ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾರತದಲ್ಲಿ 5,000 ರನ್‌ಗಳ ಬಾರಿಸೋ ಮೂಲಕ ಮೈಲಿಗಲ್ಲು ತಲುಪಿದ್ದಾರೆ. ಇಂದು ವೆಸ್ಟ್ ಇಂಡೀಸ್ ವಿರುದ್ಧ ವಿರಾಟ್ ಕೊಹ್ಲಿ 8 ರನ್ ಗಳಿಸಿದ್ರು. ಈ ಮೂಲಕ ಭಾರತದಲ್ಲೇ ಕೇವಲ 95 ಇನ್ನಿಂಗ್ಸ್‌ನಲ್ಲೇ ವಿರಾಟ್ ಕೊಹ್ಲಿ 5,002 ರನ್ ಗಳಿಸಿ ಸಾಧನೆ ಮಾಡಿದ್ದಾರೆ.
ವಿಂಡೀಸ್ ಸರಣಿಯಲ್ಲಿ ವಿರಾಟ್ ಈ ಸಾಧನೆ ಮಾಡಿದ್ದಾರೆ. ಹೀಗಾಗಿ ಸಚಿನ್ ತೆಂಡೂಲ್ಕರ್ ಬಳಿಕ ಈ ಮೈಲಿಗಲ್ಲು ತಲುಪಿದ ಭಾರತದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಮೂಲಕ ಸಚಿನ್ ದಾಖಲೆ ಕೊಹ್ಲಿ ಮುರಿದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧವೇ ಆಡಿದ್ದ 121ನೇ ಇನ್ನಿಂಗ್ಸ್‌ನಲ್ಲಿ ಸಚಿನ್ ಈ ಸಾಧನೆ ಮಾಡಿದ್ರು. ಇದೀಗ ಮೊದಲ ಏಕದಿನದಲ್ಲಿ ಕೊಹ್ಲಿ 8 ರನ್ ಗಳಿಸಿ 95ನೇ ಇನ್ನಿಂಗ್ಸ್‌ನಲ್ಲೇ ಈ ಸಾಧನೆ ಮಾಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post