ಬೆಂಗಳೂರು: ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಅವರ ನಡುವೆ, ಇಂದು ನಡೆದ ವಾಕ್ ಸಮರ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದು, ಬಚ್ಚೇಗೌಡ ಕುಟುಂಬದ ಬಗ್ಗೆ ಕಿಡಿಕಾರಿದ್ದಾರೆ.
ಬಡವರಿಗೆ, ಹರಿಜನರಿಗೆ ಸರ್ಕಾರ ಕೊಟ್ಟಿದ್ದ ಭೂಮಿಯನ್ನು ಗೂಂಡಾಗಿರಿ ಮಾಡಿ ಆ ಕಾಲದಿಂದಲೂ ಭೂ ಕಬಳಿಕೆ ಮಾಡಿದ್ದಾರೆ. ಇದುವರೆಗೂ ಅವರಿಗೆ ಏನು ಕೊಟ್ಟಿಲ್ಲ. ಈಗ ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಆದರೆ ಇದಕ್ಕೆ ಕೋರ್ಟ್ನಿಂದ ತಡೆ ತಂದಿದ್ದಾರೆ. ಗೂಂಡಾಗಿರಿ ಮಾಡಿರೋದು ಇವ್ರು, ಆ ಕಾಲದಿಂದಲೂ ಇದನ್ನೇ ಮಾಡಿದ್ದಾರೆ ಎಂದು ಎಂಟಿಬಿ ಗರಂ ಆಗಿದ್ದಾರೆ.
ಇದನ್ನೂ ಓದಿ: ಶರತ್ ಬಚ್ಚೇಗೌಡ Vs ಎಂಟಿಬಿ ನಡುವೆ ಜಟಾಪಟಿ -ಪರಸ್ಪರ ಕೈ ಕೈ ಮಿಲಾಯಿಸೋ ಹಂತಕ್ಕೆ ಗಲಾಟೆ
ಇನ್ನು ಮುಂದುವರೆದು ಮಾತನಾಡಿದ ಅವರು ಸದ್ಯ ಇವರ ಮೇಲೆ ಕೋರ್ಟ್ನಲ್ಲಿ ಗೂಂಡಾಗಿರಿ ಕೇಸ್ಗಳಿವೆ. ಸಾಕಷ್ಟು ಕೊಲೆ ಆರೋಪಗಳಿವೆ. ಅವರು ಬೇಕಾದ್ರೆ ಬರಲಿ ನಾನು ಅದನ್ನು ದಾಖಲೆ ಸಮೇತ ಬಹಿರಂಗಗೊಳಿಸ್ತೇನೆ. ಇವರು ಮಾಡಿರೋ ಭೂಕಬಳಿಕೆ, ಗೂಂಡಾಗಿರಿ ಒಂದೆರಡಲ್ಲ. ದಾಖಲೆ ಸಮೇತ ಬರ್ತೇನೆ ಬೇಕಾದ್ರೆ ಅವರು ಬರಲಿ. ನಾನು ನೀಡುವ ದಾಖಲೆಗಳು ಸುಳ್ಳಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವರು ಸವಾಲ್ ಹಾಕಿದ್ದಾರೆ.
ಇದನ್ನೂ ಓದಿ:‘ಬಚ್ಚೇಗೌಡ ಕುಟುಂಬ ಎಷ್ಟೋ ಜನರನ್ನು ಕೊಂದಿದೆ’ -ಸಚಿವ ಎಂಟಿಬಿ ನಾಗರಾಜ್ ಗಂಭೀರ ಆರೋಪ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post