ಬೆಂಗಳೂರು: ಮಹಿಳೆಯರು ಉಡುಪು ಧರಿಸುವುದು ಅವರ ವೈಯಕ್ತಿಕ ವಿಚಾರ ಅದರ ಬಗ್ಗ ನಾನೇನು ಮಾತನಾಡೋದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ನಿನ್ನೆ ಪ್ರಿಯಾಕಾ ಗಾಂಧಿ ಅವರ ಹೇಳಿಕೆಗೆ ಮಾತ್ರ ನಾನು ಪ್ರತಿಕ್ರಿಯಿಸಿದ್ದೇನೆ. ಯಾರಾದ್ರು ಶಾಲೆ, ಕಾಲೇಜಿಗೆ ಬಿಕಿನಿ ತೊಟ್ಟು ಹೋಗ್ತಾರಾ..? ಅವರು ಹೇಳಿದ್ದು ತಪ್ಪು ಈ ವಿಚಾರವಾಗಿ ಮಾತ್ರ ನಾನು ಮಾತನಾಡಿದ್ದೇನೆ. ಆದರೆ ನನ್ನ ಮಾತಿನಿಂದ ಯಾರಿಗಾದರು ನೋವಾಗಿದ್ದರೆ ಕ್ಷಮೆ ಇರಲಿ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಿಳೆಯರು ಹಾಕುವ ಬಟ್ಟೆಯಿಂದ ಕೆಲವರು ಉದ್ರೇಕಿತರಾಗ್ತಾರೆ -ರೇಣುಕಾಚಾರ್ಯ
ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಗೆ ಸಂಬಧಿಸಿದಂತೆ ಮಾತನಾಡಿದ ರೇಣುಕಾಚಾರ್ಯ, ಈಶ್ವರಪ್ಪ ಅವರು, ನಮ್ಮ ಹಿರಿಯ ನಾಯಕರು. ಅವರ ಹೇಳಿಕೆ ಬಗ್ಗೆ ನಾನು ಮಾತನಾಡಲ್ಲ ಹಾಗೂ ಆ ವಿಚಾರ ಕುರಿತಂತೆ ನನಗೆ ಮಾಹಿತಿ ಇಲ್ಲ ಎಂದು ರೇಣುಕಾಚಾರ್ಯ ಜಾರಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post