ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ದಿನಗಣನೆ ಆರಂಭದ ಬೆನ್ನಲ್ಲೇ, ಚಟುವಟಿಕೆಗಳು ಜೋರಾಗಿವೆ. ಆಟಗಾರರ ಆಯ್ಕೆ, ಹರಾಜಿನ ಪ್ರಕ್ರಿಯೆ ಹೀಗೆ ಹಲವು ವಿಚಾರಗಳಲ್ಲಿ ಫ್ರಾಂಚೈಸಿಗಳು ಬ್ಯುಸಿಯಾಗಿವೆ.
ಆಟಗಾರರ ಆಯ್ಕೆ, ಹರಾಜಿಗೆ ಸಿದ್ಧತೆ ಹೀಗೆ ಹಲವು ಚಟುವಟಿಗಳು ಫ್ರಾಂಚೈಸಿಗಳಲ್ಲಿ ನಡೀತಿದೆ. ಆದ್ರೆ, ಬಿಸಿಸಿಐ ಮಾತ್ರ ಇನ್ನೂ ಐಪಿಎಲ್, ಭಾರತದಲ್ಲಾ? ವಿದೇಶದಲ್ಲಾ? ಅನ್ನೋದನ್ನೇ ಫೈನಲ್ ಮಾಡಿಲ್ಲ.
ಬಿಸಿಸಿಐನ ಈ ವಿಳಂಬ ನೀತಿ ಫ್ರಾಂಚೈಸಿಗಳನ್ನ ಗೊಂದಲಕ್ಕೆ ಸಿಲುಕಿಸಿದ್ದು, ಮಾರ್ಕೆಟಿಂಗ್ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಯೂ ತಂಡಗಳನ್ನ ಕಾಡ್ತಿದೆ ಎನ್ನಲಾಗಿದೆ.
ಈ ಬಾರಿಯ ಐಪಿಎಲ್ ಟೂರ್ನಿಗಳನ್ನ ಭಾರತದಲ್ಲಿಯೇ ಮಾಡೋದಾಗಿ ಬಿಸಿಸಿಐ ಈ ಹಿಂದೆ ಪ್ರಕಟ ಮಾಡಿತ್ತು. ಆದರೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಐಪಿಎಲ್ ಟೂರ್ನಿಗಳನ್ನ ವಿದೇಶದಲ್ಲಿ ನಡೆಸಬೇಕಾಗುವ ಸಂದರ್ಭ ಬರಬಹುದು ಎಂಬ ಪ್ರಸ್ತಾಪ ಬಿಸಿಸಿಐನಲ್ಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post