ಬೆಂಗಳೂರು: ನಗರದಲ್ಲಿ ಟೋಯಿಂಗ್ ಗಲಾಟೆ ಮಾಸುವ ಮುನ್ನವೇ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರು ಅಮಾಯಕನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.
ಇಂಟರ್ವ್ಯೂ ಮುಗಿಸಿಕೊಂಡು ಬರುತ್ತಿದ್ದ ಯುವಕನ ತಡೆದ ವಿಜಯನಗರ ಸಂಚಾರ ಪೊಲೀಸರು, ಈ ಹಿಂದೆ ನಿಯಮ ಉಲ್ಲಂಘನೆ ಮಾಡಿರೋ ಕೇಸ್ಗೆ ದಂಡ ಕಟ್ಟು ಎಂದಿದ್ದಾರಂತೆ. ಈ ವೇಳೆ ಯುವಕ ಸದ್ಯ ನನ್ನ ಬಳಿ ಹಣ ಇಲ್ಲ ಸಂಬಳ ಬಂದ್ಮೇಲೆ ನ್ಯಾಯಾಲಯಕ್ಕೆ ಹೋಗಿ ಕಟ್ಟೋದಾಗಿ ಹೇಳಿದ್ದಾನೆ. ಅದಕ್ಕು ಒಪ್ಪದ ಸಿಬ್ಬಂದಿ 1000 ರೂಪಾಯಿ ಆದ್ರು ಕಟ್ಟುವಂತೆ ಪಟ್ಟು ಹಿಡಿದಿದ್ದಾನೆ ಎನ್ನಲಾಗಿದೆ. ಈ ವೇಳೆ ಯುವಕ ಇಲ್ಲ ಎಂದಾಗ ಸಿಬ್ಬಂದಿ ಹಲ್ಲೆ ಮಾಡಿದ್ದಾರೆಂದು ಯುವಕ ಆರೋಪಿಸಿದ್ದಾನೆ.
ನೀನು ಜೀವನದಲ್ಲಿ ನನ್ನ ನೆನಸಿಕೊಳ್ಳಬೇಕು ಹಾಗೆ ಮಾಡುತ್ತೇನೆ ಎಂದು ಪೊಲೀಸ್ ಠಾಣೆಗೆ ಬಾರೊ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಯುವಕನಿಗೆ ಬೆದರಿಕೆ ಹಾಕಿ ತನ್ನದೆ ತಪ್ಪು ಎಂದು ಮುಚ್ಚಳಿಕೆ ಬರೆಸಿಕೊಂಡು ಪೊಲೀಸರು ವಾಪಸ್ ಕಳಿಸಿದ್ದಾರೆ. ಸದ್ಯ ಇದೀಗ ವಿಜಯನಗರ ಸಂಚಾರ ಠಾಣೆಯ ಸಿಬ್ಬಂದಿಯ ವಿಡಿಯೋ ವೈರಲ್ ಆಗುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post