ಟಾಲಿವುಡ್, ಕಾಲಿವುಡ್, ಬಾಲಿವುಡ್ನಲ್ಲಿ ಬಹುಭಾಷಾ ನಟಿ ಪೂಜಾ ಹೆಗ್ಡೆ, ಈಗ ಮೋಸ್ಟ್ ವಾಂಟೆಡ್ ಹೀರೋಯಿನ್. ಯಾವ ವುಡ್ಗಾದರೂ ಸ್ಟಾರ್ ಹೀರೋ ಜೊತೆಗೆ, ಈ ಹೀರೋಯಿನ್ನೇ ಬೇಕು ಅಂತಿದ್ದಾರೆ ನಿರ್ಮಾಪಕರು. ಅದರಲ್ಲೂ ಪ್ರಭಾಸ್ ಜೊತೆ ನಟಿಸಿರುವ ‘ರಾಧೆ ಶ್ಯಾಮ್’ ಸಿನಿಮಾದಲ್ಲೂ ಫುಲ್ ಟೈಮ್ ಲವ್ ಕಪಲ್ ಆಗಿ ಕಾಣಿಸಿಕೊಂಡಿದ್ದಾರೆ ಪೂಜಾ.
ಆದರೆ ಈ ಪ್ಯಾನ್ ಇಂಡಿಯಾ ನಟಿಗೆ ಈಗ ಆಫರ್ಗಳೇ ಇಲ್ಲಾ ಅನ್ನೋ ಸುದ್ದಿ ಎಲ್ಲಾ ವುಡ್ಗಳಲ್ಲಿಯೂ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಹೌದು ಸದ್ಯ ಪೂಜಾ ಹೆಗ್ಡೆ, ‘ರಾಧೆ ಶ್ಯಾಮ್’, ‘ಚಿರಂಜೀವಿ ನಟನೆಯ ‘ಆಚಾರ್ಯ’, ದಳಪತಿ ವಿಜಯ್ ಜೊತೆ ‘ಬೀಸ್ಟ್’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೂಜಾ ಹೆಗ್ಡೆ ಸಿನಿಮಾ ಮಾಡುತ್ತಿರುವುದು ಇಂಡಿಯಾದ ಟಾಪ್ ಹೀರೋಗಳ ಜೊತೆ. ಹಾಗಾಗಿ ಪೂಜಾ ತಮ್ಮ ಮುಂದಿನ ಸಿನಿಮಾಗಳಿಗೆ ಸಂಭಾವನೆಯನ್ನು ದುಪ್ಪಟ್ಟು ಮಾಡಿದ್ದಾರಂತೆ.
ಸಾಮಾನ್ಯವಾಗಿ ಹೀರೋಯಿನ್ಗಳು ಟಾಪ್ನಲ್ಲಿ ಇರುವ ಸಂದರ್ಭದಲ್ಲಿ 1 ರಿಂದ 2 ಕೋಟಿ ಸಂಭಾವನೆಗೆ ಬೇಡಿಕೆ ಇಡುತ್ತಾರೆ. ಸದ್ಯ ಅತೀ ಹೆಚ್ಚು ಸಂಭಾವನೆ ಪಡೆಯುವ ಸೌತ್ ಇಂಡಿಯಾ ನಟಿಯರ ಪೈಕಿ ಕನ್ನಡದ ಕುವರಿ, ನ್ಯಾಷ್ನಲ್ ಕ್ರಷ್ ರಶ್ಮಿಕಾ ಮೊದಲ ಸಾಲಿನಲ್ಲಿ ನಿಂತಿದ್ದಾರೆ. ಮಾಹಿತಿಗಳ ಪ್ರಕಾರ ರಶ್ಮಿಕಾ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಪುಷ್ಪ-2 ಸಿನಿಮಾ ರಿಲೀಸ್ ಆಗಿ ಹಿಟ್ ಆದರೆ, ಅವರ ಸಂಭಾವನೆ ಮತ್ತಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ರಶ್ಮಿಕಾ ದಾರಿಯನ್ನೇ ಅನುಸರಿಸುತ್ತಿರುವ ಪೂಜಾ, ತಮ್ಮ ಸಂಭಾವನೆಯನ್ನು 3 ಕೋಟಿ ದಾಟಿ ಕೇಳುತ್ತಿದ್ದಾರಂತೆ. ಹಾಗಾಗಿ ಪೂಜಾ ಹೆಗ್ಡೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಬಿಟ್ಟು ಮತ್ಯಾವ ಸಿನಿಮಾಗಳು ಇಲ್ಲವಂತೆ. ಪೂಜಾ ಹೆಗ್ಡೆ ಸಂಭಾವನೆ ಕೇಳಿ ನಿರ್ಮಾಪಕರು ಪೂಜಾ ಮನೆ ಹತ್ತಿರಾನೂ ಸುಳಿಯುತ್ತಿಲ್ಲವಂತೆ. ಹಾಗಾಗಿ ಪೂಜಾ ಮಾಲ್ಡೀವ್ಸ್ನಲ್ಲಿ ಬೀಡುಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಎನಿ ವೇ ತಮ್ಮ ಸಂಭಾವನೆಯನ್ನು ಹೆಚ್ಚು ಮಾಡಿಕೊಂಡು ಆಫರ್ಗಳನ್ನು ಕಡಿಮೆ ಮಾಡಿಕೊಳ್ತಾರಾ? ಅಥವಾ ಕಡಿಮೆ ಮಾಡಿಕೊಂಡು ಆಫರ್ ಜಾಸ್ತಿ ಮಾಡಿಕೊಳ್ತಾರಾ ಅಂತ ಕಾದು ನೋಡಬೇಕಿದೆ.
