ರಾಜ್ಯದಲ್ಲಿ ಹಿಜಾಬ್ ಹಂಗಾಮ ತಾರಕಕ್ಕೇರಿರುವ ಬೆನ್ನಲ್ಲೇ ಇಡೀ ದೇಶಾದ್ಯಂತದಿಂದ ಹಾಗೂ ವಿದೇಶದಿಂದ ಹಿಜಾಬ್ ಬೆಂಬಲಿಸಿ ಹೇಳಿಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ವಿವಾದಕ್ಕೆ ಈಗ ಪಾಕಿಸ್ತಾನ, ಹೋರಾಟಗಾರ್ತಿ ಮಲಾಲಾ ಮುಂತಾದವರೂ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕಿ ಕೂಡ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ತಾನು ಏನು ಧರಿಸಬೇಕು ಅಂತಾ ನಿರ್ಧರಿಸೋದು ಮಹಿಳೆ ಹಕ್ಕು ಅಂತಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅದು ಬಿಕಿನಿಯಾಗಿರಲಿ, ಗೂಂಘಟ್ ಆಗಲಿ, ಜೀನ್ಸ್ ಆಗಲಿ ಅಥವಾ ಹಿಜಾಬ್ ಆಗಿರಲಿ.. ಏನು ನಿರ್ಧರಿಸಬೇಕು ಅಂತಾ ನಿರ್ಧರಿಸೋದು ಮಹಿಳೆಯರ ಹಕ್ಕು ಎಂದು ಅವರು ಹೇಳಿದ್ದಾರೆ.
ಅಲ್ಲದೇ, ಬಟ್ಟೆ ಧರಿಸುವ ಹಕ್ಕನ್ನು ಭಾರತದ ಸಂವಿಧಾನವೇ ನೀಡಿದೆ. ಮಹಿಳೆಯರನ್ನು ಕಾಡುವುದನ್ನು ಬಿಡಿ ಎಂದೂ ಅವರು ಕರೆ ನಿಡಿದ್ದಾರೆ.
Whether it is a bikini, a ghoonghat, a pair of jeans or a hijab, it is a woman’s right to decide what she wants to wear.
This right is GUARANTEED by the Indian constitution. Stop harassing women. #ladkihoonladsaktihoon
— Priyanka Gandhi Vadra (@priyankagandhi) February 9, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post