತಿತ್ತು.
ಕೋಚ್ ದ್ರಾವಿಡ್ಗೆ ಅತಿಯಾದ ಹೈಪ್ ನೀಡಲಾಯ್ತಾ..?
ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆಗಿದ್ದೇ ತಡ. ಈ ಮಾಜಿ ಕ್ರಿಕೆಟಿಗನಿಗೆ, ಎಲ್ಲೆಡೆಯಿಂದ ಸಿಕ್ಕಾಪಟ್ಟೆ ಹೈಪ್ ನೀಡಲಾಯ್ತು. ಆದ್ರೆ ದ್ರಾವಿಡ್, ಮೊದಲ ಫಾರಿನ್ ಅಸೈನ್ಮೆಂಟ್ನಲ್ಲೇ ಫೇಲ್ ಆಗಿದ್ದಾರೆ. ಅಪಾರ ಅನುಭವ, ಎಕ್ಸಲೆಂಟ್ ಮ್ಯಾನ್ ಮ್ಯಾನೇಜ್ಮೆಂಟ್ ಸ್ಕಿಲ್ಸ್ ಹೊಂದಿರುವ ದ್ರಾವಿಡ್, ತಂಡದ ಸೋಲಿಗೆ ಕಾರಣರಾದ್ರಾ..? ದ್ರಾವಿಡ್ ಗೇಮ್ಪ್ಲಾನ್ ವರ್ಕ್ಔಟ್ ಆಗ್ಲಿಲ್ಲ. ಸ್ಟ್ರಾಟಜಿ ಕೂಡ ಕೈಹಿಡಿಯಲಿಲ್ಲ. ಬೆಸ್ಟ್ ಟೀಮ್ ಕೂಡ ಪಿಕ್ ಮಾಡಲಿಲ್ಲ.! ಒಬ್ಬ ಕೋಚ್, ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು. ಅವರಿಂದ ಪರ್ಫಾಮೆನ್ಸ್ ಹೊರತೆಗೆಯಬೇಕು..! ಆದ್ರೆ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರ ಬಾಡಿ ಲ್ಯಾಂಗ್ವೇಜ್, ಫುಲ್ ಡಲ್ ಆಗಿತ್ತು. ಆಟಗಾರರಲ್ಲಿ ಕಾನ್ಫಿಡೆನ್ಸ್ ಕೂಡ ಮಾಯವಾಗಿತ್ತು.
ತಂಡದ ಆಟಗಾರರೂ ಸೋಲಿನ ಹೊಣೆ ಹೊರಬೇಕಾ..?
ಕ್ಯಾಪ್ಟನ್, ಕೋಚ್ ಅಷ್ಟೇ ಅಲ್ಲ. ತಂಡದ ಆಟಗಾರರೂ ಸೋಲಿನ ಹೊಣೆ ಹೊರೆ ಹೊರಬೇಕು..! ಯಾಕಂದ್ರೆ ಮೊದಲೆರೆಡು ಏಕದಿನ ಪಂದ್ಯಗಳಲ್ಲಿ ಮೂರು-ನಾಲ್ಕು ಮಂದಿ ಆಟಗಾರರು ಬಿಟ್ರೆ, ಉಳಿದ್ಯಾರು ಜವಾಬ್ದಾರಿಯುತ ಆಟ ಪ್ರದರ್ಶಿಸಲಿಲ್ಲ. ಕಳಪೆ ಬ್ಯಾಟಿಂಗ್, ಕಳಪೆ ಬೌಲಿಂಗ್, ಕೆಟ್ಟ ಫೀಲ್ಡಿಂಗ್, ಫೈಟಿಂಗ್ ಸ್ಪಿರಿಟ್.. ಇವೆಲ್ಲವೂ ತಂಡದ ಹಿನ್ನಡೆಗೆ ಕಾರಣವಾಯ್ತು.
ಒಟ್ಟಿನಲ್ಲಿ ಬಿಸಿಸಿಐ ಏಕದಿನ ಸರಣಿ ಸೋಲಿಗೆ ಕಾರಣ ಯಾರು ಅನ್ನೋದನ್ನ ನಿರ್ಧರಿಸಬೇಕಿದೆ. ಹಾಗೇ ಸೋಲಿಗೆ ಕಾರಣಗಳನ್ನ ಹುಡುಕಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post