ಕಥೆ ಚೆನ್ನಾಗಿದ್ದರೆ ಸಿನಿಮಾದಲ್ಲಿ ಯಾವುದೇ ದೊಡ್ಡ ಸ್ಟಾರ್ ಇರಬೇಕಿಲ್ಲ, ಅದು ಹಿಟ್ ಆಗುತ್ತದೆ ಎಂದು ತೋರಿಸಿಕೊಟ್ಟವರು ನಟ ನಿರ್ದೇಶಕ ಡಾರ್ಲಿಂಗ್ ಕೃಷ್ಣ. 2020 ರಲ್ಲಿ ಕೊರೊನಾ ಪೀಕ್ ಲೆವೆಲ್ಗೆ ಇದ್ದ ಸಮಯದಲ್ಲೂ, ‘ಲವ್ ಮಾಕ್ಟೇಲ್’ ಸಿನಿಮಾ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ‘ಲವ್ ಮಾಕ್ಟೇಲ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಡಾರ್ಲಿಂಗ್ ಕೃಷ್ಣ. ಜೊತೆಗೆ ನಟನೆಯನ್ನೂ ಮಾಡಿ ಸೈ ಎನಿಸಿಕೊಂಡಿದ್ದರು. ಲವ್ ಮಾಕ್ಟೇಲ್ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣನಿಗೆ ಜೋಡಿಯಾಗಿ ಮಿಲನ ನಾಗರಾಜ್ ಕಾಣಿಸಿಕೊಂಡಿದ್ದು,ಇಬ್ಬರ ನಟನೆಗೆ ಚಿತ್ರಪ್ರೇಮಿಗಳು ಫಿದಾ ಆಗಿದ್ದರು.
ಆ ಯಶಸ್ಸಿನ ನಂತರ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್’ -2 ಮಾಡಲು ಸಿದ್ದರಾಗಿದ್ದು, ಸಿನಿಮಾವನ್ನೂ ಮುಗಿಸಿ ಯಾವಾಗ ಬಿಡುಗಡೆ ಮಾಡಲಿ ಅಂತ ಕಾದು ಕುಳಿತಿದ್ದಾರೆ. ಅಷ್ಟರಲ್ಲೇ ಕೃಷ್ಣನ ಮಡದಿ ಬಾಯಿಗೆ ಬಂದ ಹಾಗೆ ಬೈದಿದ್ದಾರೆ. ಅರೆ ಸಿನಿಮಾ ರಿಲೀಸ್ ಆಗೋದುಕ್ಕೂ ಮಿಲನಾ ಬೈದಿರೋದಕ್ಕು ಏನು ಸಂಬಂಧ ಅಂತೀರಾ? ಹಗಾದ್ರೆ ಸ್ಟೋರಿ ನೋಡಿ.
‘ಲವ್ ಮಾಕ್ಟೇಲ್’-2 ಸಿನಿಮಾವನ್ನು ಪೂರ್ಣಗೊಳಿಸಿ ಡಾರ್ಲಿಂಗ್ ಕೃಷ್ಣ ಪ್ರೀಯಾಗಿದ್ದಾರೆ. ‘ಲವ್ ಮಾಕ್ಟೇಲ್’-2 ಸಿನಿಮಾಗೆ ಬಂಡವಾಳ ಹೂಡಿರೋದು ಕೃಷ್ಣನ ಮಡದಿ ಮಿಲನಾ ನಾಗರಾಜ್. ಸಿನಿಮಾ ಮುಗಿದರೂ ಇನ್ನೂ ಟ್ರೈಲರ್ ರಿಲೀಸ್ ಮಾಡಿಲ್ಲಾ ಅಂತ ಉಗಿದು ಉಪ್ಪು ಹಾಕಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ನೋಡಿ.
ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಹೆಂಡತಿಯ ಬರ್ತ್ಡೇ ವಿಶ್ ಮಾಡಲು ಮರೆತ ಹೀರೋಗೆ ಹೀರೋಯಿನ್ ಬೈಯ್ಯುವ ದೃಶ್ಯ ಗಮನ ಸೆಳೆದಿತ್ತು. ಅದೇ ಮಾದರಿಯಲ್ಲಿ ಈಗ ಮಿಲನಾ ನಾಗರಾಜ್ ಅವರು ಡಾರ್ಲಿಂಗ್ ಕೃಷ್ಣನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು,ಅದು ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಇಬ್ಬರ ನಡುವಿನ ಸಂಭಾಷಣೆ ಹೀಗಿದೆ..
ಕೃಷ್ಣ: ಯಾಕ್ ಚಿನ್ನೀ..?
