ಅರೇಂಜ್ ಮ್ಯಾರೇಜ್‌ನಿಂದ ಕಾಪಾಡಿ, ನನಗೆ ಪ್ರಪೋಸ್ ಮಾಡಿ ಎಂದು ದೊಡ್ಡ ಹೋಲ್ಡಿಂಗ್ವೊಂದು ಹಾಕಿ ಭಾರೀ ಸುದ್ದಿಯಾಗಿದ್ದರು ಲಂಡನ್ ಮೂಲದ ಯುವಕ. ಇವರ ಹೆಸರು ಮೊಹಮ್ಮದ್ ಮಲಿಕ್. ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ಮೂಲದ ಇವರಿಗೆ 29 ವರ್ಷ.
ನನ್ನನ್ನು ಆರೆಂಜ್ಡ್ ಮ್ಯಾರೇಜ್‌ನಿಂದ ರಕ್ಷಿಸಿ ಎಂದು ಪ್ರಚಾರ ಮಾಡಿದ್ದ ಇವರ ಹೋಲ್ಡಿಂಗ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈ ಹೋಲ್ಡಿಂಗ್ ವೈರಲ್ ಆಗುತ್ತಿದ್ದಂತೆಯೇ ಮಲಿಕ್ಗೆ ಬರೋಬ್ಬರಿ 5 ಸಾವಿರ ಮಂದಿ ಪ್ರಪೋಸಲ್ಸ್ ಬಂದಿವೆ ಎನ್ನಲಾಗಿದೆ.
@muzmatch doing what we do best. Make you smile. Make you think. Make you get married @findmalikawife pic.twitter.com/Sri2wdcUY7
— Shahzad Younas (@ShahzadYounas_) January 21, 2022
ಹೋಲ್ಡಿಂಗ್ನಲ್ಲಿ ಹಾಕಲಾಗಿದ್ದ findMALIKawife.com ಎಂಬ ವೆಬ್‌ಸೈಟ್‌ವೊಂದರ ಲಿಂಕ್ ಬಳಸಿ 5 ಸಾವಿರ ಮಂದಿ ತಮ್ಮ ಪ್ರೊಫೈಲ್ ಕಳಿಸಿದ್ದಾರೆ. ಸದ್ಯ ಈ ಮೊಹಮ್ಮದ್ ಮಲಿಕ್ ಜಾಹೀರಾತು ನೋಡಿ 5 ಸಾವಿರ ಮಂದಿ ಪ್ರೊಪೋಸ್ ಮಾಡಿರೋ ಸುದ್ದಿ ಅಂತರಾಷ್ಟ್ರೀಯಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈಗ ನನಗೆ ಹುಡುಗಿಯನ್ನು ಸೆಲೆಕ್ಟ್ ಮಾಡೋಕೆ ಹೆಲ್ಪ್ ಮಾಡಿ ಎಂದು ಕೇಳಿಕೊಂಡಿದ್ದಾರೆ ಮಲಿಕ್.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post