ಚತ್ತೀಸ್ಘಡ: ಮದುವೆಯಾದ ಕೆಲ ಹೊತ್ತಲ್ಲೇ ವಧು ತನ್ನ ಪ್ರಿಯಕರನೊಂದಿಗೆ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಚತ್ತೀಸ್ಘಡದ ದಾಂತೇವಾಡದಲ್ಲಿ ನಡೆದಿದೆ. ಫೆಬ್ರವರಿ 6 ರಂದು ಹುಡುಗಿಯ ವಿವಾಹವಾಗಿತ್ತು. ವಿವಾಹದ ವಿಧಿವಿಧಾನಗಳು ಮುಗಿದ ನಂತರ, ವರನೊಂದಿಗೆ ಆತನ ಮನೆಗೆ ತೆರಳಿದಳು.
ಆದ್ರೆ, ಮಾರ್ಗ ಮಧ್ಯದಲ್ಲಿ, ವಧು ಶೌಚಾಲಯಕ್ಕೆಂದು ಹೋಗಿ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ವಧು ನಾಪತ್ತೆಯಾಗಿರುವುದು ಅತ್ತೆ-ಮಾವಂದಿರಲ್ಲಿ ಆತಂಕ ಉಂಟುಮಾಡಿದೆ. ಈ ಹಿನ್ನೆಲೆ ವಧು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಪೊಲೀಸರು ವಧು ಮತ್ತು ಆಕೆಯ ಪ್ರಿಯಕರನನ್ನು ಹಿಡಿದು ಬಂಧಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post