ನಟಿ ಪೂಜಾ ಹೆಗ್ಡೆ ಅವರು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲೂ ಮಿಂಚಿದ್ದಾರೆ. ಅವರು ಅಭಿನಯಿಸಿರುವ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಸ್ಟಾರ್ ಕಲಾವಿದರಿಗೆ ನಾಯಕಿ ಆಗುವ ಚಾನ್ಸ್ ಅವರಿಗೆ ಸಿಕ್ಕಿದೆ. ಪೂಜಾ ಹೆಗ್ಡೆಗೆ ನಿರ್ಮಾಪಕರು ಕೈ ತುಂಬ ಸಂಭಾವನೆ ನೀಡುತ್ತಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅವರಿಗೆ ಈಗ ಕೆಲಸ ಇಲ್ಲ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಅರೆರೆ, ಇದೇನಿದು ಏಕಾಏಕಿ ಪೂಜಾ ಹೆಗ್ಡೆ ಚಾರ್ಮ್ ಕುಸಿಯಿತಾ? ಹಾಗೇನೂ ಇಲ್ಲ. ಆದರೆ ಸದ್ಯಕ್ಕೆ ಅವರು ಒಂದರ್ಥದಲ್ಲಿ ನಿರುದ್ಯೋಗಿ ಆಗಿದ್ದಾರೆ. ಅತಿ ದುಬಾರಿ ಸಂಭಾವನೆ ಕೇಳುತ್ತಿರುವ ಕಾರಣದಿಂದ ಅವರಿಗೆ ಹೊಸ ಸಿನಿಮಾದ ಆಫರ್ ನೀಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಆದ್ದರಿಂದ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಹೊರತುಪಡಿಸಿದ್ರೆ ಪೂಜಾ ಹೆಗ್ಡೆ ಅವರ ಬಳಿ ಯಾವುದೇ ಹೊಸ ಚಿತ್ರಗಳು ಬರುತ್ತಿಲ್ಲ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾರೊಬ್ಬರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
ಪೂಜಾ ಹೆಗ್ಡೆ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಪ್ರಭಾಸ್ ಜೊತೆಯಲ್ಲಿ ಅವರು ‘ರಾಧೆ ಶ್ಯಾಮ್’ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.14ರಂದು ಆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕೊರೊನಾ ಕಾರಣದಿಂದ ಆ ಚಿತ್ರದ ರಿಲೀಸ್ ದಿನಾಂಕ ಮುಂದೂಡಿಕೆ ಆಗಿದೆ. ಅದೇ ರೀತಿ, ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದಲ್ಲೂ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾದ ರಿಲೀಸ್ ದಿನಾಂಕ ಸಹ ಮುಂದಕ್ಕೆ ಹೋಗಿದೆ. ಏಪ್ರಿಲ್ 1ಕ್ಕೆ ‘ಆಚಾರ್ಯ’ ಬಿಡುಗಡೆ ಆಗಲಿದೆ. ಕಾಲಿವುಡ್ನಲ್ಲಿ ‘ದಳಪತಿ’ ವಿಜಯ್ ಜೊತೆಗೆ ‘ಬೀಸ್ಟ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಆ ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post