ಆಟೋದಲ್ಲಿ ಧೂಮಪಾನ ಮಾಡುವುದನ್ನು ವಿರೋಧಿಸಿದ ಮಹಿಳೆಗೆ ಬ್ಯಾಂಕ್ ಅಧಿಕಾರಿಯೊಬ್ಬರು ಥಳಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಫರಿದಾಬಾದ್‌ನ ಬಲ್ಲಭಗಢದ ನಿವಾಸಿ ವಾಸು ಸಿಂಗ್ ಹಲ್ಲೆ ಮಾಡಿರುವ ಬ್ಯಾಂಕ್ ಅಧಿಕಾರಿ. ಇನ್ನು ಹಲ್ಲೆಗೆ ಒಳಗಾಗಿರುವ ಮಹಿಳೆ ಹೆಸರು ಸುಮನ್ ಲತಾ. ಇವರು ದೆಹಲಿಯ ವಜೀರಾಬಾದ್‌ನ ನಿವಾಸಿ. ಸದ್ಯ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಲತಾ, ಸೋಮವಾರ ಸಂಜೆ ಆಟೋದಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಸಂತ್ರಸ್ತೆ ಲತಾ ಹೇಳಿರುವ ಪ್ರಕಾರ, ಗ್ರೀನ್‌ವುಡ್ ಸಿಟಿಯಲ್ಲಿ ನಾನು ಆಟೋ ಹತ್ತಿದೆ. ಆಟೋದಲ್ಲಿದ್ದ ವ್ಯಕ್ತಿ ಧೂಮಪಾನ ಮಾಡುತ್ತಿದ್ದ. ಆಟೋದಲ್ಲಿ ಸಿಗರೇಟ್ ಸೇದಬೇಡಿ. ನನಗೆ ತೊಂದರೆ ಆಗುತ್ತದೆ ಎಂದು ಮನವಿ ಮಾಡಿಕೊಂಡೆ. ಆದರೆ ಆ ವ್ಯಕ್ತಿ ಧಮ್ ಎಳೆಯೋದನ್ನ ನಿಲ್ಲಿಸಲಿಲ್ಲ. ಅದರಿಂದ ನನಗೆ ಕೋಪ ಬಂತು. ಹೀಗಾಗಿ ನಾನು ಸಿಗರೇಟ್ ಕಿತ್ತು ಗಾಡಿಯಿಂದ ಹೊರಗೆ ಎಸೆದ. ಆಗ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಸದ್ಯ ಪೊಲೀಸರು ವಾಸು ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ 323, 325, 509 ದೂರು ದಾಖಲಿಸಿಕೊಂಡು ಬಂದಿಸಿದ್ದರು. ಸದ್ಯ ಆತ ಬೇಲ್ ಪಡೆದು ಹೊರ ಬಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post