ಹಿಜಾಬ್ ವಸರ್ಸ್ ಕೇಸರಿ ಶಾಲು ಕುರಿತ ವಿವಾದದ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಮಾಜಿ ಸಂಸದೆ, ನಟಿ ರಮ್ಯಾ, ಭಾರತದ ಯುವ ಜನತೆಗೆ ಧರ್ಮದ ಆಧಾರದಲ್ಲಿ ವಿಭಜನೆ ಆಗ್ತಿರೋದನ್ನ ನೋಡಿದ್ರೆ ನೋವಾಗುತ್ತಿದೆ ಎಂದು ಹೇಳಿದ್ದಾರೆ.
ತಮ್ಮ ಇನ್ಸ್ಟಾದಲ್ಲಿ ಹಿಜಾಬ್ ವಿವಾದ ಕುರಿತಂತೆ ಸ್ಟೋರಿ ಹಂಚಿಕೊಂಡಿರುವ ರಮ್ಯಾ, ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು ಹಾಗೂ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಾ ವೇಳೆ ನಿರ್ಮಾಣವಾಗಿದ್ದ ಪ್ರಕ್ಷುಬ್ಧ ವಾತಾವರಣದ ವಿಡಿಯೋವನ್ನು ರಮ್ಯಾ ಹಂಚಿಕೊಂಡಿದ್ದಾರೆ.
ಮತ್ತೊಂದು ಸ್ಟೋರಿಯಲ್ಲಿ, ನಾವು ಶಾಲೆ, ಕಾಲೇಜು ಹೋಗುತ್ತಿದ್ದ ವೇಳೆ ನಮ್ಮ ಮುಂದೆ ನಿಂತಿರುವ ವಿದ್ಯಾರ್ಥಿ ಕ್ರೈಸ್ತ ಧರ್ಮವರ, ಹಿಂದು ಧರ್ಮದವರ, ಅಥವಾ ಮುಸಲ್ಮಾನ್ ಧರ್ಮದವರ ಎಂಬುದು ನಮಗೆ ಗೊತ್ತರಲಿಲ್ಲ. ಯಾರು ಇವತ್ತು ಊಟಕ್ಕೆ ಒಳ್ಳೆ ಲಂಚ್ಬಾಕ್ಸ್ ತಂದಿದ್ದಾರೆ, ಯಾರು ಆಟ ಆಡುವಾಗ ಚೆಂಡನ್ನು ದೂರಕ್ಕೆ ಎಸೆಯುತ್ತಾರೆ, ಪುಸ್ತಕದ ಬದನೆಕಾಯಿ ಯಾರು ಹಾಗೂ ಯಾರು ಯಾರ ಮೇಲೆ ಕ್ರಶ್ ಹೊಂದಿದ್ದಾರೆ ಎಂಬುದನ್ನು ಮಾತ್ರ ನಾವು ತಿಳಿಸುಕೊಂಡಿದೇವು. ಇಂತಹ ನಾನ್ಸೆನ್ಸ್ ಎಲ್ಲಿಂದ ಶುರುವಾಯಿತೋ? ಎಂದು ಬರೆದಿರುವ ಪೋಸ್ಟ್ವೊಂದನ್ನು ರಮ್ಯಾ ಹಂಚಿಕೊಂಡಿದ್ದಾರೆ.
ಸದ್ಯ ಹಿಜಾಬ್ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದ್ದು, ಎರಡು ದಿನಗಳ ಕಾಲ ಸುದೀರ್ಘವಾಗಿ ಪರ-ವಿರೋಧ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ, ವಿಸ್ತ್ರತ ಪೀಠಕ್ಕೆ ಕೇಸ್ ವರ್ಗಾಯಿಸುವಂತೆ ಆದೇಶಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post