ಪಂಜಾಬ್ ಕಿಂಗ್ಸ್ ತಂಡವನ್ನ ನಾಯಕನಾಗಿದ್ದ ರಾಹುಲ್ ತೊರೆದ ಬೆನ್ನಲ್ಲೇ ಮಯಾಂಕ್ ಅಗರ್ವಾಲ್ರನ್ನ ಫ್ರಾಂಚೈಸಿ ರಿಟೈನ್ ಮಾಡಿಕೊಂಡಿತ್ತು. ಅದರ ಬೆನ್ನಲ್ಲೇ ಮಯಾಂಕ್ ತಂಡವನ್ನ ಮುನ್ನಡೆಸ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದ್ರೆ, ಇದೀಗ ಫ್ರಾಂಚೈಸಿ ಮೂಲದಿಂದ ಹೊಸ ಸುದ್ದಿ ಹೊರ ಬಿದ್ದಿದ್ದು, ಮಯಾಂಕ್ ನಾಯಕನ ಆಯ್ಕೆಯೇ ಅಲ್ವಂತೆ.!
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ದಿನಗಣನೆ ಆರಂಭವಾಗಿದೆ. ಹರಾಜಿನ ದಿನ ಹತ್ತಿರವಾದಂತೆ ಫ್ರಾಂಚೈಸಿಗಳ ಲೆಕ್ಕಾಚಾರಗಳೂ ಜೋರಾಗಿದೆ. ತಮಗೆ ಬೇಕಾದ ಆಟಗಾರರನ್ನ ಟಾರ್ಗೆಟ್ ಮಾಡಿರೋ ಫ್ರಾಂಚೈಸಿಗಳು, ಖರೀದಿ ವಿಚಾರದಲ್ಲೂ ಸ್ಟಾರ್ಟಜಿ ರೂಪಿಸ್ತಿದ್ದಾರೆ. ಇದೇ ನಿಟ್ಟಿನಲ್ಲಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಕೂಡ ವಿಶೇಷ ಪ್ಲಾನ್ನೊಂದಿಗೆ ಹರಾಜಿನ ಕಣಕ್ಕಿಳಿಯಲು ನಿರ್ಧರಿಸಿದೆ.
ಕ್ಯಾಪ್ಟನ್ ಹುಡುಕಾಟದಲ್ಲಿದ್ಯಂತೆ ಪಂಜಾಬ್ ಕಿಂಗ್ಸ್.!
ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನ ತೊರೆದ ಬೆನ್ನಲ್ಲೇ, ಅಚ್ಚರಿಯ ರೀತಿಯಲ್ಲಿ ಫ್ರಾಂಚೈಸಿ ಮಯಾಂಕ್ ಅಗರ್ವಾಲ್ರನ್ನ ರಿಟೈನ್ ಮಾಡಿಕೊಂಡಿತ್ತು. ಪಂಜಾಬ್ ರಿಟೈನ್ ನಿರ್ಧಾರ ತಿಳಿಸಿದ ಬೆನ್ನಲ್ಲೇ, ಮಯಾಂಕ್ ಅಗರ್ವಾಲೇ ನೂತನ ನಾಯಕ ಎಂಬ ಸುದ್ದಿ ಹಬ್ಬಿತ್ತು. ಯಾಕಂದ್ರೆ, ರಾಹುಲ್ ಅಲಭ್ಯತೆಯಲ್ಲಿ ಕಳೆದ ಆವೃತ್ತಿಯಲ್ಲಿ ಮಯಾಂಕ್ ತಂಡವನ್ನ ಮುನ್ನಡೆಸಿದ್ರು. ಆದ್ರೆ, ಇದೀಗ ಈ ಬಗ್ಗೆ ಒಂದು ಸುದ್ದಿ ಹೊರ ಬಿದ್ದಿದ್ದು, ಮಯಾಂಕ್ ಫ್ರಾಂಚೈಸಿಯ ಮೊದಲ ಆಯ್ಕೆಯ ನಾಯಕ ಅಲ್ವಂತೆ.
