‘ಶಾಲೆಗಳಲ್ಲಿ ನಿಗದಿಪಡಿಸಿದ ಯುನಿಫಾರ್ಮ್ಗಳನ್ನೆ ಧರಿಸಬೇಕು, ಇದು ವಿದ್ಯಾರ್ಥಿಗಳ ಕರ್ತವ್ಯ’ಎಂದು ಮಹಾರಾಷ್ಟ್ರದ ಸಚಿವ ಆದಿತ್ಯಾ ಠಾಕ್ರೆ ರಾಜ್ಯದಲ್ಲಿ ಭುಗಿಲೆದ್ದಿರುವ ಸಮವಸ್ತ್ರ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಶಾಲೆ-ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರವಿದ್ದರೆ ಅದನ್ನು ವಿದ್ಯಾರ್ಥಿಗಳು ಅನುಸರಿಸಲೇ ಬೇಕು. ಶಿಕ್ಷಣ ಕೇಂದ್ರಗಳಲ್ಲಿ ಶಿಕ್ಷಣ ಮಾತ್ರ ಕೇಂದ್ರೀಕೃತವಾಗಿರಬೇಕು ಹೊರತು, ರಾಜಕೀಯ ಧಾರ್ಮಿಕ ವಿಚಾರಗಳಲ್ಲ. ಇಂತಹ ವಿಚಾರಗಳನ್ನು ವಿದ್ಯಾ ಮಂದಿರಗಳಿಗೆ ಎಳೆದೊಯ್ಯುವ ಯತ್ನ ನಡೆಸಬಾರದು ಎಂದು ಆದಿತ್ಯ ಠಾಕ್ರೆಸ ಹಿಜಾಬ್ ವಿಚಾರಚಾಗಿ ರಾಜ್ಯ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ಇವತ್ತಿಗೆ ಮುಂದೂಡಲಾಗಿದ್ದ ಹಿಜಾಬ್ ಪ್ರಕರಣವನ್ನು ಹೋಕೋರ್ಟ್ನ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿದೆ. ಮಧ್ಯಾಹ್ನದ ನಂತರ ವಿಚಾರಣೆ ನಡೆಸಿದ ನ್ಯಾಯಾಲಯ ಅಂತಿಮವಾಗಿ ಈ ವಿವಾದವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post