ಮಿಲನಾ: ಏನು.. ಚಿನ್ನಿನಾ? ಯಾವಳೋ ಚಿನ್ನಿ? ಅವ್ರು ಯಾರ್ಯಾರೋ ಟ್ರೇಲರ್ ರಿಲೀಸ್ ಮಾಡ್ಕೊಂಡು ಓಡಾಡ್ತಾ ಇದಾರೆ. ನಿಂಗೇನೋ ಬಂದಿರೋದು ದೊಡ್ ರೋಗ? ಟ್ರೇಲರ್ ರೆಡಿ ಆಗಿ ಒಂದು ತಿಂಗಳಾಯ್ತು ತಾನೆ? ಇವತ್ತು ರಿಲೀಸ್ ಆಗತ್ತೆ, ನಾಳೆ ರಿಲೀಸ್ ಆಗತ್ತೆ ಅಂತ ನಾನು ಕಾಯ್ತಾನೇ ಇದೀನಿ. ನೀವು ಬೇರೆ ಶೂಟಿಂಗ್ನಲ್ಲಿ ಮಜಾ ಮಾಡ್ಕೊಂಡು ಓಡಾಡ್ತಾ ಇದೀರಾ?
ಕೃಷ್ಣ: ನಾನು ಶೂಟಿಂಗ್ಗೆ ಹೋಗೋದು ಶೂಟಿಂಗ್ ಮಾಡೋಕೆ. ಮಜಾ ಮಾಡೋಕಲ್ಲ.
ಮಿಲನಾ: ಆಹಾಹಾ.. ನೋಡಿದೀನಿ ನಿಮ್ಮ ರೀಸೆಂಟ್ ಫೋಟೋಶೂಟ್ನಾ..
ಕೃಷ್ಣ: ಅಲ್ಲಾ.. ಅದು ಏನಾಯ್ತು ಅಂದ್ರೆ…
ಮಿಲನಾ: ಮನೆಗೆ ಬಂದವರಿಗೆಲ್ಲ ಟ್ರೇಲರ್ ನೋಡಿ ಟ್ರೇಲರ್ ನೋಡಿ ಅಂತ ಹಲ್ಲು ಕಿಸ್ಕೊಂಡು ತೋರ್ಸೋಕೆ ಆಗತ್ತೆ. ಟ್ರೇಲರ್ ಮಾಡಿರೋದು ಜನರಿಗೆ ತೋರಿಸೋಕಾ ಅಥವಾ ಮನೆಗೆ ಬಂದವರಿಗೆ ತೋರಿಸೋಕಾ?
ಕೃಷ್ಣ: ಯಾಕೆ ತೋರಿಸ್ತೀನಿ ಅಂದ್ರೆ.. ಅವರ ಒಪೀನಿಯನ್ ಬೇಕಾಗತ್ತಲ್ಲಾ…
ಮಿಲನಾ: ಹೋ.. ಒಪೀನಿಯನ್? ನೀವು ಒಪೀನಿಯನ್ ತಗೋಳೋದು? ಶೂಟಿಂಗ್ನಲ್ಲಿ ನಾನು ಏನಾದರೂ ಒಪೀನಿಯನ್ ಕೊಡೋಕೆ ಬಂದ್ರೆ ಡೈರೆಕ್ಟರ್ ನಾನಾ ನೀನಾ ಅಂತ ಕಿಂಡಲ್ ಮಾಡೋಕೆ ಆಗತ್ತೆ. ದುಡ್ಡು ಹಾಕಿ ಕೂತಿರುವ ಪ್ರೊಡ್ಯೂಸರ್ಗೆ ಏನ್ ಬೆಲೆ ಇಲ್ವಾ?
ಕೃಷ್ಣ: ಅಮ್ಮ.. ಈಗೇನು ಟ್ರೇಲರ್ ತಾನೆ? ರಿಲೀಸ್ ಮಾಡ್ತೀನಿ.
ಮಿಲನಾ: ಹೇ.. ಫಸ್ಟ್ ಪಾರ್ಟ್ನಲ್ಲೇ ನಾನು ಸತ್ತು ಹೋಗಾಯ್ತು. ಸೆಕೆಂಡ್ ಪಾರ್ಟ್ನಲ್ಲಿ ನೀನು ಏನ್ ಮಾಡಿದರೇ ನಂಗೇನು ಆಗಬೇಕಿದೆ? ಹೋಗಲೋ.
ನೋಡುದ್ರಲ್ಲಾ ಮಿಲನಾ ಆ್ಯಂಡ್ ಕೃಷ್ಣನ ಲವ್ ಮಾಕ್ಟೇಲ್ನ್ನ. ಸದ್ಯ ಆದಷ್ಟು ಬೇಗ ‘ಲವ್ ಮಾಕ್ಟೇಲ್’-2 ಟ್ರೈಲರ್ನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post