ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟ್ಸ್ ಮನ್ ಆಗಿಯೂ ಹಾಗೂ ಉತ್ತಮ ಬ್ಯಾಟ್ಸ್ಮನ್ ಆಗಿಯೂ ಗಮನ ಸೆಳೆದಿರುವ ದೀಪಕ್ ಚಹರ್, ಇಂದು ನಡೆದ ಮೆಗಾ ಹರಾಜಿನಲ್ಲಿ ಧಮಾಕಾ ಸೃಷ್ಟಿಸಿದ್ದಾರೆ. ಚಹರ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತಕ್ಕೆ ಬಿಕರಿಯಾದ ಆಟಗಾರ ಎನ್ನಿಸಿಕೊಂಡಿದ್ದಾರೆ.
Back where he belonged – Chahar back in yellow💛💵
Congratulations @ChennaiIPL @deepak_chahar9 #TATAIPLAuction @TataCompanies pic.twitter.com/FTxUrcID6H— IndianPremierLeague (@IPL) February 12, 2022
ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ 15ನೇ ಆವೃತ್ತಿಯ ಮೆಗಾ ಹರಾಜಿನಲ್ಲಿ ಸಾಕಷ್ಟು ಆಟಗಾರರು ಕೋಟಿಗಳ ಲೆಕ್ಕದಲ್ಲಿ ಮಾರಾಟವಾಗಿದ್ದಾರೆ. ಆ ಸಾಲಿಗೆ ಇದೀಗ ಆಲ್ರೌಂಡರ್ ದೀಪಕ್ ಚಹರ್ ಕೂಡ ಸೇರಿಕೊಂಡಿದ್ದಾರೆ. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 14 ಕೋಟಿ ರೂಪಾಯಿ ನೀಡಿ ಖರೀದಿಸಿದ್ದಾರೆ. ಆದರೆ ಸಿಎಸ್ಕೆ ಈ ಮೊದಲು ಇತಿಹಾಸದಲ್ಲಿ ಇಷ್ಟು ಮೊತ್ತಕ್ಕೆ ಯಾವ ಆಟಗಾರರನ್ನು ಖರೀದಿ ಮಾಡಿಲ್ಲವಂತೆ.
ಇದನ್ನೂ ಓದಿ:ಕೇವಲ 2 ಐಪಿಎಲ್ ಪಂದ್ಯಗಳನ್ನಾಡಿರೋ ಪ್ಲೇಯರ್ಗೆ ₹10 ಕೋಟಿ ಸುರಿದ RCB
ಈ ಹಿಂದೆ 2008 ರಲ್ಲಿ ಸಿಎಸ್ಕೆ ಬಳಗ ಮಹೇಂದ್ರ ಸಿಂಗ್ ಧೋನಿ ಅವರನ್ನ 11 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಧೋನಿ ಸಿಎಸ್ಕೆಯಲ್ಲಿಯೇ ಉಳಿದುಕೊಂಡಿದ್ದಾರೆ. ಜೊತೆಗೆ 16 ಕೋಟಿಯೊಂದಿಗೆ ಈ ಆವೃತ್ತಿಯಲ್ಲಿ ಕೂಡ ಧೋನಿಯನ್ನು ಸಿಎಸ್ಕೆ ರಿಟೇನ್ಡ್ ಮಾಡಿಕೊಂಡಿತ್ತು. ಸದ್ಯ ದೀಪಕ್ ತಮ್ಮ ಮೊದಲಿನ ತಂಡಕ್ಕೆ ಅಚ್ಚರಿಯ ಮೊತ್ತದೊಂದಿಗೆ ಕಂಬ್ಯಾಕ್ ಮಾಡಿದ್ದು, ಸಿಎಸ್ಕೆ ಇತಿಹಾಸದಲ್ಲಿ ಹರಾಜಿನಲ್ಲಿ ಖರೀದಿಯಾದ ಅತೀ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ದಾಖಲೆಯ ಮೊತ್ತಕ್ಕೆ ಬಿಕರಿಯಾದ ಜೇಸನ್ ಹೋಲ್ಡರ್.. RCB ಕನಸು ಭಗ್ನ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post