ಡಸ್ಟ್ಬಿನ್ ಖರೀದಿ ವಿಚಾರದಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕಸದ ವಿಚಾರದಲ್ಲೂ ಹಣ ಹೊಡೆಯುತ್ತಿದ್ದಾರೆ ಈ ಭ್ರಷ್ಟರು. ಕಸಮುಕ್ತ ಗ್ರಾಮಗಳನ್ನು ಮಾಡಲು ಹೊರಟವರಿಗೆ ಶಾಕ್ ಆಗಿದ್ದು, ಕಸ ನಿರ್ವಹಣೆಗಾಗಿ ಮೀಸಲಿಟ್ಟಿದ್ದ ಹಣ ಭ್ರಷ್ಟರ ಪಾಲಾಗಿದೆ. ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಸಿಬ್ಬಂದಿಯಿಂದಲೇ ನಡೀತಿದೆ ಹಗಲು ದರೋಡೆ.
ಇನ್ನು, ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ ನುಂಗಣ್ಣರು. ಈಗ ನ್ಯೂಸ್ಫಸ್ಟ್ ಸ್ಟಿಂಗ್ ಆಪರೇಷನ್ನಲ್ಲಿ ಎಲ್ಲವೂ ಬಯಲು ಆಗಿದೆ. ಸ್ವಚ್ಛ ಭಾರತ್ ಯೋಜನೆಯಲ್ಲಿ ಕೋಟಿ, ಕೋಟಿ ಗುಳುಂ ಆಗಿದೆ. ಹತ್ತಾರು ರೂಪಾಯಿ ಡಸ್ಟ್ಬಿನ್ಗಳಲ್ಲಿ ಕೋಟಿ ಹಗರಣ ನಡೆದಿದೆ. ಮಾರುಕಟ್ಟೆ ದರಕ್ಕಿಂತ ಒನ್ ಟು ಡಬಲ್ನಲ್ಲಿ ಬುಟ್ಟಿ ಖರೀದಿ ಮಾಡಲಾಗಿದೆ. 60 ರೂಪಾಯಿಗೆ ಸಿಗುವ ಕಸದ ಬುಟ್ಟಿಗೆ ₹135 ಹಾಕಿ ವಂಚನೆ ಮಾಡಲಾಗಿದೆ. ಹೌದು, ಧಾರವಾಡ ಜಿಲ್ಲೆಯ ಬೇರೆ ಬೇರೆ ಏಜೆನ್ಸಿಗಳ ಮೂಲಕ ಖರೀದಿಸಲಾಗಿದೆ. ಮಾರುಕಟ್ಟೆ ದರವೇ ಬೇರೆ, ಇವರು ಖರೀದಿಸೋ ಬೆಲೆ ಬೇರೆ ಇದೆ.
ಹೇಗೆ ನಡೆಯುತ್ತೆ ಅವ್ಯವಹಾರ..?
ಡಸ್ಟ್ ಬಿನ್ಗಳನ್ನು ಖರೀದಿಸಿರುವ ಬೆಲೆಯೇ ಒಂದು, ಮಾರುಕಟ್ಟೆಯಲ್ಲಿ ಡಸ್ಟ್ಬಿನ್ಗಳ ಬೆಲೆಯೇ ಮತ್ತೊಂದು. ಗ್ರಾಮ ಪಂಚಾಯತ್ ಡಸ್ಟ್ ಬಿನ್ ಖರೀದಿಸಿರುವ ಅಸಲಿ ಬೆಲೆ ಬೇರೆ ಇದೆ. ರಿಟೇಲ್ ಮಾರುಕಟ್ಟೆಯಲ್ಲಿ ಡಸ್ಟ್ಬಿನ್ಗಳ ಬೆಲೆ ₹30-70 ಇದ್ದರೆ, ಇವರು ಮಾತ್ರ ಇಂತಹ ಡಸ್ಟ್ ಬಿನ್ಗಳಿಗೆ 115-135 ರೂ ಕೊಟ್ಟು ಖರೀದಿ ಮಾಡಿದ್ದಾರೆ. 1 ಡಸ್ಟ್ ಬಿನ್ ಮೇಲೆ 70 ರೂಪಾಯಿ ಉಳಿಸಿಕೊಳ್ಳಲಾಗುತ್ತೆ. ಅಂಗಡಿಯವರು ಖಾಲಿ ಕೊಟೇಷನ್ ಕೊಟ್ಟು ಮಾರ್ತಾರೆ. ಕೊಟೇಷನ್ನಲ್ಲಿ ಎಷ್ಟು ಬೇಕಾದ್ರೂ ಬರೆದುಕೊಳ್ಳಲು ಅವಕಾಶ ಮಾಡಿಕೊಡ್ತಾರೆ.
ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಭ್ರಷ್ಟರು
ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಲೂಟಿಕೋರರು ಕೋಟಿ, ಕೋಟಿ ಗುಳುಂ ಮಾಡಿದ್ದಾರೆ. ಉತ್ತಮ ದರ್ಜೆಯ ಡಸ್ಟ್ಬಿನ್ಗಳು ಖರೀದಿಸಲು ಸರ್ಕಾರ ಆದೇಶ ಮಾಡಿದೆ. ಆದರೆ ಇವರು ಮಾತ್ರ ಕಳಪೆ ಗುಣಮಟ್ಟದ ಡಸ್ಟ್ಬಿನ್ ಖರೀದಿಸಿ ಹಣ ಗುಳುಂ ಮಾಡಿದ್ದಾರೆ. ಇದರ ಅಕ್ರಮ ನ್ಯೂಸ್ ಫಸ್ಟ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಮಾರ್ಕೆಟ್ ರೇಟ್ಗೂ ತರಿಸ್ತಿರೋ ಬೆಲೆಗೂ ಬಹಳ ವ್ಯತ್ಯಾಸ ಇದೆ. ಖುದ್ದು ಗ್ರಾಮ ಪಂಚಾಯ್ತಿ ಅಧಿಕಾರಿಗಳೂ ಈ ಅಕ್ರಮದಲ್ಲಿ ಶಾಮೀಲು ಆಗಿದ್ದಾರೆ. ಕುಂದಗೋಳ ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಅಕ್ರಮ ನಡೆದಿದೆ. ಚಾಕಲಬ್ಬಿ ಗ್ರಾಮದ ಗ್ರಾಮ ಪಂಚಾಯತ್ ಪಿಡಿಒ ಮತ್ತು ಲೂಟಿಕೋರ ನದಾಫ್ ಅಕ್ರಮದಲ್ಲಿ ಪಾಲುದಾರ. ಇನ್ನು, ಶಿರೂರ್ ಪಿಡಿಒ ಡಿ.ಎಂ ಕಾಲವಾಡವೂ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
ಮೊದಲ ಹಂತದಲ್ಲಿ ಡಸ್ಟ್ಬಿನ್ ಹಂಚಿಕೆ ಮಾಡಿ ಕಮಿಷನ್ ಪಡೆದಿದ್ದರು. ಎರಡನೇ ಹಂತದಲ್ಲಿ ಹಂಚಿಕೆ ಮಾಡಲು ಹೊರಟ್ಟಿದ್ದರು ಕಾಲವಾಡ. ಅದಕ್ಕಾಗಿ ಡಸ್ಟ್ ಬಿನ್ಗಳನ್ನು ತರಿಸಿ ಪಂಚಾಯತಿಯಲ್ಲಿ ಗುಡ್ಡೆ ಇಡಲಾಗಿದೆ. ಬರೋಬ್ಬರಿ 2.15 ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ಕನ್ನ ಹಾಕಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post