ಪಂಚರಾಜ್ಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಆಡಳಿತ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸ್ತಿವೆ. ಆದ್ರೆ ಕೈ ಪಡೆ ಸಿಖ್ಖರ ನಾಡು ಪಂಜಾಬ್ನಲ್ಲಿ ಚುನಾವಣೆಗೂ ಮುನ್ನವೇ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
ಪಂಜಾಬ್ನಲ್ಲಿ ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಾ, ಮತದಾರ ಪ್ರಭುಗಳನ್ನ ಸೆಳೆಯುತ್ತಿವೆ. ಅದರಲ್ಲೂ ಪಂಜಾಬ್ ಸಿಎಂ ಅಭ್ಯರ್ಥಿ ಚರಣ್ಜಿತ್ ಸಿಂಗ್ ಚನ್ನಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಜೋರಾದ ಪ್ರಚಾರದ ನಡುವೆಯೂ ಅವರು ಕಾರ್ಡ್ಸ್ ಆಡುವುದರಲ್ಲಿ ಮಗ್ನರಾಗಿ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ.
ಇದನ್ನೂ ಓದಿ:ಪಂಜಾಬ್ CM ಅಭ್ಯರ್ಥಿ ಆಗಿ ಚನ್ನಿ.. ರಾಹುಲ್ ಗಾಂಧಿ ಲೆಕ್ಕಚಾರವೇನು..?
ಇಂದು ಚರಣಜಿತ್ ಸಿಂಗ್ ಪಂಜಾಬ್ನ ಅಪ್ಸಾಲ್ ಕುಂದ್ನಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮತದಾರ ಪ್ರಭುಗಳೊಂದೊಗೆ ಕ್ರಿಕೆಟ್ ಆಡಿದ್ದಾರೆ. ಅಷ್ಟೇ ಅಲ್ಲದೆ ಕುಳಿತುಕೊಂಡು ಕಾರ್ಡ್ಸ್ ಆಡಿ ರಿಲ್ಯಾಕ್ಸ್ ಆಗಿದ್ದಾರೆ. ಚನ್ನಿ ಕಾರ್ಡ್ಸ್ ಗೇಮ್ ಆಡುತ್ತಿರೋ ವಿಡಿಯೋ ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಟೀಕೆಗೆ ಗುರಿಯಾಗಿದೆ. ಇನ್ನು ಪಂಜಾಬ್ನಲ್ಲಿ ಫೆಬ್ರವರಿ 20 ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ:‘ಅಧಿಕಾರಕ್ಕೆ ಬಂದ್ರೆ ಬೈಕ್ನಲ್ಲಿ 3 ಜನರ ಪ್ರಯಾಣಕ್ಕೆ ಅವಕಾಶ’-ಉ.ಪ್ರದೇಶದಲ್ಲಿ ಅಚ್ಚರಿಯ ಭರವಸೆ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post