ಉಡುಪಿ: ಸಿದ್ದರಾಮಯ್ಯ ಅವರು ಏಕವಚನದಲ್ಲಿ ಮಾತನಾಡಿದ ಶೈಲಿಗೆ ಸಿಂಪತಿ ಇದೆ. ನಾನು ಅವರದ್ದೇ ದಾಟಿಯಲ್ಲಿ ಮಾತನಾಡಬಹುದು. ಆದರೆ ನಾನು ಆ ರೀತಿ ಮಾತನಾಡಿದ್ರೆ ಶೋಭೆ ತರಲ್ಲ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಹಿಜಾಬ್ ವಿವಾದ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಟೀಕೆಗೆ ಕಿಡಿಕಾರಿರುವ ಶಾಸಕ ರಘುಪತಿ ಭಟ್ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವ ಸಮಯದಲ್ಲಿ ವಸ್ತ್ರಸಂಹಿತೆಯಿತ್ತು. ಜಿಲ್ಲೆಯ ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಇತ್ತು. ತರಗತಿಯಲ್ಲಿ ಹಿಜಾಬ್ ಧರಿಸದೆ ಪಾಠ ಕೇಳುತ್ತಿದ್ರು. 2021 ಡಿಸೆಂಬರ್ ತಿಂಗಳಿನಿಂದ ಹಿಜಾಬ್ ತಕರಾರು ಶುರುವಾಗಿದೆ.
ರಘುಪತಿ ಭಟ್ ಯಾರು ಅನ್ನೋದನ್ನ ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರನ್ನ ಕೇಳಲಿ. ಮೂರು ಬಾರಿ ಅವರ ಪಕ್ಷದ ಅಭ್ಯರ್ಥಿಯ ಎದುರು ಗೆದ್ದಿದ್ದೇನೆ. ಸಿದ್ದರಾಮಯ್ಯ ಅವರಿಗೆ ನಾನು ಯಾರಂತ ಗೊತ್ತಿಲ್ಲದೆ ಇರಬಹುದು. ಆದರೆ ಮೂರು ಬಾರಿ ಗೆಲ್ಲಿಸಿದ ಮತದಾರರಿಗೆ ಗೊತ್ತಿದೆ. ಸಂವಿಧಾನ ಬದ್ಧವಾಗಿ ನಾನು ಚುನಾಯಿತ ಪ್ರತಿನಿಧಿ, ಶಾಸಕನಾಗಿ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಅಧ್ಯಕ್ಷ ನೆಲೆಯಲ್ಲಿ ಕೆಲವು ಪ್ರಯತ್ನ ಮಾಡಿದ್ದೇನೆ. ಸಿದ್ದರಾಮಯ್ಯ ಕಾಲದಲ್ಲಿದ್ದ ಪದ್ಧತಿಯನ್ನ ಮುಂದುವರೆಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದನ್ನ ಸಿದ್ದರಾಮಯ್ಯ ಅರಿತು ಮಾತನಾಡಬೇಕು ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post