ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ಇತಿಹಾಸದಲ್ಲಿ ಭಾರತ ಆಡಿದ 1000ನೇ ಪಂದ್ಯವನ್ನು ಗೆದ್ದಿದೆ. ಈ ಗೆಲುವು ಟೀಂ ಇಂಡಿಯಾ ಒನ್ ಡೇ ಕ್ಯಾಪ್ಟನ್ ಆಗಿ ಡೆಬ್ಯೂಟ್ ಮಾಡಿದ ರೋಹಿತ್ ಶರ್ಮಾ ನೇತೃತ್ವದಲ್ಲೇ ಗೆದ್ದಿದ್ದು ಮಾತ್ರ ಸ್ಮರಣೀಯ.
1000 ಏಕದಿನ ಪಂದ್ಯವನ್ನು ಗೆಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಉತ್ತಮ ಬೌಲಿಂಗ್ನಿಂದ ಇಂಡೀಸ್ ತಂಡವನ್ನು ಕೇವಲ 177 ರನ್ಗೆ ಕಟ್ಟಿ ಹಾಕಿತ್ತು.
ಬಳಿಕ ಈ ಗುರಿ ಚೇಸ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಜವಾಬ್ದಾರಿಯುತ ಆಟದಿಂದ ಸುಲಭವಾಗಿ ಗೆದ್ದಿದೆ. 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.
ಇದನ್ನೂ ಓದಿ: ಹೊಸ ದಾಖಲೆ ಬರೆದ ಚಾಹಲ್.. ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ್ರು
ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಅಬ್ಬರದಾಟದ ಮೂಲಕ ಉತ್ತಮ ಆರಂಭ ನೀಡಿದರು. ಈ ಮೂಲಕ ಭಾರತ ಗೆಲುವನ್ನು ಸುಲಭವಾಗಿಸಿದರು. ಅಲ್ಲದೇ ಕ್ಯಾಪ್ಟನ್ ಆಗಿ ಮೊದಲನೇ ಪಂದ್ಯ ಗೆದ್ದು ದಾಖಲೆ ಬರೆದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post