ವೆಸ್ಟ್ ಇಂಡೀಸ್ನ ಖ್ಯಾತ ಸ್ಫೋಟಕ ಆಟಗಾರ ಕ್ರಿಕೆಟಿಗ ಕಾರ್ಲೋಸ್ ಬ್ರಾಥ್‌ವೈಟ್, ತಮ್ಮ ಮಗಳಿಗೆ ಭಾರತದ ಕ್ರಿಕೆಟ್ ಮೈದಾನದ ಹೆಸರನ್ನ ನಾಮಕರಣ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.
ಇತ್ತೀಚಿಗೆ ಬ್ರಾಥ್‌ವೈಟ್ ದಂಪತಿಗೆ ಇಂದು ಮುದ್ದಾದ ಹೆಣ್ಣು ಮಗು ಜನಿಸಿದೆ. ಆ ಮಗುವಿಗೆ ಬ್ರಾಥ್‌ವೈಟ್ ಕೊಲ್ಕತ್ತದ ಈಡನ್ ಗಾಡರ್ನ್ ಹೆಸರನ್ನು ನೆನಪಿಸುವಂತೆ ‘ಈಡನ್ ರೋಸ್’ ಎಂದು ನಾಮಕರಣ ಮಾಡಿದ್ದಾರೆ. ಅದು 2016 ಟಿ-20 ವಿಶ್ವಕಪ್ ಸಮಯ ಅವತ್ತು ಫೈನಲ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಭಾರತದ ನೆಲದಲ್ಲಿ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಹಣಾಹಣಿ ನಡೆಸಿದ್ದವು.
ಈ ಪಂದ್ಯ ಇನ್ನೇನು ಇಂಗ್ಲೆಂಡ್ ತಂಡದ ಪಾಲಾಗುತ್ತೆ ಅನ್ನೋವಷ್ಟರಲ್ಲಿ ಬ್ರಾಥ್‌ವೈಟ್ ಪಂದ್ಯದ ಗತಿಯನ್ನೇ ಬದಲಿಸಿ ವಿಶ್ವಕಪ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದ ಫೈನಲ್ ಫೈಟ್ನಲ್ಲಿ ಇಂಡೀಸ್ ಗೆಲ್ಲಲು ಬ್ರಾಥ್‌ವೈಟ್ ಅಪೂರ್ವ ಕಾಣಿಕೆಯನ್ನು ನೀಡಿದ್ದರು. ಬ್ರಾಥ್‌ವೈಟ್ 10 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಒಂದು ಬೌಂಡರಿ ಸಹಿತ 34 ರನ್ ಗಳಿಸುವ ಮೂಲಕ ವೆಸ್ಟ್ ಇಂಡೀಸ್ ವಿಶ್ವಕಪ್ನ್ನು ತಮ್ಮದಾಗಿಸಿಕೊಳ್ಳಲು ಮಹತ್ತರ ಪಾತ್ರ ವಹಿಸಿದ್ದರು.
ಈ ಅಂತಿಮ ಹಣಾಹಣಿಯಲ್ಲಿ ಸ್ಫೋಟಕ ಪ್ರದರ್ಶನ ನೀಡಿದ್ದ ಬ್ರಾಥ್‌ವೈಟ್ ತಮ್ಮ ಆಟದಿಂದ ಅಂದು ಎಲ್ಲರು ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು. ಅಷ್ಟೇ ಅಲ್ಲದೆ ಕಾರ್ಲೋಸ್ ಬ್ರಾಥ್‌ವೈಟ್ ಎಂಬ ಹೆಸರು ಕ್ರಿಕೆಟ್ ಡಿಕ್ಷನರಿಯಲ್ಲಿ ದಾಖಲಾಗುವಂತೆ ಮಾಡಿತ್ತು. ಇದರಿಂದ ಈಡನ್ ಗಾರ್ಡನ್ ಮೇಲೆ ವಿಶೇಷ ಅಭಿಮಾನ ಮತ್ತು ಪ್ರೀತಿ ಹೊಂದಿದ್ದ ಬ್ರಾಥ್‌ವೈಟ್ ತನಗೆ ಹೆಸರು ಹಾಗೂ ತನ್ನ ತಂಡಕ್ಕೆ ವಿಶ್ವಕಪ್ ತಂದುಕೊಟ್ಟ ಈ ನೆಲದ ಮೈದಾನದ ಹೆಸರನ್ನು ತಮ್ಮ ಮಗಳಿಗೆ ಇಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post