‘ಹರಾಜಿನ ಬಳಿಕ ನಿರ್ಧಾರ’
‘ನಮ್ಮ ಬಳಿ ಸಾಕಷ್ಟು ಸಮಯ ಉಳಿದಿದೆ. ನಾಯಕನನ್ನ ಘೋಷಣೆ ಮಾಡುವ ಯಾವುದೇ ಅವಸರ ಈಗಿಲ್ಲ. ನಾವು ಆಕ್ಷನ್ ಹೇಗೆ ಸಾಗುತ್ತೆ ಅದರ ಆಧಾರದಲ್ಲಿ ನಿರ್ಧಾರವನ್ನ ಕೈಗೊಳ್ಳುತ್ತೇವೆ. ಮಯಾಂಕ್ ಯಾವಾಗಲೂ ಒಂದು ಆಯ್ಕೆಯಾಗಿದ್ದಾರೆ. ಉಳಿದವರಿಗಿಂತ ನಮ್ಮಲ್ಲಿ ಹೆಚ್ಚು ಹಣ ಉಳಿದಿದ್ದು, ನಾವು ಈಗಾಗಲೇ ಕೆಲವೊಂದು ಹೆಸರನ್ನ ಶಾರ್ಟ್ಲಿಸ್ಟ್ ಮಾಡಿಕೊಂಡಿದ್ದೇವೆ. ಕಾದು ನೋಡೋಣ ಏನಾಗುತ್ತೆ ಅಂತಾ’
ಪಂಜಾಬ್ ಕಿಂಗ್ಸ್ ಅಧಿಕಾರಿ
ಮಯಾಂಕ್ಗೆ ನಾಯಕನ ಪಟ್ಟ ಸಿಗೋದು ಡೌಟ್.!
ಪಂಜಾಬ್ ಪಡೆಯನ್ನ ರಾಹುಲ್ ಅಲಭ್ಯತೆಯಲ್ಲಿ ಮುನ್ನಡೆಸಿದ್ರೂ, ಮಯಾಂಕ್ಗೆ ನಾಯಕತ್ವ ನೀಡದಿರಲು ಕಾರಣಗಳಿವೆ. ಮುನ್ನಡೆಸಿದ ಪಂದ್ಯದಲ್ಲಿ ಸೋತಿದ್ದು ಒಂದೆಡೆಯಾದ್ರೆ, ದೇಶಿ ಮಟ್ಟದಲ್ಲೂ ಕ್ಯಾಪ್ಟನ್ಸಿ ಜವಾಬ್ಧಾರಿಯನ್ನೇ ಮಯಾಂಕ್ ನಿರ್ವಹಿಸಿಲ್ಲ. ಇದರಿಂದಾಗಿ ಒಬ್ಬ ಆಟಗಾರನಾಗಿ ಮಯಾಂಕ್ ಮೇಲಿರುವಷ್ಟು ನಂಬಿಕೆ ಫ್ರಾಂಚೈಸಿಗೆ ನಾಯಕನಾಗಿ ಮಯಾಂಕ್ ಮೇಲಿಲ್ಲ. ಇದು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬೇರೊಬ್ಬ ಆಟಗಾರರನ ಹುಡುಕಾಟ ನಡೆಸ್ತಿರೋದಕ್ಕೆ ಕಾರಣವಾಗಿರೋ ಅಂಶವಾಗಿದೆ.
ಮೂಲಗಳ ಪ್ರಕಾರ ಆ್ಯರೋನ್ ಫಿಂಚ್, ಇಯಾನ್ ಮಾರ್ಗನ್, ಡೇವಿಡ್ ವಾರ್ನರ್ ಹಾಗೂ ಶ್ರೇಯಸ್ ಅಯ್ಯರ್ರನ್ನ ತಂಡ ನಾಯಕನ ಸ್ಥಾನಕ್ಕೆ ಟಾರ್ಗೆಟ್ ಮಾಡಿದ್ಯಂತೆ. ಆದ್ರೆ, ಇವರ ಪಂಜಾಬ್ ಜೊತೆ ಜೊತೆಗೆ ಆರ್ಸಿಬಿ, ಕೆಕೆಆರ್ ತಂಡಗಳೂ ಇದೇ ಆಟಗಾರರನ್ನ ನಾಯಕನನ್ನಾಗಿಸಲು ಟಾರ್ಗೆಟ್ ಮಾಡಿವೆ. ಹೀಗಾಗಿ ನಾಯಕನ ಹುಡುಕಾಟದಲ್ಲಿರೋ ಫ್ರಾಂಚೈಸಿಗಳಿಗೆ ಅಂತಿಮವಾಗಿ ಹರಾಜಿನಲ್ಲಿ ಯಾವ ಆಟಗಾರ ಸಿಗ್ತಾನೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ.
Pushing beyond the limits 💪 pic.twitter.com/sTKtB02lap
— Mayank Agarwal (@mayankcricket) February 1, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post