‘ಬೈ ಟು ಲವ್’ ಅಂಗಳದಿಂದ ಬಂತು ಮೆಲೋಡಿ ಟ್ರ್ಯಾಕ್..
ಬಹಳ ಮುದ್ದಾಗಿದೆ ಬಾಲು-ಲೀಲುವಿನ ಆಟ ತುಂಟಾಟದ ಹಾಡು.
ಕಲರ್ಫುಲ್ ಆಗಿ ಅಟ್ರ್ಯಾಕ್ಟ್ ಆಗಿರುವ ಬೈ ಟು ಲವ್ ಹೊಸ ಸಾಂಗ್ ಈಗಾಗಲೇ 12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.
ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಬೈ ಟು ಲವ್ ಸಿನಿಮಾ ಈಗ ಹೊಸ ಹಾಡನ್ನು ರಿಲೀಸ್ ಮಾಡಿದೆ. ಈ ಹಿಂದೆ ಹಸೆಮಣೆಯಲ್ಲಿ ಕುಳಿತಿರುವ ಜೋಡಿಗಳ ತೊಡೆಯ ಮೇಲೊಂದು ಮಗು ಇರುವ ವಿಶೇಷ ಪೋಸ್ಟರ್ ಬಿಟ್ಟಿದ್ದ ನಿರ್ದೇಶಕ ಹರಿ ಸಂತು, ಈಗ ಮಗುವಿನೊಟ್ಟಿಗೆ ಶ್ರೀಲೀಲಾ ಹಾಗೂ ಧನ್ವೀರ್ ಎಂಜಾಯ್ ಮಾಡ್ತಿರುವ ಕಥೆಯೊಂದನ್ನು ಹೇಳಿ ತಲೆಗೆ ಹುಳ ಬಿಟ್ಟಿದ್ದಾರೆ.
ವಿ ನಾಗೇಂದ್ರ ಪ್ರಸಾದ್ ಬರೆದ ನೀನೇ ನೀನೆ ಎಂಬ ಸೊಗಸಾದ ಹಾಡಿಗೆ ಅಜನೀಶ್ ಲೋಕನಾಥ್ ಅಷ್ಟೇ ಇಂಪಾದ ಮ್ಯೂಸಿಕ್ ನೀಡಿದ್ದು, ಕಾರ್ತಿಕ್ ಈ ಹಾಡಿಗೆ ಧನ್ವಿಯಾಗಿದ್ದಾರೆ. ಇನ್ನು ಧನ್ವೀರ್ ಹಾಗೂ ಶ್ರೀಲೀಲಾ ಜೋಡಿ ಸಖತ್ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬ್ಯಾಲೆನ್ಸ್ ತಪ್ಪಿ ಎಡವಿದ ನಟಿ ಉರ್ಫಿ ಜಾವೇದ್-ಕೈಲಾಗೋದಿಲ್ಲ ಎಂದರೇ ಶೋಕಿ ಯಾಕೆ ಎಂದ ನೆಟ್ಟಿಗರು
ಅಂದ್ಹಾಗೆ, ಧನ್ವೀರ್ ಹಾಗೂ ಶ್ರೀಲೀಲಾ ಜೋಡಿಯ ಬೈ ಟು ಲವ್ ಪ್ರೇಮ್ ಕಹಾನಿ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದ್ದು, ಇದೇ 18ರಂದು ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ. ಬಿಡುಗಡೆಗೆ ಮುಂಚೆ ಎಲ್ಲರ ಗಮನ ಸೆಳೆದಿರುವ ಬೈ ಟು ಲವ್ ತೆರೆಮೇಲೆ ಎಷ್ಟು ಇಷ್ಟ ಆಗುತ್ತೋ ಇನ್ನು ಸ್ವಲ್ಪ ದಿನದಲ್ಲೇ ಗೊತ್ತಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post