ಕಲರ್ಸ್ನ ಫ್ಯಾಮಿಲಿಯ ಮತ್ತೊಬ್ಬ ಸದಸ್ಯರು ಜ್ಹೀ ಕುಟುಂಬಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡ್ರಾಮಾ ಜೂನಿಯರ್ಸ್ ಸೀಸನ್ 4ಗೆ ನಟ ವಿ.ರವಿಚಂದ್ರ ಅವ್ರು ಬರ್ತಿದ್ದು, ಜಡ್ಜ್ ಸೀಟ್ ಅಲಂಕರಿಸಲಿದ್ದಾರೆ.
ಅಂದ್ಹಾಗೆ, ಈ ಹಿಂದೆ ಸರಿಗಮಪನಲ್ಲಿ ಜಡ್ಜ್ ಆಗಿ ಹಲವು ಸೀಸನ್ಗಳಲ್ಲಿ ಕಾಣಿಸಿಕೊಂಡಿದ್ದ ರಾಜೇಶ್ ಕೃಷ್ಣನ್ ಅವ್ರು ಎದೆ ತುಂಬಿ ಹಾಡುವೆನು ಶೋಗೆ ಜಡ್ಜ್ ಆಗಿ ಬಂದು ಕಲರ್ಸ್ ಜೊತೆ ಅನುಬಂಧ ಬೆಳೆಸಿದ್ರು. ನಂತರ ಕಲರ್ಸ್ ಕನ್ನಡದ ಸೂಪರ್ ಮಿನಿಟ್ನಿಂದ ಗೋಲ್ಡನ್ ಗೂಡಿಗೆ ಎಂಟ್ರಿ ಕೊಟ್ಟವ್ರು ಗೋಲ್ಡನ್ ಸ್ಟಾರ್ ಗಣೇಶ್. ಇನ್ನೂ ಇತ್ತೀಚಿಗೆ ನಟ ವಿಜಯ್ರಾಘವೇಂದ್ರ ಕೂಡ ಝೀ ಕುಟುಂಬದಿಂದ ಕಲರ್ಸ್ ಫ್ಯಾಮಿಲಿಗೆ ಜಂಪ್ ಆಗಿದ್ರು. ಈಗ ರವಿ ಸರ್ ಸರದಿ.
ಇನ್ನು ತಕಧಿಮಿತ, ಡಾನ್ಸಿಂಗ್ ಸ್ಟಾರ್ ಹೀಗೆ ಕಲರ್ಸ್ನ ಹಲವು ಶೋಗಳಿಗೆ ಜಡ್ಜ್ ಆಗಿದ್ದ ರವಿ ಸರ್ ಈಗ ಜ್ಹೀ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆ ಕುಟುಂಬಂದಿದ್ದ ಈ ಕುಟುಂಬಕ್ಕೆ ಸ್ಟಾರ್ಗಳು ಎಕ್ಸ್ಚೆಂಜ್ ಆಗ್ತಿರೋದು ವಿಶೇಷ.
ಡ್ರಾಮಾ ಜುನಿಯರ್ಸ್ ಸೀಸನ್ 4ಗೆ ರವಿಚಂದ್ರ ಅವ್ರು ಬರೋದು ಕನ್ಫರ್ಮ್ ಆಗಿದೆ. ಆದ್ರೇ ಇನ್ನಿಬ್ಬರು ಜಡ್ಜ್ ಯಾರು ಎಂಬ ಪ್ರಶ್ನೆಗೆ ಒಂದು ಮೂಲದ ಪ್ರಕಾರ ಈ ಹಿಂದೆ ಜಡ್ಜ್ ಆಗಿದ್ದ ಹಿರಿಯನಟಿ ಲಕ್ಷ್ಮೀ ಅವ್ರು ಹಾಗೂ ಹಿರಿಯನಟ ಮುಖ್ಯಮಂತ್ರಿ ಚಂದ್ರು ಅವ್ರು ಮರಳಲಿದ್ದಾರೆ ಎಂಬ ಸುದ್ದಿ ಇದೆ. ಪಕ್ಕಾ ಇನ್ಫಾರ್ಮೇಶನ್ನ್ನ ಇನ್ನೆರಡು ದಿನಗಳಲ್ಲಿ ನಾವೇ ನೀಡ್ತಿವಿ.
ಒಟ್ಟಿನಲ್ಲಿ ಡ್ರಾಮಾ ಜುನಿಯರ್ಸ್ ನಾವು ಪಕ್ಕಾ ಡ್ರಾಮಾ ಪಂಟ್ರು ಅಂತಾ ಸಖತ್ ಎನರ್ಜಿಯಲ್ಲಿ ಸಜ್ಜಾಗಿದ್ದಾರೆ. ಈಗಾಗಲೇ ರಾಜ್ಯಾಂದ್ಯಂತ ಆಡಿಶನ್ಸ್ ಆಗಿದ್ದು, ಡ್ರಾಮಾ ಕ್ವಿನ್ಸ್ ಅಂಡ್ ಕಿಂಗ್ಸ್ ನಿಮ್ಮ ಮನೆಗೆ ಕಾಲಿಡಲು ಇನ್ನೇನಿದ್ದರು ಒಂದೇ ಹೆಜ್ಜೆ ಬಾಕಿ ಇದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post