ಚಿತ್ರದುರ್ಗ: ಬೈಕ್ ನಿಲ್ಲಿಸಿ ಅಂಗಡಿಗೆ ಹೋಗಿ ಬರೋದ್ರಲ್ಲಿ ಖತರ್ನಾಕ್ ಕಳ್ಳರು ಬೈಕ್ನಲ್ಲಿದ್ದ 2 ಲಕ್ಷ ರೂಪಾಯಿ ಹಣವನ್ನ ಎಗರಸಿ, ಪರಾರಿಯಾದ ಘಟನೆ ಹಿರಿಯೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಹಿರಿಯೂರು ನಗರದ ಅಶ್ವತ್ ನಾರಾಯಣ್ ಎಂಬುವವರು ಪೋಸ್ಟ್ ಆಫೀಸ್ನಲ್ಲಿ ಹಣ ವಿತ್ಡ್ರಾ ಮಾಡಿಕೊಂಡು ಬಂದಿದ್ದರು. ಈ ವೇಳೆ ಹಣವನ್ನು ಕ್ಯಾರಿಬ್ಯಾಗ್ನಲ್ಲಿ ಇರಿಸಿ ಬೈಕ್ಗೆ ಹಾಕಿದ್ದರು. ಮಾರ್ಗ ಮಧ್ಯದಲ್ಲಿ ಬೈಕ್ ನಿಲ್ಲಿಸಿ ಬೇಕರಿಗೆ ಬ್ರೇಡ್ ತರಲು ಹೋಗಿದ್ದಾರೆ. ಅವರನ್ನು ಗಮನಿಸಿದ ಕಳ್ಳರು ಕ್ಷಣಾರ್ಧದಲ್ಲಿ ತಮ್ಮ ಕೈಚಳಕ ತೋರಿಸಿ ಹಣ ಸಮೇತ ಎಸ್ಕೇಪ್ ಆಗಿದ್ದಾರೆ.
ಹೊಂಚು ಹಾಕಿಕೊಂಡು ಬಂದ ಖದೀಮರು ತಲೆಗೆ ಟೋಪಿ, ಮಾಸ್ಕ್ ಧರಿಸಿ ಈ ಕೃತ್ಯವನ್ನು ಎಸಗಿದ್ದಾರೆ. ಇನ್ನು ಚಾಲಾಕಿಗಳ ಸಿನಿಮೀಯ ಸ್ಟೈಲ್ನ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿರಿಯೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post